OpenAI; ಮರಳಿ ಓಪನ್‌ಎಐಗೆ ಸ್ಯಾಮ್‌ ಆಲ್ಟ್ಮನ್‌: ಸಿಲಿಕಾನ್‌ ವ್ಯಾಲಿಯಲ್ಲಿ ನಾಟಕೀಯ ಬೆಳವಣಿಗೆ


Team Udayavani, Nov 23, 2023, 5:55 AM IST

1-sadasd

ಕಳೆದ ಶುಕ್ರವಾರವಷ್ಟೇ ಚಾಟ್‌ಜಿಪಿಟಿಯ ಸಂಸ್ಥೆ ಓಪನ್‌ಎಐನ ಸಿಇಒ ಸ್ಥಾನದಿಂದ ವಜಾಗೊಂಡಿದ್ದ ಸ್ಯಾಮ್‌ ಆಲ್ಟ್ಮನ್‌ ಮರಳಿ ಗೂಡು ಸೇರಿಕೊಂಡಿದ್ದಾರೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಮಧ್ಯಸ್ಥಿಕೆ ಮತ್ತು ಕಂಪೆನಿಯ ಉದ್ಯೋಗಿಗಳ ಸಾಮೂಹಿಕ ರಾಜೀನಾಮೆಯ ಒತ್ತಡದಿಂದಾಗಿ ಓಪನ್‌ಎಐ ನಿರ್ದೇಶಕ ಮಂಡಳಿ ಸ್ಯಾಮ್‌ ಅವರನ್ನು ಮರಳಿ ಸಿಇಒ ಹುದ್ದೆಗೆ ಕರೆತಂದಿದೆ. ಈ ಮೂಲಕ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಎಲ್ಲ ಡ್ರಾಮಾಗಳು ಅಂತ್ಯಗೊಂಡಿವೆ.

ಏನಾಗಿತ್ತು?

ಕಳೆದ ಶುಕ್ರವಾರವಷ್ಟೇ ಗೂಗಲ್‌ಮೀಟ್‌ನಲ್ಲಿ ಸಭೆ ಸೇರಿದ್ದ ಓಪನ್‌ಎಐ ನಿರ್ದೇಶಕ ಮಂಡಳಿ, ಸ್ಯಾಮ್‌ ಆಲ್ಟ್ಮನ್‌ ಮತ್ತು ಅಧ್ಯಕ್ಷ ಗ್ರೆಗ್‌ ಬ್ರೋಕ್‌ಮನ್‌ ಅವರನ್ನು ವಜಾ ಮಾಡಿತ್ತು. ನಿರ್ದೇಶಕ ಮಂಡಳಿ ಜತೆಯಲ್ಲಿ ಸ್ಯಾಮ್‌ ಯಾವುದೇ ರೀತಿಯ ಸಂವಹನ ನಡೆಸುತ್ತಿರಲಿಲ್ಲ ಎಂದಿದ್ದ ನಿರ್ದೇಶಕರು, ನಿಮ್ಮ ಮೇಲೆ ನಮಗೆ ಭರವಸೆ ಇಲ್ಲ ಎಂದು ಹೇಳಿ ಸ್ಯಾಮ್‌ ಅವರನ್ನು ತೆಗೆದುಹಾಕಿತ್ತು. ಈ ಸುದ್ದಿ ಇಡೀ ಜಗತ್ತಿನಾದ್ಯಂತ ಸುದ್ದಿಯಾಗಿತ್ತು. ವಿಶೇಷವೆಂದರೆ ಸ್ಯಾಮ್‌ ಆಲ್ಟ್ಮನ್‌ ಮತ್ತು ಟೆಸ್ಲಾ ಮಾಲಕ ಎಲಾನ್‌ ಮಸ್ಕ್ ಇಬ್ಬರೂ ಲಾಭ ರಹಿತ ಸಂಸ್ಥೆಯಾಗಿ ಓಪನ್‌ಎಐ ಅನ್ನು ಕಟ್ಟಿದ್ದರು. ಇದರಲ್ಲಿ ಗ್ರೆಗ್‌ ಬ್ರೋಕ್‌ ಕೂಡ ಸಹ-ಸಂಸ್ಥಾಪಕ. ಅನಂತರದಲ್ಲಿ ಎಲಾನ್‌ ಮಸ್ಕ್, ಮಂಡಳಿ ನಿಯಮಗಳ ಹಿನ್ನೆಲೆಯಲ್ಲಿ ಈ ಸಂಸ್ಥೆಯಿಂದ ಹೊರಗೆ ಹೋಗಿದ್ದರು. ಸ್ಯಾಮ್‌ ಆಲ್ಟ್ಮನ್‌ ಅವರೇ ಓಪನ್‌ ಎಐ ಅನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು.

ಬೋರ್ಡ್‌ನಲ್ಲಿ ಇದ್ದವರು ಯಾರು?

ಸ್ಯಾಮ್‌ ಆಲ್ಟ್ಮನ್‌ ಮತ್ತು ಗ್ರೆಗ್‌ ಬ್ರೋಕ್‌ ಜತೆಯಲ್ಲಿ ಕಂಪೆನಿಯ ಮುಖ್ಯ ವಿಜ್ಞಾನಿ ಇಲ್ಯಾ ಸುಟ್ಸ್‌ಕೇವರ್‌, ಕೋರಾ ಸಿಇಒ ಆ್ಯಡಮ್‌ ಆ್ಯಂಗ್ಲೋ, ಜಿಯೋಸಿಮ್‌ ಸಿಸ್ಟಮ್ಸ್‌ನ ಮಾಜಿ ಸಿಇಒ ತಶಾ ಮೆಕೌÉಲಿ, ಜಾರ್ಜ್‌ಟೌನ್‌ನ ಸೆಕ್ಯುರಿಟಿ ಆ್ಯಂಡ್‌ ಎಮರ್ಜಿಂಗ್‌ ಸೆಂಟರ್‌ ನಿರ್ದೇಶಕ ಹೆಲೆನ್‌ ಟೋನರ್‌ ನಿರ್ದೇಶಕ ಮಂಡಳಿಯಲ್ಲಿ ಇದ್ದರು. ಸಾಮಾನ್ಯವಾಗಿ ಕಂಪೆನಿಗಳ ನಿರ್ದೇಶಕ ಮಂಡಳಿಯಲ್ಲಿ ಷೇರುದಾರರು, ಕಂಪೆನಿಯ ಒಳಗಿನವವರು ಇದ್ದರೆ, ಈ ಕಂಪೆನಿಯಲ್ಲಿ ಸಿಲಿಕಾನ್‌ ವ್ಯಾಲಿಯ ಘಟಾನುಘಟಿಗಳನ್ನು, ತಜ್ಞರನ್ನು ನಿರ್ದೇಶಕರನ್ನಾಗಿ ಮಾಡಲಾಗಿತ್ತು. ಈ ಮಂಡಳಿಗೆ ಗ್ರೆಗ್‌ ಬ್ರೋಕ್‌ ಅಧ್ಯಕ್ಷರಾಗಿದ್ದರು. ಕಳೆದ ಶುಕ್ರವಾರ ಗ್ರೆಗ್‌ ಮತ್ತು ಸ್ಯಾಮ್‌ ಇಬ್ಬರನ್ನೂ ನಿರ್ದೇಶಕ ಮಂಡಳಿ ವಜಾ ಮಾಡಿತ್ತು.

ಮೈಕ್ರೋಸಾಫ್ಟ್ ನಾದೆಳ್ಲ ಮಧ್ಯಸ್ಥಿಕೆ

ಓಪನ್‌ಎಐಗೆ ಸ್ಯಾಮ್‌ ಅವರನ್ನು ವಾಪಸ್‌ ಕರೆತರಲು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಗಂಭೀರ ಪ್ರಯತ್ನ ನಡೆಸಿದ್ದರು. ಈ ನಿಟ್ಟಿನಲ್ಲಿ ಹಿಂದಿನ ನಿರ್ದೇಶಕ ಮಂಡಳಿಗೂ ಒತ್ತಡ ಹಾಕಿದ್ದರು. ಸದ್ಯ ಓಪನ್‌ಎಐ ಕಂಪೆನಿಯಲ್ಲಿ ಮೈಕ್ರೋಸಾಫ್ಟ್ 13 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಿದೆ. ಹೀಗಾಗಿಯೇ ಓಪನ್‌ಎಐ ಷೇರುಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿವೆ. ಜತೆಗೆ ಈ ಕಂಪೆನಿಯಲ್ಲಿ ಸ್ಯಾಮ್‌ ಆಲ್ಟ್ಮನ್‌ ಇರಲೇಬೇಕು ಎಂಬುದು ಸತ್ಯ ನಾದೆಳ್ಲ ಅವರ ಅಪೇಕ್ಷೆಯಾಗಿತ್ತು.

ಸ್ಯಾಮ್‌ ವಜಾಗೊಂಡಾಗಲೇ ಸತ್ಯ ನಾದೆಳ್ಲ ಕಾರ್ಯೋನ್ಮುಖರಾಗಿದ್ದರು. ಮೊದಲಿಗೆ ಮಿರಾ ಮಿರಾತಿ ಅವರನ್ನು ಮಧ್ಯಾಂತರ ಸಿಇಒ ಮಾಡಿದಾಗಲೂ ಅವರು ಸ್ಯಾಮ್‌ ಅವರನ್ನೇ ವಾಪಸ್‌ ಕರೆಸಿಕೊಳ್ಳುವಂತೆ ಬೋರ್ಡ್‌ಗೆ ಆಗ್ರಹಿಸಿದ್ದರು. ರವಿವಾರ ಬೆಳಗ್ಗೆ ಸ್ಯಾಮ್‌ ವಾಪಸ್‌ ಆಗುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಆದರೆ ಮಧ್ಯಾಹ್ನದ ಹೊತ್ತಿಗೆ ಬೋರ್ಡ್‌, ಟ್ವಿಚ್‌ನ ಮಾಜಿ ಸಿಇಒ ಎಮ್ಮೆಟ್‌ ಶಿಯರ್‌ ಅವರನ್ನು ಮಧ್ಯಾಂತರ ಸಿಇಒ ಆಗಿ ನೇಮಕ ಮಾಡಿತ್ತು. ಅತ್ತ ಮೈಕ್ರೋಸಾಫ್ಟ್, ಸ್ಯಾಮ್‌ ಅವರನ್ನು ತನ್ನ ಕಂಪೆನಿಗೆ ಸೇರಿಸಿಕೊಳ್ಳುವ ಪ್ರಯತ್ನದಲ್ಲಿತ್ತು. ಜತೆಗೆ ಓಪನ್‌ಎಐನಿಂದ ಹೊರಬರುವ ಎಲ್ಲ ಉದ್ಯೋಗಿಗಳಿಗೂ ಉದ್ಯೋಗ ಕೊಡಲೂ ಮುಂದಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬಳಿಕ, ಓಪನ್‌ಎಐನಲ್ಲಿ ಹೊಸ ಬೋರ್ಡ್‌ ನೇಮಕವಾಗಿದೆ. ಈ ಬೋರ್ಡ್‌ ಬುಧವಾರ ಸ್ಯಾಮ್‌ ಅವರನ್ನು ವಾಪಸ್‌ ಕರೆಸಿಕೊಳ್ಳಲು ನಿರ್ಧಾರ ಮಾಡಿದೆ.

ಯಾರಿವರು ಸ್ಯಾಮ್‌ ಆಲ್ಟಮನ್‌?

ಸಿಲಿಕಾನ್‌ ವ್ಯಾಲಿಯ ಅತ್ಯದ್ಭುತ ಮತ್ತು ಅಪಾರ ಬುದ್ಧಿವಂತಿಕೆಯ ವ್ಯಕ್ತಿ ಈ ಸ್ಯಾಮ್‌ ಆಲ್ಟ್ಮನ್‌. ತನ್ನ ಎಐ ಮೂಲಕ ಟೆಕ್‌ ಜಗತ್ತನ್ನೇ ಒಮ್ಮೆ ಅಲ್ಲಾಡಿಸಿದ ಅಪ್ರತಿಮ ಚಾಣಾಕ್ಷ.

ಸ್ಯಾಮ್‌ ಆಲ್ಟ್ಮನ್‌ ಬಹುವಿಧದ ಬುದ್ಧಿವಂತಿಕೆಯ ಉದ್ಯಮಿ, ಹೂಡಿಕೆದಾರ ಮತ್ತು ಪ್ರೋಗ್ರಾಮರ್‌. 1985ರಲ್ಲಿ ಜನಿಸಿದ ಸ್ಯಾಮ್‌, ತಂತ್ರಜ್ಞಾನ, ನಾವಿನ್ಯತೆಯ ಬಗ್ಗೆ ಅಪಾರ ಆಸಕ್ತಿಯುಳ್ಳವರು. ಅಂದ ಹಾಗೆ ಇವರು ಸ್ಟಾಂಡ್‌ಫೋರ್ಡ್‌ ವಿವಿಯಲ್ಲಿ ಪದವಿ ಪಡೆದಿದ್ದಾರೆ. ಸ್ಯಾಮ್‌ ಅವರ ಮೊದಲ ಉದ್ಯಮ ಕೌಶಲ ಬಹಿರಂಗವಾದದ್ದು ಲೂಪ್ಟ್ ಎಂಬ ಸ್ಥಳ ಆಧಾರಿತ ಸೋಶಿಯಲ್‌ ನೆಟ್‌ವರ್ಕಿಂಗ್‌ ಸೈಟ್‌ ಮೂಲಕ. ಇದನ್ನು ತಮ್ಮ 19ನೇ ವಯಸ್ಸಿನಲ್ಲೇ ರೂಪಿಸಿದ್ದರು. 2012ರಲ್ಲಿ ಈ ಕಂಪೆನಿಯನ್ನು ಗ್ರೀನ್‌ ಡಾಟ್‌ ಕಾರ್ಪೋರೇಶನ್‌ಗೆ 43.4 ಮಿಲಿಯನ್‌ ಡಾಲರ್‌ಗೆ ಮಾರಾಟ ಮಾಡಿದ್ದರು.

ಇದಾದ ಬಳಿಕವು ಅವರು ಉದ್ಯಮಶೀಲತಾ ವೆಂಚರ್‌ನ ಆಚೆಯೂ ಪ್ರಭಾವ ಬೆಳೆಸಿಕೊಂಡಿದ್ದರು. 2014ರಿಂದ 2019ರ ವರೆಗೆ ವೈ ಕಾಂಪಿನೇಟರ್‌ ಎಂಬ ಸ್ಟಾರ್ಟ್‌ಅಪ್‌ ಪ್ರೋತ್ಸಾಹ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಇದು ಡ್ರಾಪ್‌ಬಾಕ್ಸ್‌, ಏರ್‌ನಬ್‌ ಮತ್ತು ರೆಡಿಟ್‌ನಂಥ ಕಂಪೆನಿಗಳಿಗೆ ಹೂಡಿಕೆ ಮಾಡಿದೆ. ಇದಷ್ಟೇ ಅಲ್ಲ, ವೈಯಕ್ತಿಕವಾಗಿಯೂ ಸ್ಯಾಮ್‌, 50ಕ್ಕೂ ಹೆಚ್ಚು ಯಶಸ್ವಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.

2015ರಲ್ಲಿ ಎಲಾನ್‌ ಮಸ್ಕ್ ಜತೆಗೆ ಸೇರಿಕೊಂಡು ಓಪನ್‌ಎಐ ಅನ್ನು ಹುಟ್ಟುಹಾಕಿದ್ದರು. ಇದು ಕೃತಕ ಬುದ್ಧಿಮತ್ತೆಯ ಸಂಶೋಧನ ಲ್ಯಾಬ್‌ ಆಗಿತ್ತು. ಮಾನವತೆಗೆ ಸಹಾಯ ಮಾಡುವ ಸಲುವಾಗಿ ಈ ಸಂಸ್ಥೆಯನ್ನು ಆರಂಭಿಸಲಾಗಿತ್ತು.

2019ರಲ್ಲಿ ವೈ ಕಾಂಬಿನೇಟರ್‌ ಬಿಟ್ಟ ಸ್ಯಾಮ್‌, ಓಪನ್‌ಎಐ ಮೇಲೆ ಹೆಚ್ಚು ಗಮನಹರಿಸಿದರು. ಇದರ ಚಾಟ್‌ಜಿಪಿಟಿ ಕಂಪ್ಯೂಟರ್‌ ಪ್ರೋಗ್ರಾಮ್‌ ಬರೆಯುವುದರಿಂದ ಹಿಡಿದು, ಇಮೇಜ್‌ ಕ್ರಿಯೇಶನ್‌, ಬರಹ, ಪದ್ಯ, ಕಥೆ ಎಲ್ಲವನ್ನೂ ಸೃಷ್ಟಿಸಿಕೊಡುತ್ತದೆ.

ಇಬ್ಬರು ಮಧ್ಯಾಂತರ ಸಿಇಒ

ಮೊದಲಿಗೆ ಕಂಪೆನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಮಿರಾ ಮಿರಾತಿ ಅವರನ್ನು ಮಧ್ಯಾಂತರ ಸಿಇಒ ಮಾಡಲಾಗಿತ್ತು. ರವಿವಾರವಷ್ಟೇ ನಿರ್ದೇಶಕ ಮಂಡಳಿಯ ಟ್ವಿಚ್‌ನ ಮಾಜಿ ಸಿಇಒ ಎಮ್ಮೆಟ್‌ ಶಿಯರ್‌ ಅವರನ್ನು ಮಧ್ಯಾಂತರ ಸಿಇಒ ಆಗುವಂತೆ ಆಹ್ವಾನ ನೀಡಿತ್ತು. ಇವರು ಇದಕ್ಕೆ ಒಪ್ಪಿಗೆಯನ್ನೂ ನೀಡಿದ್ದರು.

 

ಟಾಪ್ ನ್ಯೂಸ್

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.