Gaza ಸ್ಥಿತಿ ಭೀಕರ ; ನೀರಿಲ್ಲ, ಆಹಾರ ಕೊರತೆ, ವಿದ್ಯುತ್‌ ಸಮಸ್ಯೆ…

Team Udayavani, Oct 20, 2023, 6:05 AM IST

1-sdasd

ತನ್ನ ನೆಲದ ಮೇಲೆ ಹ‌ಮಾಸ್‌ ಉಗ್ರರು ದಾಳಿ ನಡೆಸಿದ ಬಳಿಕ, ಇಸ್ರೇಲ್‌ ಗಾಜಾಗೆ ಆಹಾರ, ನೀರು, ವಿದ್ಯುತ್‌ ಪೂರೈಕೆ ಬಂದ್‌ ಮಾಡಿದೆ. ಹೀಗಾಗಿ ಗಾಜಾ ಪ್ರದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಶುದ್ಧ ನೀರಿನ ಕೊರತೆ ಉಂಟಾಗಿದೆ. ಹಮಾಸ್‌ ಉಗ್ರರಿಗೆ ಆಶ್ರಯ ಕೊಟ್ಟ ಕಾರಣಕ್ಕೆ ಗಾಜಾ ಮೇಲೆ ಇಸ್ರೇಲ್‌ ದಾಳಿ ನಡೆಸುತ್ತಿದ್ದು, ಗಾಜಾ ಜನತೆ ತ್ರಿಶಂಕು ಸ್ಥಿತಿಗೆ ಸಿಲುಕಿದೆೆ.

ಶುದ್ಧ ನೀರಿನ ಅಭಾವ
ಗಾಜಾ ಪಟ್ಟಿಯ ಜನರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಇದು. ರಾಯಿಟರ್ಸ್‌ ವರದಿ ಪ್ರಕಾರ, ದಿನಕ್ಕೆ ಒಬ್ಬ ಮನುಷ್ಯನಿಗೆ ಬೇಕಾದ ಕನಿಷ್ಠ ಪ್ರಮಾಣದ ನೀರು ಇಲ್ಲಿ ಸಿಗುತ್ತಿಲ್ಲ. ಅಂದರೆ, ವಿಶ್ವ ಆರೋಗ್ಯ ಸಂಸ್ಥೆಯು ಒಬ್ಬ ಮಾನವನ ಬಳಕೆಗೆ ಇಂತಿಷ್ಟು ನೀರು ಬೇಕು ಎಂದು ನಿಗದಿ ಮಾಡಿದೆ. ಈಜಿಪ್ಟಿನ ಉತ್ತರ ಸಿನಾಯ್‌ ಪರ್ಯಾಯ ದ್ವೀಪದಿಂದ ಪೂರ್ವ ಮೆಡಿಟರೇನಿಯನ್‌ ಕರಾವಳಿಯುದ್ಧಕ್ಕೂ ಹರಿದು, ಗಾಜಾ ಮೂಲಕ ಇಸ್ರೇಲ್‌ಗೆ ಹರಿಯುವ ಕರಾವಳಿ ಜಲಾನಯನ ಪ್ರದೇಶವೇ ಇಲ್ಲಿನ ಎಲ್ಲರಿಗೂ ನೈಸರ್ಗಿಕ ನೀರಿನ ಆಧಾರ. ಜತೆಗೆ, ಗಾಜಾದಲ್ಲಿನ ಜನರ ನೀರಿನ ಅಗತ್ಯತೆತೆ ಅನುಗುಣವಾಗಿ ಹೆಚ್ಚು ಬೋರ್‌ವೆಲ್‌ಗಳನ್ನು ಬಳಸಿ ನೀರನ್ನು ತೆಗೆಯುತ್ತಿರುವುದರಿಂದ ಅಂತರ್ಜಲ ಮಟ್ಟವೂ ಹಾಳಾಗಿದೆ. ಜತೆಗೆ, ಈಗಿನ ಸಂಘರ್ಷ ಏಳುವ ಮುನ್ನವೇ ಇಲ್ಲಿನ ಶೇ.90ರಷ್ಟು ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಈಗ ಈಜಿಪ್ಟ್ ಕೂಡ ನೀರು ಸರಬರಾಜು ನಿಲ್ಲಿಸಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಇದಷ್ಟೇ ಅಲ್ಲ, ಇಸ್ರೇಲ್‌ ವಿದ್ಯುತ್‌ ಸರಬರಾಜು ನಿಲ್ಲಿಸಿರುವುದರಿಂದ, ಇಲ್ಲಿದ್ದ ಮೂರು ಉಪ್ಪು ನೀರು ಶುದ್ಧೀಕರಣ ಸೌಲಭ್ಯಗಳೂ ಕಾರ್ಯಾಚರಣೆ ನಿಲ್ಲಿಸಿವೆ. ಹೀಗಾಗಿ ನೀರಿನ ಸಮಸ್ಯೆಯಿಂದಲೇ ರೋಗಗಳು ಹರಡಬಹುದು ಎಂಬ ಆತಂಕವಿದೆ. ಸದ್ಯ ಅಮೆರಿಕ ಅಧ್ಯಕ್ಷರು ಇಸ್ರೇಲ್‌ಗೆ ಬಂದು ಹೋದ ಮೇಲೆ ನೀರು ಸರಬರಾಜು ಆರಂಭಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಆದರೂ ಇನ್ನೂ ಸಿಕ್ಕಿಲ್ಲ.

ಆಹಾರ ಕೊರತೆ
ಯುದ್ಧಕ್ಕೆ ಮೊದಲೇ ವಿಶ್ವ ಆಹಾರ ಕಾರ್ಯಕ್ರಮದ ಪ್ರಕಾರ ಇಲ್ಲಿನ ಶೇ.63ರಷ್ಟು ಜನಕ್ಕೆ ಸರಿಯಾಗಿ ಆಹಾರ ಸಿಗುತ್ತಿಲ್ಲ. ಸಂಗ್ರಹಾಗಾರದಲ್ಲಿದ್ದ ಗೋಧಿ ಇನ್ನು ಒಂದು ವಾರದ ವರೆಗೆ ಬರಬಹುದು. ಗೋಧಿ ಪುಡಿ ಮಾಡುವ ಐದು ಯಂತ್ರಗಳಲ್ಲಿ ಇನ್ನು ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಇಂಧನ ಕೊರತೆಯ ಕಾರಣದಿಂದಾಗಿ ಹಿಟ್ಟು ಅರೆಯಲು ಸಾಧ್ಯವಾಗುತ್ತಿಲ್ಲ.

ಪದಾರ್ಥಗಳ ಕೊರತೆಯಿಂದಾಗಿ ಸ್ಥಳೀಯ ಬೇಕರಿಗಳು ಕಾರ್ಯನಿರ್ವಹಿಸುತ್ತಿಲ್ಲ. ಒಂದು ವೇಳೆ ನಿಗದಿತ ಆಹಾರ ವಸ್ತು ಬೇಕೆಂದರೆ, ಬೇಕರಿ ಮುಂದೆ 10 ಗಂಟೆಗೂ ಹೆಚ್ಚು ಕಾಲ ಕ್ಯೂ ನಿಲ್ಲಬೇಕು. ಒಂದು ಕೆ.ಜಿ. ಬ್ರೆಡ್‌ ಅನ್ನು ಮನೆಯ 20ರಿಂದ 30 ಮಂದಿ ಹಂಚಿಕೊಂಡು ತಿನ್ನುವ ಸ್ಥಿತಿ ಬಂದಿದೆ. ಇನ್ನೂ ಕೆಲವರು ಮಕ್ಕಳಿಗೆ ಮಾತ್ರ ತಿನ್ನಿಸಿ, ಒಂದು ಬಾರಿ ಮಾತ್ರ ಇವರು ತಿನ್ನುತ್ತಿದ್ದಾರೆ. ವಿಶ್ವಸಂಸ್ಥೆ ಸ್ವಲ್ಪ ಪ್ರಮಾಣದ ಬ್ರೆಡ್‌ ಅನ್ನು ವಿತರಿಸಿದೆ. ಒಟ್ಟಾರೆಯಾಗಿ ಆಹಾರದ ಸಮಸ್ಯೆ ಹೆಚ್ಚಾಗಿದೆ ಕಾಡುತ್ತಿದೆ.

ವಿದ್ಯುತ್‌ ಸಮಸ್ಯೆ
ಗಾಜಾ ಪಟ್ಟಿಯು ಎರಡು ಪ್ರಮುಖ ವಿದ್ಯುತ್‌ ಮೂಲಗಳನ್ನು ಹೊಂದಿದೆ, ಗಾಜಾ ವಿದ್ಯುತ್‌ ಸ್ಥಾವರ ಮತ್ತು ಇಸ್ರೇಲ್‌ನಿಂದ ಬರುವ ವಿದ್ಯುತ್‌. ಯುದ್ಧ ಆರಂಭವಾದ ಅನಂತರ ಇಸ್ರೇಲ್‌ ವಿದ್ಯುತ್‌ ಸರಬರಾಜು ನಿಲ್ಲಿಸಿದೆ. ಇನ್ನು ಗಾಜಾದಲ್ಲಿದ್ದ ಸ್ಥಾವರವು ಇಂಧನ ಖಾಲಿಯಾದ ಕಾರಣ ಮುಚ್ಚಿದೆ. ಆಸ್ಪತ್ರೆಗಳಿಗೂ ವಿದ್ಯುತ್‌ ಸರಬರಾಜು ಆಗದ ಕಾರಣ, ಸಾವಿರಾರು ಜೀವಗಳಿಗೆ ಅಪಾಯ ಉಂಟಾಗಿದೆ. ಜನರೇಟರ್‌ ಬಳಕೆಯೂ ಕಡಿಮೆಯಾಗುತ್ತಾ ಬಂದಿದೆ. ಜತೆಗೆ, ವಿದ್ಯುತ್‌ ಇಲ್ಲದ ಕಾರಣ, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇರುವವರ ರಕ್ಷಣ ಕಾರ್ಯಾಚರಣೆ ಮಾಡಲೂ ಸಾಧ್ಯವಾಗಿಲ್ಲ.

ಔಷಧ ಸಮಸ್ಯೆ
ಗಾಜಾದ ಜನಸಂಖ್ಯೆಯ ಸುಮಾರು ಶೇ.63 ಜನರು ಆಹಾರ, ಔಷಧ ಮತ್ತು ಇತರ ಮೂಲಭೂತ ಸೇವೆಗಳಿಗಾಗಿ ವಿಶ್ವಸಂಸ್ಥೆ ಮತ್ತು ಇತರ ಸಹಾಯ ಗುಂಪುಗಳನ್ನು ಅವಲಂಬಿಸಿ ದ್ದಾರೆ. ಈಜಿಪ್ಟ್ ಮತ್ತು ಗಾಜಾ ನಡುವಿನ ರಾಫಾ ಕ್ರಾಸಿಂಗ್‌ ಅನ್ನು ಒಂದು ವಾರದವರೆಗೆ ಮುಚ್ಚುವುದರೊಂದಿಗೆ ಅಗತ್ಯ ವಸ್ತುಗಳ ಸರಬರಾಜು ಆಗುತ್ತಿಲ್ಲ. ಇಲ್ಲಿಗೆ ನೆರವಿನ ಸಾಮಗ್ರಿಗಳನ್ನು ತಲುಪಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಪ್ರಮಾಣದ ಒತ್ತಡ ಹೆಚ್ಚಾಗಿದ್ದರೂ, ಆಗಿಲ್ಲ. ಇನ್ನು ಔಷಧಗಳ ಕೊರತೆಯಿಂದಾಗಿ ಡಯಾಲಿಸಿಸ್‌ನಂಥ ಚಿಕಿತ್ಸೆ ಪಡೆಯುತ್ತಿರುವವರ ಸಮಸ್ಯೆಯೂ ಉಲ್ಬಣಗೊಂಡಿದೆ. ರಕ್ತ ಬ್ಯಾಂಕ್‌ಗಳಲ್ಲಿಯೂ ರಕ್ತದ ಸಂಗ್ರಹವಿಲ್ಲ.

ಗಾಜಾ ಎಂಬ ಓಪನ್‌ ಜೈಲ್‌
40ರ ದಶಕದಿಂದಲೂ ಇಸ್ರೇಲ್‌ ಮತ್ತು ಪ್ಯಾಲೇಸ್ತೀನ್‌ ಸಂಘರ್ಷ ಮುಂದುವರಿದಿದೆ. ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ನ ಜನರಿಗೆ ನೆಮ್ಮದಿ ಎಂಬುದೇ ಸಿಗುತ್ತಿಲ್ಲ. ಗಾಜಾ ಪಟ್ಟಿಯನ್ನು ವಿಶ್ವದ ಅತ್ಯಂತ ದೊಡ್ಡ ತೆರೆದ ಜೈಲು ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ, ಯಾವ ಕಡೆಗೂ ಹೋಗಲು ಸಾಧ್ಯವಾಗದೇ, ಒಂದು ರೀತಿಯಲ್ಲಿ ದಿಗ್ಬಂಧನದಲ್ಲಿ ಈ ಪ್ರದೇಶದ ಮಂದಿ ಬದುಕುತ್ತಿದ್ದಾರೆ. ಈಗ ಇಲ್ಲಿನ ಸ್ಥಿತಿಯೂ ಚಿಂತಾಜನಕವಾಗಿದೆ. ಹಮಾಸ್‌ ಉಗ್ರರಿಗೆ ಆಶ್ರಯ ಮತ್ತು ಅವರನ್ನು ಸದೆಬಡಿಯುವ ದೃಷ್ಟಿಯಿಂದ ಇಸ್ರೇಲ್‌ ಅ.7ರಿಂದಲೂ ನಿರಂತರವಾಗಿ ದಾಳಿ ನಡೆಸುತ್ತಿದೆ. ಜತೆಗೆ ನೀರು, ಆಹಾರ, ವಿದ್ಯುತ್‌ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯನ್ನು ನಿಲ್ಲಿಸಿದೆ. ಒಂದು ಕಡೆ ದಾಳಿ, ಮತ್ತೊಂದು ಕಡೆ ಕುಡಿಯಲು ನೀರು, ತಿನ್ನಲು ಆಹಾರ, ಔಷಧಗಳ ಕೊರತೆಯ ಕಾರಣದಿಂದಾಗಿ ಗಾಜಾ ಪಟ್ಟಿಯಲ್ಲಿ ಮಾನವೀಯ ಬಿಕ್ಕಟ್ಟು ತಲೆದೋರಿದೆ.

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.