ಕಾಶಿಯಾತ್ರೆ ಹೋಗುವವರಿಗೆ ರಾಜ್ಯ ಸರಕಾರದ ಸಹಾಯಧನ
Team Udayavani, Nov 14, 2022, 8:10 AM IST
ಭಾರತ್ ಗೌರವ ಕಾಶಿ ಯಾತ್ರೆಯನ್ನು ನೀವು ಕೈಗೊಳ್ಳಬಹುದು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ “ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನ್’ ರೈಲನ್ನು ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನ.11ರಂದು ಚಾಲನೆ ನೀಡಿ ದ್ದಾರೆ. ಈ ಪ್ಯಾಕೇಜ್ 20 ಸಾವಿರ ರೂ. ಆಗಿದ್ದು,5 ಸಾವಿರ ರೂ.ಗಳನ್ನು ರಾಜ್ಯ ಸರಕಾರ ಸಹಾಯ ಧನ ನೀಡಲಿದೆ.3 ಟಯರ್ ಎಸಿ ವ್ಯವಸ್ಥೆ ಹೊಂದಿದ್ದು, ಇರುವ 14 ಬೋಗಿಗಳ ಮೇಲೂ ರಾಜ್ಯದ 28 ದೇಗುಲಗಳ ಛಾಯಾಚಿತ್ರ ಬಿಡಿಸಲಾಗಿದೆ.
ಎಲ್ಲಿಂದ ಎಲ್ಲಿಗೆ ಸಂಚಾರ?
ಬೆಂಗಳೂರಿನಿಂದ ರೈಲು ಹೊರಡಲಿದೆ. ಉತ್ತರ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ಇದೆ. ಬೀರೂರು, ಹಾವೇರಿ, ಬೆಳಗಾವಿ, ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯ ಮತ್ತು ಪ್ರಯಾಗ್‌ರಾಜ್‌ಗೆ ಸಂಚರಿಸಲಿದೆ.
ಕೆಎಸ್‌ಟಿಡಿಸಿ, ಐಆರ್‌ಸಿಟಿಸಿ ಬುಕ್ಕಿಂಗ್ ಹೇಗೆ?
8 ದಿನಗಳ ದರ್ಶನದ ಪ್ಯಾಕೇಜ್ ಇದಾಗಿದೆ. ಈ ಪ್ಯಾಕೇಜ್ ದರ 20 ಸಾವಿರ ರೂ. ಇದ್ದು, ಸರಕಾರದಿಂದ 5 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ https://bharatgauravtrains.indianrailways.gov.in. ಅಥವಾ ಸೌಥ್ ವೆಸ್ಟರ್ನ್ ರೈಲ್ವೇ ಅಧಿಕಾರಿ ಅರವಿಂದ್ ಕುಮಾರ್ ರಜಾಕ್ ಮೊ.ಸಂ. 9731665951 ಅನ್ನು ಸಂಪರ್ಕಿಸಬಹುದು.
ಊಟ, ವಸತಿ ಹೇಗೆ?
ಪ್ರಯಾಣ ದರ, ಪ್ರವಾಸಿ ತಾಣಗಳಲ್ಲಿನ ಹೊಟೇಲ್‌ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ, ಊಟದ ವ್ಯವಸ್ಥೆ, ತುರ್ತು ವೈದ್ಯಕೀಯ ಸೇವೆ ಸೇರಿದಂತೆ ವಿಮೆಯನ್ನು ಒಳಗೊಂಡಿದೆ. ನವೆಂಬರ್ 11 ರಂದು ಮೊದಲ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ನ.23 ರಂದು ಎರಡನೇ ಬಾರಿಗೆ ರೈಲು ಪ್ರಯಾಣಿಸ ಲಿದ್ದು, ಈಗಾಗಲೇ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಮುಂದಿನ ದಿನಗಳಲ್ಲಿ ಮತ್ತೆ ದಿನಾಂಕ ಘೋಷಿಸಲಾಗುವುದು.
ಏನೇನು ನೋಡಬಹುದು?
ವಾರಾಣಸಿ- ತುಳಸಿ, ಮಾನಸ ದೇಗುಲ, ಸಂಕಷ್ಟ ಮೋಚನ್ ಹನುಮಾನ್ ದೇಗುಲ, ಕಾಶಿ ವಿಶ್ವನಾಥ ಹಾಗೂ ಗಂಗಾರತಿ. ಅಯೋಧ್ಯ- ರಾಮಜನ್ಮಭೂಮಿ ದೇಗುಲ, ಹನುಮಾನ್ ಗರ್ಹಿ ಸರಯೂ ಘಾಟ್ ಪ್ರಯಾಗ್-ಗಂಗಾ ಯಮುನ ಸಂಗಮ, ಹನುಮಾನ್ ದೇಗುಲ