ಅಮರ ಸ್ವಾತಂತ್ರ್ಯ ಸೇನಾನಿ-ಸುಭಾಷ್‌ಚಂದ್ರ

ಬೋಸ್‌ ನಾಳೆ ನೇತಾಜಿ ಜಯಂತಿ

Team Udayavani, Jan 22, 2023, 6:00 AM IST

ಅಮರ ಸ್ವಾತಂತ್ರ್ಯ ಸೇನಾನಿ-ಸುಭಾಷ್‌ಚಂದ್ರ

ಬಾಲಕ ಸುಭಾಷ್‌ನ ಮೇಲೆ ತಮ್ಮ ವಿಚಾರಗಳ ಮೂಲಕ ಪ್ರಭಾವ ಬೀರಿದ್ದ ವರು ಶ್ರೀರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರು. ಮುಂದೆ ಇಂಟರ್‌ ಮೀಡಿಯೆಟ್‌ ಓದುವ ಸಂದರ್ಭದಲ್ಲಿ ಯೋಗಿ ಅರ ವಿಂದರೂ ಅವರನ್ನು ಕಾಡಿದರು.

ಸುಭಾಷರ ಹೋರಾಟ, ಬ್ರಿಟಿಷರಿಂದ ಬಂಧನ… ನಡೆದೇ ಇತ್ತು. ಆರೋಗ್ಯ ಹದಗೆಟ್ಟ ಕಾರಣ ತನ್ನನ್ನು ಯುರೋಪಿನ ಆಸ್ಪತ್ರೆಗೆ ಕಳುಹಿಸಿದ ಬ್ರಿಟಿಷರ ನಡೆಯನ್ನು ತನ್ನ ಸ್ವಾತಂತ್ರ್ಯ ಹೋರಾಟದ ಮೊದಲ ಮೆಟ್ಟಿಲಾಗಿ ಬಳಸಿಕೊಂಡರು. ಅಲ್ಪಕಾಲದಲ್ಲೇ ಚೇತರಿಸಿಕೊಂಡು, ವಿಯೆನ್ನಾದಲ್ಲಿ ಆಸ್ಟ್ರಿಯಾ-ಭಾರತ ಮೈತ್ರಿ ವೇದಿಕೆಯನ್ನು ಹುಟ್ಟು ಹಾಕಿದರು. 1936 ಎಪ್ರಿಲ್‌ 8ರಂದು ಯುರೋಪ್‌ನಿಂದ ಮರಳಿದಾಗ ಮತ್ತೆ ಬಂಧಿಸಿ ಅವರ ಪಾಸ್‌ಪೋರ್ಟ್‌ನ್ನು ಬ್ರಿಟಿಷ್‌ ಸರಕಾರ ರದ್ದು ಮಾಡಿತು. ಇದನ್ನು ವಿರೋಧಿಸಿ ದೇಶಾದ್ಯಂತ ನಡೆದ ಹರತಾಳಕ್ಕೆ ಮಣಿದ ಆಂಗ್ಲರು ಅವರನ್ನು ಬಿಡುಗಡೆ ಮಾಡಿದಾಗ ಸುಭಾಷರು ಮೊದಲು ಭೇಟಿಯಾಗಿದ್ದು ಸ್ವಾತಂತ್ರ್ಯ ವೀರ ಸಾವರ್ಕರ್‌ ಅವರನ್ನು. ಇದು ಬೋಸರ ಜೀವನದ ಮಹತ್ತರ ತಿರುವಿಗೆ ಕಾರಣವಾಯಿತು.

1940ರ ಅಂತ್ಯದಲ್ಲಿ ಕಲ್ಕತ್ತಾದಲ್ಲಿ ಪೊಲೀಸರ ಕಣ್ಗಾವಲಿನಲ್ಲಿ ಗೃಹ ಬಂಧನದಲ್ಲಿದ್ದ ವೇಳೆ ಅಂತರ್ಮುಖಿ ಯಾಗಿದ್ದ ಸುಭಾಷರನ್ನು ಜ. 17ರ ಅನಂತರ ಯಾರೂ ನೋಡಲು ಸಾಧ್ಯವಾಗಿರಲಿಲ್ಲ. ಇತ್ತ ಸುಭಾಷರು ಪಠಾಣನ ವೇಷತೊಟ್ಟು ಜಿಯಾವುದ್ದೀನ್‌ ಎಂಬ ಹೆಸರಿನಲ್ಲಿ ಮೂಗ ನಂತೆ ನಟಿಸುತ್ತಾ ಸಮರ್‌ ಕಂದ್‌ ಮಾರ್ಗವಾಗಿ ಮಾಸ್ಕೋ ತಲುಪಿದ್ದರು. ಅಲ್ಲಿ ಅವರನ್ನು ಜರ್ಮನಿಗೆ ಒಯ್ಯಲು ವಿಮಾನ ಸಿದ್ಧವಾಗಿತ್ತು.

1941 ಎ. 3 ರಂದು ಸುಭಾಷ್‌ ಬರ್ಲಿನ್‌ ತಲುಪಿದ್ದರು. ಜರ್ಮನ್‌ ಸೇನೆಯ ವಶದಲ್ಲಿದ್ದ ಭಾರ ತೀಯ ಯುದ್ಧ ಕೈದಿಗಳು ಹಾಗೂ ಅಲ್ಲಿರುವ ಇತರ ಭಾರತೀಯ ತರುಣರನ್ನು ಸಂಘ ಟಿಸಿದ ಪರಿಣಾಮ ಆಜಾದ್‌ ಹಿಂದ್‌ ಸಂಸ್ಥೆ ಕಾರ್ಯರೂಪಕ್ಕೆ ಬಂದಿತು. ಜೈಹಿಂದ್‌ ಎಂಬ ಮೊದಲ ಧ್ವನಿ ಹೊರಹೊಮ್ಮಿದ್ದು, ಬೋಸರನ್ನು ಭಾರತೀಯ ಸೈನಿಕರು ಪ್ರೀತಿಯಿಂದ ನೇತಾಜಿ ಎಂದು ಬಿರುದು ನೀಡಿದ್ದೂ ಅದೇ ಸಮಯದಲ್ಲಿ.

ಜರ್ಮನಿಯಿಂದ ಜಲಾಂತರ್ಗಾಮಿ ನೌಕೆಯ ಮೂಲಕ ಸಬಾನ ದ್ವೀಪವನ್ನು ತಲುಪಿದರು. 1943 ಅ.21ರಂದು ಸಿಂಗಾಪುರದ ಕ್ಯಾಥೇ ಭವನದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್ವತಂತ್ರ ಭಾರತದ ಹಂಗಾಮಿ ಪ್ರಧಾನಿಯಾಗಿ ಸುಭಾಷ್‌ಚಂದ್ರ ಬೋಸ್‌ ಪ್ರಮಾಣ ವಚನ ಸ್ವೀಕರಿಸಿದರು. ಇನ್ನೂ ಹಲವು ದೇಶಗಳು ನೇತಾಜಿಯವರ ಸರಕಾರಕ್ಕೆ ಮಾನ್ಯತೆ ನೀಡಿದವು.

ಬ್ರಿಟಿಷರ ಹೆಡೆಮುರಿ ಕಟ್ಟಲು ಭಾರತದತ್ತ ಹೊರಟಿತು ನೇತಾಜಿಯವರ ಆಜಾದ್‌ ಹಿಂದ್‌ ಫೌಜ್‌ ಹಾಗೂ ಜಪಾನೀ ಸೇನೆ. 1944 ಎ.10ರ ವೇಳೆಗೆ ನಾಗಾಲ್ಯಾಂಡ್‌ ಹಾಗೂ ಮಣಿಪುರದ ಬಹುತೇಕ ಪ್ರದೇಶಗಳನ್ನು ಗೆದ್ದು ಅಲ್ಲಿ ಸ್ವತಂತ್ರ ಭಾರತದ ಧ್ವಜ ನೆಟ್ಟಿದ್ದರು ನೇತಾಜಿ. ಇರ್ರವಡಿ ನದಿಯನ್ನು ದಾಟಲು ಬಂದ ಆಂಗ್ಲರ ಸೇನೆಯನ್ನು ತಡೆದ ಭಾರತೀಯ ಹಾಗೂ ಜಪಾನೀ ಸೈನಿಕರಲ್ಲಿ ಆತ್ಮಸ್ಥೈರ್ಯವನ್ನು ತುಂಬಲು ಸ್ವತಃ ಬೋಸರೇ ಹಲವಾರು ದಿನ ರಣಾಂಗಣದಲ್ಲಿಯೇ ಉಳಿದರು. ಆಗಿನ ಸನ್ನಿವೇಶದಲ್ಲಿ ಆಜಾದ್‌ ಹಿಂದ್‌ ಸೇನೆ ಭಾರತದ 200ಚ.ಮೈಲಿ ಪ್ರದೇಶವನ್ನು ವಶಕ್ಕೆ ಪಡೆದುಕೊಂಡಿತ್ತು.

2ನೇ ವಿಶ್ವಯುದ್ಧದಲ್ಲಿ ಜಪಾನ್‌ ಅಮೆರಿಕದ ವಿರುದ್ಧ ಮುಂಡಿಯೂರಬೇಕಾದ ಅನಿವಾರ್ಯತೆ ಸೃಷ್ಟಿಯಾ ದಾಗ ಐ.ಎನ್‌.ಎ. ಒಂಟಿಯಾಯಿತು. ರಷ್ಯಾದ ಸಹಾಯ ಯಾಚಿಸಲು ನೇತಾಜಿ ಹೊರಟೇ ಬಿಟ್ಟರು. 1945 ಆ. 17, ದಕ್ಷಿಣ ವಿಯೆಟ್ನಾಂನ ಸೈಗಾನ್‌ ವಿಮಾನ ನಿಲ್ದಾಣದಿಂದ ಸಂಜೆ 5.30 ಸುಮಾರಿಗೆ ಹೊರಟು ತೈಪೇ ತಲುಪಿದರು ಸುಭಾಷ್‌. ಈ ವೇಳೆ ಅವರು ಪ್ರಯಾಣಿಸುತ್ತಿದ್ದ ವಿಮಾನ ದೊಡ್ಡ ಸ್ಫೋಟದೊಂದಿಗೆ ಭಸ್ಮವಾಯಿತು, ತೀವ್ರ ಗಾಯ ಗೊಂಡ ಸುಭಾಷರು ತೈಪೇ ಆಸ್ಪತ್ರೆಯಲ್ಲಿ ಕೊನೆಯು ಸಿರೆಳೆದರು ಎಂದು ಹೇಳುತ್ತಾರಾದರೂ ಇವತ್ತಿನವರೆಗೂ ನಿಜವಾಗಿ ಅಂದೇನಾಯಿತು ಅನ್ನುವ ಸಂಗತಿ ನಿಗೂಢ ವಾಗಿಯೇ ಉಳಿದಿದೆ.

ನೇತಾಜಿ ಕಣ್ಮರೆಯಾದ ಸುದ್ದಿಯಿಂದ ದೇಶಾದ್ಯಂತ ಎದ್ದ ದಂಗೆಗಳನ್ನು ಇನ್ನು ದಮನಿಸುವುದು ಕಷ್ಟವೆಂದರಿತ ಬ್ರಿಟಿಷರು ಕೊನೆಗೂ ಭಾರತ ಬಿಟ್ಟು ಹೊರಡಲೇ ಬೇಕಾ ಯಿತು. ಭಾರತವೇನೋ ಸ್ವಾತಂತ್ರ್ಯ ಪಡೆಯಿತು. ಆದರೆ ತನ್ನ ಮುಕ್ತಗೊಳಿಸಿದ ಸುಪುತ್ರನ ಸುಳಿವು ಕಾಣದೇ ತಾಯಿ ಭಾರತಿ ಕಣ್ಣೀರು ಹಾಕಿದ್ದಂತೂ ಸತ್ಯ.

-ಪ್ರಕಾಶ್‌ ಮಲ್ಪೆ

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.