ಜ್ಯೇಷ್ಠ ಮಾಸದ ಸೂಪರ್‌ ಮೂನ್‌

Team Udayavani, Jun 14, 2022, 6:20 AM IST

ಜ್ಯೇಷ್ಠ ಮಾಸದ ಸೂಪರ್‌ ಮೂನ್‌

ಇಂದು ಜೂನ್‌ 14. ಜ್ಯೇಷ್ಠ ಮಾಸದ ಹುಣ್ಣಿಮೆ. ಇಂದೇ ಸೂಪರ್‌ ಮೂನ್‌. ಚಂದ್ರ ಭೂಮಿಯ ಸುತ್ತ 28 ದಿನಗಳಿಗೊಮ್ಮೆ ಸುತ್ತುವ ತಿರುಗಾಟದಲ್ಲಿ ಇಂದು ಪೆರಿಜಿಯಲ್ಲಿ, ಅಂದರೆ ಭೂಮಿಗೆ ಸಮೀಪ ಸರಾಸರಿ ದೂರಕ್ಕಿಂತ ಸುಮಾರು 30 ಸಾವಿರ ಕಿ. ಮೀ. ಹತ್ತಿರ. ಚಂದ್ರ ತನ್ನ ದೀರ್ಘ‌ ವೃತ್ತಾಕಾರದ ಪಥದಲ್ಲಿ 28 ದಿನಗಳಿಗೊಮ್ಮೆ ಭೂಮಿಗೆ ಸಮೀಪ, ಪೆರಿಜಿಯಲ್ಲಿ ಹಾಗೂ ದೂರದ ಅಪೊಜಿಯಲ್ಲಿ ಬರುವುದು ವಾಡಿಕೆ. ಈ ಪೆರಿಜಿಗೆ ಬಂದಾಗ ಹುಣ್ಣಿಮೆಯಾದರೆ ಸೂಪರ್‌ ಚಂದ್ರ ಹತ್ತಿರ ಬರುವುದರಿಂದ ಈ ದಿನ ಚಂದ್ರ ನಮಗೆ ಸುಮಾರು 15 ಅಂಶ ಗಾತ್ರದಲ್ಲಿ ದೊಡ್ಡದಾಗಿ 25 ಅಂಶ ಹೆಚ್ಚಿನ ಬೆಳಕಿನಿಂದ ಗೋಚರಿಸುತ್ತದೆ. ಚಂದ್ರ ಭೂಮಿಗಳ ಸರಾಸರಿ ದೂರ 3 ಲಕ್ಷದ 84 ಸಾವಿರ ಕಿ.ಮೀ. ಆದರೆ ಇಂದು 3 ಲಕ್ಷದ 57 ಸಾವಿರ.

ಈಗ ಜ್ಯೇಷ್ಠ ಮಾಸ
ಭಾರತೀಯರ ಮಾಸಗಳ ಕಲ್ಪನೆ ಬಲು ಚಂದ. ಹುಣ್ಣಿಮೆಯ ಚಂದ್ರ ಆ ದಿನ ಯಾವ ನಕ್ಷತ್ರದ ಜತೆಗಿರುವನೋ ಆ ನಕ್ಷತ್ರದ ಹೆಸರನ್ನು ಆ ತಿಂಗಳಿಗೆ ನಮ್ಮ ಹಿರಿಯರು ಇಟ್ಟಿರುವುದು ಅವರ ಆಕಾಶ ವೀಕ್ಷಣಾ ಪ್ರೌಢ ಜ್ಞಾನವನ್ನು ತಿಳಿಸುತ್ತದೆ. ಇಂದು ವೃಶ್ಚಿಕ ರಾಶಿಯ ಸುಂದರ ನಕ್ಷತ್ರ ಜ್ಯೇಷ್ಠ, ಅಂಟಾರಸ್‌ನ ಪಕ್ಕದಲ್ಲಿ ಚಂದ್ರ ಉದಯಿಸುತ್ತದೆ. ಹಾಗಾಗಿ ಈ ತಿಂಗಳಿನ ಹೆಸರು ಜ್ಯೇಷ್ಠ ಮಾಸ.

ಅದೇನು ಕಾಕತಾಳೀಯವೋ, ಸತ್ಯ ದರ್ಶನವೋ ತಿಳಿಯದು. ನಮ್ಮ ಭಾರತೀಯ ಪೂರ್ವಿಕರು 27 ನಕ್ಷತ್ರಗಳಲ್ಲಿ ಈ ಅಂಟಾರಸ್‌ ಅನ್ನು ಜ್ಯೇಷ್ಠ ಎಂದು ನಾಮಕರಣ ಅದು ಹೇಗೆ ಮಾಡಿದರೋ ತಿಳಿಯದು. ಜ್ಯೇಷ್ಠ ಅಂದರೆ ಹಿರಿದು, ದೊಡ್ಡದು ಎಂದರ್ಥ.

ಇಂದಿನ ಖಗೋಳ ವಿಜ್ಞಾನವೂ ಈಗ ಬರಿಗಣ್ಣಿಗೆ ಕಾಣುವ ನಕ್ಷತ್ರಗಳಲ್ಲಿ ಈ ಅಂಟಾರಸ್‌ ತುಂಬಾ ದೊಡ್ಡದೆಂದು ಸಾರಿದ್ದಾರೆ. ಈ ನಕ್ಷತ್ರ ನಮ್ಮ ಸೂರ್ಯನ ವ್ಯಾಸಕ್ಕಿಂತ ಸುಮಾರು 700 ಪಟ್ಟು ದೊಡ್ಡದು. ಹಾಗಾಗಿ ಸೂರ್ಯನಿಗಿಂತ ಕೋಟಿ ಕೋಟಿ ಪಟ್ಟು ದೊಡ್ಡದು.

ಭೂಮಿಗೆ ಚಂದ್ರ ಹತ್ತಿರ ಬಂದಾಗಲೆಲ್ಲಾ ಸಮುದ್ರದ ಭರತ ಇಳಿತಗಳ ಅಬ್ಬರ ಜೋರು. ಇದೀಗ ಮುಂಗಾರೂ ಅಬ್ಬರಿಸುವ ಸೂಚನೆ. ಇದರೊಂದಿಗೆ ಹುಣ್ಣಿಮೆ ಹಾಗೂ ಸೂಪರ್‌ಮೂನ್‌ಗಳಿಂದ ಸಮುದ್ರದ ತೆರೆಗಳ ನರ್ತನ ಈ ದಿನ ಜೋರಿರಬಹುದು. ಎಲ್ಲೆಲ್ಲೂ ಪ್ರಕೃತಿಯ ನರ್ತನವೇ. ನಾವು ಪ್ರೇಕ್ಷಕರು ಮಾತ್ರ.

– ಡಾ| ಎ. ಪಿ. ಭಟ್‌ ಉಡುಪಿ

ಟಾಪ್ ನ್ಯೂಸ್

ಮುದ್ದೇಬಿಹಾಳ : ಸಿಡಿಲು ಬಡಿದು ಆಕಳು ಸಾವು, ಕಂಗಾಲಾದ ರೈತ

ಮುದ್ದೇಬಿಹಾಳ : ಸಿಡಿಲು ಬಡಿದು ಆಕಳು ಸಾವು, ಕಂಗಾಲಾದ ರೈತ

ನಮನ್ ಶತಕದಾಟ; ರೋಡ್ ಸೇಫ್ಟಿ ಕಪ್ ಉಳಿಸಿಕೊಂಡ ಇಂಡಿಯಾ ಲೆಜೆಂಡ್ಸ್

ನಮನ್ ಶತಕದಾಟ; ರೋಡ್ ಸೇಫ್ಟಿ ಕಪ್ ಉಳಿಸಿಕೊಂಡ ಇಂಡಿಯಾ ಲೆಜೆಂಡ್ಸ್

ಕಾಸರಗೋಡು : ಪಿಎಫ್‌ಐ ಜಿಲ್ಲಾ ಕಚೇರಿಗೆ ಎನ್‌ಐಎಯಿಂದ ಬೀಗ

ಕಾಸರಗೋಡು : ಪಿಎಫ್‌ಐ ಜಿಲ್ಲಾ ಕಚೇರಿಗೆ ಎನ್‌ಐಎಯಿಂದ ಬೀಗ

prabhas

‘ಕಾಂತಾರ’ ಗೆ ಬಹುಪರಾಕ್ ಎಂದ ಬಾಹುಬಲಿ ಸ್ಟಾರ್ ಪ್ರಭಾಸ್

ಆಗಸ್ಟ್‌ ಒಂದೇ ತಿಂಗಳಲ್ಲಿ 2.3 ಮಿಲಿಯನ್ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್

ಆಗಸ್ಟ್‌ ಒಂದೇ ತಿಂಗಳಲ್ಲಿ 2.3 ಮಿಲಿಯನ್ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್

PM Narendra Modi pays tribute to Mahatma Gandhi at Rajghat

ಗಾಂಧಿ ಜಯಂತಿ: ರಾಜ್ ಘಾಟ್ ನಲ್ಲಿ ಪುಷ್ಪ ನಮನ ಸಲ್ಲಿಸಿದ ಮೋದಿ, ಸೋನಿಯಾ, ಖರ್ಗೆ

ಕೇರಳದಲ್ಲಿನ ಕಠಿನ ಕ್ರಮ; ಸಮುದಾಯದಿಂದ ಸಿಗದ ಬೆಂಬಲ! ಮೌನಕ್ಕೆ ಶರಣಾದ ಪಿಎಫ್‌ಐ

ಕೇರಳದಲ್ಲಿನ ಕಠಿನ ಕ್ರಮ; ಸಮುದಾಯದಿಂದ ಸಿಗದ ಬೆಂಬಲ! ಮೌನಕ್ಕೆ ಶರಣಾದ ಪಿಎಫ್‌ಐಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೈ ಜವಾನ್‌, ಜೈ ಕಿಸಾನ್‌ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರಿಗೊಂದು ಸಲಾಂ

ಜೈ ಜವಾನ್‌, ಜೈ ಕಿಸಾನ್‌ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರಿಗೊಂದು ಸಲಾಂ

ಇಂದು ಗಾಂಧಿ ಜಯಂತಿ; ಸೇವಾಕಾರ್ಯಕ್ಕೆ ಗಾಂಧೀಜಿ ಪ್ರೇರಣೆ

ಇಂದು ಗಾಂಧಿ ಜಯಂತಿ; ಸೇವಾಕಾರ್ಯಕ್ಕೆ ಗಾಂಧೀಜಿ ಪ್ರೇರಣೆ

ದೇಶಕ್ಕೆ 5ಜಿ ಎಂಟ್ರಿ; 4ಜಿ ಗಿಂತ 10 ಪಟ್ಟು ವೇಗ

ದೇಶಕ್ಕೆ 5ಜಿ ಪ್ರವೇಶ; 4ಜಿ ಗಿಂತ 10 ಪಟ್ಟು ವೇಗ…

ವಿದೇಶೀ ಬಟ್ಟೆ  ಧಗಧಗ ಉರಿದಾಗ…

ವಿದೇಶೀ ಬಟ್ಟೆ ಧಗಧಗ ಉರಿದಾಗ…

ಜೀವನದಲ್ಲಿ ನಂಬಿಕೆಯ ಬಲವೇ ನಮಗೆ ಬೆಂಬಲ

ಜೀವನದಲ್ಲಿ ನಂಬಿಕೆಯ ಬಲವೇ ನಮಗೆ ಬೆಂಬಲ

MUST WATCH

udayavani youtube

ದಿನ7 | ಕಾಳರಾತ್ರಿ ದೇವಿ

udayavani youtube

ಮೂಳೂರಿನಲ್ಲಿ ತೊರಕೆ ಮೀನಿನ ಸುಗ್ಗಿ, ಮೀನುಗಾರರು ಫುಲ್ ಖುಷಿ ಮಾರ್ರೆ

udayavani youtube

ಉಚ್ಚಿಲದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಶತವೀಣಾವಲ್ಲರಿ ಕಾರ್ಯಕ್ರಮ

udayavani youtube

ಭಾಷಣ ಮಾಡದೆ… ಜನರ ಬಳಿ ಕ್ಷಮೆ ಕೇಳಿದ ಪ್ರಧಾನಿ ಮೋದಿ… ಕಾರಣ ಇಲ್ಲಿದೆ…

udayavani youtube

ದಿನ6| ಕಾತ್ಯಾಯಿನಿ ದೇವಿ|ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನವೇನು ಗೊತ್ತೇ. | Udayavani

ಹೊಸ ಸೇರ್ಪಡೆ

ಮುದ್ದೇಬಿಹಾಳ : ಸಿಡಿಲು ಬಡಿದು ಆಕಳು ಸಾವು, ಕಂಗಾಲಾದ ರೈತ

ಮುದ್ದೇಬಿಹಾಳ : ಸಿಡಿಲು ಬಡಿದು ಆಕಳು ಸಾವು, ಕಂಗಾಲಾದ ರೈತ

ಗಾಂಧಿ ಜಯಂತಿ; ಪೊರಕೆ ಹಿಡಿದು ಕಸ ಗುಡಿಸಿದ ಕಲಬುರಗಿ ಜಿ.ಪಂ. ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ

ಗಾಂಧಿ ಜಯಂತಿ; ಪೊರಕೆ ಹಿಡಿದು ಕಸ ಗುಡಿಸಿದ ಕಲಬುರಗಿ ಜಿ.ಪಂ. ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ

ನಮನ್ ಶತಕದಾಟ; ರೋಡ್ ಸೇಫ್ಟಿ ಕಪ್ ಉಳಿಸಿಕೊಂಡ ಇಂಡಿಯಾ ಲೆಜೆಂಡ್ಸ್

ನಮನ್ ಶತಕದಾಟ; ರೋಡ್ ಸೇಫ್ಟಿ ಕಪ್ ಉಳಿಸಿಕೊಂಡ ಇಂಡಿಯಾ ಲೆಜೆಂಡ್ಸ್

ಕಾಸರಗೋಡು : ಪಿಎಫ್‌ಐ ಜಿಲ್ಲಾ ಕಚೇರಿಗೆ ಎನ್‌ಐಎಯಿಂದ ಬೀಗ

ಕಾಸರಗೋಡು : ಪಿಎಫ್‌ಐ ಜಿಲ್ಲಾ ಕಚೇರಿಗೆ ಎನ್‌ಐಎಯಿಂದ ಬೀಗ

ಕೊಪ್ಪಳ: ಮನೆಗಳಿಗೆ ನುಗ್ಗಿದ ಹಿರೇಹಳ್ಳದ ನೀರು

ಕೊಪ್ಪಳ: ಮನೆಗಳಿಗೆ ನುಗ್ಗಿದ ಹಿರೇಹಳ್ಳದ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.