ಇಂದು ವಿಶ್ವ ಹೃದಯ ದಿನ; ಸ್ವಸ್ಥ ಜೀವನಕ್ಕೆ ಆರೋಗ್ಯವಂತ ಹೃದಯ ಸೋಪಾನ


Team Udayavani, Sep 29, 2022, 9:30 AM IST

ಇಂದು ವಿಶ್ವ ಹೃದಯ ದಿನ; ಸ್ವಸ್ಥ ಜೀವನಕ್ಕೆ ಆರೋಗ್ಯವಂತ ಹೃದಯ ಸೋಪಾನ

ಸೆ.29ರ ಗುರುವಾರ ವಿಶ್ವ ಹೃದಯ ದಿನ. “ಯೂಸ್‌ ಹಾರ್ಟ್‌ ಫಾರ್‌ ಎವೆರಿ ಹಾರ್ಟ್‌’-ಈ ವರ್ಷದ ­ಘೋಷಣೆಯಾಗಿದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಪ್ರತೀ ವರ್ಷ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಬಲುಮುಖ್ಯ ಕಾರಣಗಳೆಂದರೆ ಬದಲಾದ ಜೀವನಶೈಲಿ, ಒತ್ತಡದ ಬದುಕು, ವಾತಾವರಣದಲ್ಲಿನ ಮಾಲಿನ್ಯ, ಧೂಮಪಾನ, ತಂಬಾಕು ಮತ್ತು ಮಾದಕ ವಸ್ತುಗಳ ಸೇವನೆಯಂತಹ ದುಶ್ಚಟಗಳಿಗೆ ಮಾನವರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಬಲುಮುಖ್ಯ ಕಾರಣವಾಗಿದೆ. ಅನುವಂಶೀಯತೆಯೂ ಒಂದು ಕಾರಣವಾಗಿದೆ. ಒಟ್ಟಾರೆ ಇಂದಿನ ಯಾಂತ್ರಿಕ ಬದುಕಿನಲ್ಲಿ ಸಹಜತೆ ದೂರ ಸರಿಯುತ್ತಿರುವುದರಿಂದ ಮಾನವನನ್ನು ಹತ್ತು ಹಲವು ಕಾಯಿಲೆಗಳು ಕಾಡುತ್ತಿವೆ. ಇದು ಕೂಡ ಹೃದಯ ಸಂಬಂಧಿ ಸಮಸ್ಯೆಗೆ ಆಸ್ಪದ ನೀಡುತ್ತಿದೆ. ಮತ್ತೆ ಫಿಟನೆಸ್‌ ಕಾಯ್ದುಕೊಳ್ಳುವ ಅತಿಯಾದ ಹುಚ್ಚಿನಿಂದ ವಿಪರೀತ ದೇಹದಂಡನೆ ಮಾಡುವುದರಿಂದಲೂ ಹೃದಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಇವೆಲ್ಲದರ ಬಗ್ಗೆ ವಿಶ್ವ ಹೃದಯ ದಿನದಂದು ಜನರಿಗೆ ಅರಿವು ಮೂಡಿಸಬೇಕಿದೆ.

ಹೃದಯ ಒಂದು ವ್ಯಕ್ತಿಯ ಜೀವ ನಡೆಸುವ ಯಂತ್ರದಂತಿದ್ದು ಆ ವ್ಯಕ್ತಿ ಜೀವಂತ ಇರುವವರೆಗೆ ಪ್ರತೀ ಸೆಕೆಂಡ್‌ ದೇಹದ ಎಲ್ಲ ಜೀವಕೋಶಗಳಿಗೆ ನಿರಂತರವಾಗಿ ರಕ್ತವನ್ನು ಪಂಪ್‌ ಮಾಡಿ ಆಮ್ಲಜನಕ, ಪೋಷಕಾಂಶ ಸರಬರಾಜು ಮಾಡುತ್ತಿರುತ್ತದೆ ಮತ್ತು ರಕ್ತ ಶುದ್ಧೀಕರಣ ಮಾಡುತ್ತಿರುತ್ತದೆ. ಈ ಯಂತ್ರವು ಪ್ರತೀ ನಿಮಿಷಕ್ಕೆ ಐದು ಲೀಟರ್‌ನಂತೆ ದಿನವೊಂದಕ್ಕೆ ಸರಿಸುಮಾರು 7-8 ಸಾವಿರ ಲೀಟರ್‌ಗಳಷ್ಟು ರಕ್ತವನ್ನು ಪಂಪ್‌ ಮಾಡುತ್ತಿರುತ್ತದೆ.

ಮಾನವನನ್ನು ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಈಗ ಪ್ರಮುಖವಾದದ್ದು. ಹೃದಯಕ್ಕೆ ಸಂಬಂಧಿಸಿದ ಅನೇಕ ಬಗೆಯ ವ್ಯತ್ಯಯಗಳನ್ನು ಒಟ್ಟಾಗಿ ಹೃದಯ ಸಂಬಂಧಿ ರೋಗ ಎಂದು ಕರೆಯುತ್ತೇವೆ. ಇವುಗಳಲ್ಲಿ ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳ ತೊಂದರೆಗಳು (CAD), ಎದೆ ಶೂಲೆ (Angina), ಹೃದಯ ಸ್ನಾಯುಗಳ ತೊಂದರೆ, ಕವಾಟಗಳ ತೊಂದರೆ, ಹೃದಯಾಘಾತ, ಹೃದಯ ತಡೆ, ಹೃದಯ ಸ್ತಂಭನ, ಹೃದಯ ಸೋಲುವಿಕೆ ಪ್ರಮುಖವಾದವುಗಳು.

ಕಾರಣಗಳು ಹಲವು
ಹೆಚ್ಚಿನ ಜನರಿಗೆ ಅವರ ಜೀವನಶೈಲಿಯಲ್ಲಿರುವ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಅಪಾಯಕಾರಿ ಅಂಶಗಳ ಬಗ್ಗೆ ಅರಿವು ಇರುವುದಿಲ್ಲ. ಅವುಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಪ್ರತೀ ವರ್ಷ ಸೆಪ್ಟಂಬರ್‌ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾ ಗುತ್ತದೆ. ಕಳೆದ 4-5 ದಶಕಗಳಲ್ಲಿ ಜನರ ಜೀವನದ ಶೈಲಿ, ಆಹಾರ ಪದ್ಧತಿ, ಬದುಕುತ್ತಿರುವ ಪರಿಸರ, ವಾತಾವರಣದಲ್ಲಿ ಆಗುತ್ತಿರುವ ಅಗಾಧ ವ್ಯತ್ಯಾಸಗಳು ಅವರ ಆರೋಗ್ಯದ ಮೇಲೆ ತೀವ್ರವಾದ ಪರಿಣಾ ಮಗಳನ್ನು ಉಂಟುಮಾಡುತ್ತಿದೆ. ಜನರು ಅಂದಿನ ಶ್ರಮದಾಯಕ ವೃತ್ತಿಗಳಿಂದ ಮುಕ್ತವಾಗುತ್ತ ಶ್ರಮರಹಿತ ಆದರೆ ಹೆಚ್ಚು ಮಾನಸಿಕ ಒತ್ತಡ ಹೊಂದಿರುವ ಜಡತ್ವದ ಜೀವನಶೈಲಿಗೆ ಬದಲಾಗುತ್ತಿದ್ದಾರೆ. ಸ್ಪರ್ಧಾತ್ಮಕ ಒತ್ತಡದಿಂದ ಕೂಡಿದ ಬದುಕು, ಬದಲಾದ ಆಹಾರ ಪದ್ಧತಿ- ಸಂಸ್ಕರಿಸದ ಸಕ್ಕರೆ, ಹೆಚ್ಚು ಕಾರ್ಬೋಹೈಡ್ರೇಟ್, ಕೊಬ್ಬು ಇರುವ ಆಹಾರ ಪದಾರ್ಥಗಳು ಈ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ.
ನಗರೀಕರಣ, ಕೈಗಾರೀಕರಣ, ಯಾಂತ್ರಿಕ ಜೀವನ, ಬದಲಾದ ಜೀವನಶೈಲಿಯಿಂದಾಗಿ ಹೃದಯ ರೋಗಗಳು, ಕ್ಯಾನ್ಸರ್‌, ಡಯಾಬಿಟಿಸ್‌ನಿಂದ ಬಳಲುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಬೇರೆ ಬೇರೆ ಕಾರಣಗಳಿಂದ ಜನರು ತಂಬಾಕು, ಮದ್ಯಪಾನ, ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದು ಸಹ ಹೃದಯ ಸಂಬಂಧಿ ರೋಗಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈ ಎಲ್ಲ ಬದಲಾವಣೆಗಳಿಂದ ಹೃದಯದ, ರಕ್ತನಾಳಗಳ ಸಮಸ್ಯೆಗಳು 30 ವರ್ಷದ ಒಳಗಿನ ಯುವಜನರಲ್ಲಿ ಸಹ ಈಗ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಯಾಗಿದೆ. ಈಗ ಮಹಿಳೆಯರೂ ಸಹ ವೃತ್ತಿಪರರಾಗಿ ಸ್ಪರ್ಧಾತ್ಮಕ ಜೀವನ ನಡೆಸುವುದರಿಂದ, 45 ವರ್ಷದ ಅನಂತರ ಮಹಿಳೆಯರಲ್ಲಿ ಹಾರ್ಮೋನ್‌ಗಳ ವ್ಯತ್ಯಾಸ ದಿಂದ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗು ವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ.

ಯಾವುದೇ ಕಾಯಿಲೆ ನಿಯಂತ್ರಣದಲ್ಲಿ ಮೂರು ಹಂತಗಳಿರುತ್ತವೆ. ಮೊದಲನೇ ಹಂತದಲ್ಲಿ ಕಾಯಿಲೆ ಬಾರದಂತೆ ತಡೆಯುವುದು-ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳುವುದು, ನಿರ್ದಿಷ್ಟ ಪ್ರತಿರಕ್ಷಣೆ ಪಡೆದು ಕೊಳ್ಳುವುದು. ಎರಡನೇ ಹಂತದಲ್ಲಿ ಕಾಯಿಲೆಯನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಅದಕ್ಕೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದು. ಮೂರನೇ ಹಂತದಲ್ಲಿ ಕಾಯಿಲೆಯ ಪರಿಣಾಮವನ್ನು ಕಡಿಮೆ ಮಾಡುವುದು ಹಾಗೂ ಕಾಯಿಲೆ ಯಿಂದ ಈಗಾಗಲೇ ಆಗಿರುವ ಶಾರೀರಿಕ ತೊಂದರೆಗಳನ್ನು ನಿಧಾನ ವಾಗಿ ಕಡಿಮೆಗೊಳಿಸುವುದು ಮತ್ತು ಕ್ರಮೇಣ ಇಲ್ಲವಾಗಿಸುವುದು.

ಹೃದಯ ಹಾಗೂ ರಕ್ತನಾಳಗಳ ರೋಗಗಳ ನಿಯಂತ್ರಣ ಕ್ರಮಗಳು
ಕ್ರಮಬದ್ಧವಾದ ಆಹಾರ ಸೇವನೆ: ಮನುಷ್ಯನ ಆರೋಗ್ಯವು ಅವರು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ಕ್ರಮಬದ್ಧವಲ್ಲದ ಆಹಾರ ಸೇವನೆ ಬಹುತೇಕ ರೋಗಗಳಿಗೆ ಕಾರಣ ವಾಗಬಲ್ಲದು. ಕಡಿಮೆ ಕೊಬ್ಬು ಹಾಗೂ ಹೆಚ್ಚು ನಾರಿನ ಅಂಶ ಇರುವ ಸಮತೋಲನ ಆಹಾರ, ಹಸಿವಾದಾಗ ಮಾತ್ರ ಆಹಾರ ಸೇವನೆ, ಇನ್ನೂ ಎರಡು ತುತ್ತು ಬೇಕು ಎನ್ನುವಾಗಲೇ ಊಟ/ಉಪಾಹಾರ ನಿಲ್ಲಿಸುವುದು. ವ್ಯಕ್ತಿಯ ದೈಹಿಕ ಶ್ರಮಕ್ಕೆ ಅನುಗುಣವಾಗಿ ದಿನಂಪ್ರತಿ ಅಗತ್ಯ ಇರುವಷ್ಟೇ ಶಕ್ತಿ(ಕ್ಯಾಲೊರಿ) ನೀಡಬಲ್ಲ ಸಮತೋಲನ ಆಹಾರ ಸೇವಿಸುವುದು. ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸಿದ ಯಾವುದೇ ತೆರೆನಾದ ಆಹಾರಗಳು ದೇಹದಲ್ಲಿ, ದೇಹದಾದ್ಯಂತ ಕೊಬ್ಟಾಗಿ ಶೇಖರಣೆ ಗೊಳ್ಳುತ್ತದೆ.

ದೇಹದ ತೂಕ ನಿಯಂತ್ರಣ: ದೇಹದ ಬೊಜ್ಜು ಹೃದಯದ ಮೇಲೆ ವಿಪರೀತ ಒತ್ತಡ ಹೇರುತ್ತದೆ. ದೈಹಿಕ ಚಟುವಟಿಕೆಗಳು, ಸಹಜವಾದ ಮನೆಕೆಲಸಗಳು, ಸುರಕ್ಷಿತ ವಾದ ಪ್ರದೇಶಗಳಲ್ಲಿ ಆಹ್ಲಾದಕರ ನಡಿಗೆ ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಉತ್ತಮ ಕ್ರಮಗಳಾಗಿವೆ. ಆದಷ್ಟು ಸಹಜವಾದ ಮನೆಕೆಲಸಗಳನ್ನು ಸಹಾಯಕರಿಲ್ಲದೆ ಮನೆಮಂದಿ ಸೇರಿ ಮಾಡಿದರೆ ಎಲ್ಲರಿಗೂ ಸಹ ಸಾಕಷ್ಟು ದೈಹಿಕ ಚಟುವಟಿಕೆ ದೊರೆಯು ತ್ತದೆ. ದೇಹದ ಪರಿಮಾಣ  18.5ರಿಂದ 24.9ರ ಒಳಗೆ ಇರುವಂತೆ ನೋಡಿ ಕೊಳ್ಳುವುದು. ಅಂತೆಯೇ ಅತಿಯಾದ ವ್ಯಾಯಾಮ ಮಾಡಿ ದೇಹವನ್ನು ಒತ್ತಾಯ ಪೂರ್ವಕವಾಗಿ ದಂಡಿಸುವುದು ಸಹ ಸಲ್ಲದು.

ಧೂಮಪಾನ ಹಾಗೂ ಇತರ ತಂಬಾಕು ಉತ್ಪನ್ನಗಳು: ಧೂಮಪಾನ ಹಾಗೂ ಇತರ ತಂಬಾಕು ಉತ್ಪನ್ನಗಳು ದೇಹದ/ಹೃದಯದ ರಕ್ತನಾಳಗಳನ್ನು ಸಂಕುಚಿತ ಗೊಳಿಸು ವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಉಲ್ಬಣ ಗೊಳ್ಳುತ್ತವೆ. ಈ ಅಭ್ಯಾಸಗಳನ್ನು ತ್ಯಜಿಸಿದರೆ ಅಪಾಯ ಅರ್ಧದಷ್ಟು ಕಡಿಮೆಯಾಗುತ್ತದೆ.

ಮಾನಸಿಕ ಆರೋಗ್ಯ: ದೈಹಿಕ ಹಾಗೂ ಮಾನಸಿಕ ಒತ್ತಡಗಳ ನಿಯಂತ್ರಣ ಹೃದಯದ ಮೇಲೆ ಉತ್ತಮ ಪರಿಣಾಮ ಬೀರಬಲ್ಲದು. ಧ್ಯಾನ, ಯೋಗವು ಇಂದಿನ ಆಧುನಿಕ ಜಗತ್ತಿನ ಒತ್ತಡಕ್ಕೆ ಪ್ರಮುಖ ಕಾರಣಗಳಾದ ಅರಿಷಡ್ವರ್ಗಗಳ ನಿಯಂತ್ರಣ ಮತ್ತು ಇಂದ್ರಿಯಗಳ ನಿಗ್ರಹಕ್ಕೆ ಸಹಾಯಕವಾಗಿದೆ.

ಸೃಜನಶೀಲ ಚಟುವಟಿಕೆಗಳು, ಓದು, ಬರೆಹ, ಚಿತ್ರಕಲೆ, ಸಂಗೀತ, ನೃತ್ಯ, ಮನೋರಂಜನೆ, ಹೂದೋಟ ಆರೈಕೆ, ಮನಸ್ಸಿಗೆ ಇಷ್ಟವಾಗುವ ಕೆಲಸಗಳು, ಕೆಲವು ನರವಾಹಕಗಳನ್ನು ಉತ್ಪತ್ತಿ ಮಾಡುತ್ತದೆ. ಈ ನರವಾಹಕಗಳು ಮೆದುಳಿನಲ್ಲಿ ಸ್ರವಿಸಿದಾಗ ದುಗುಡ, ಬೇಸರ, ಒತ್ತಡ ಕಳೆದು ಆಹ್ಲಾದಕರ ಅನುಭವ, ಮನಸ್ಸಿಗೆ ಸಂತೋಷ ನೀಡುತ್ತದೆ. ಆರೋಗ್ಯವಂತ ಹೃದಯಕ್ಕೆ ಸಂತೋಷ ಹಾಗೂ ನಗು, ಮಾನಸಿಕ ನೆಮ್ಮದಿ ಅಗತ್ಯ.

ವಂಶಪಾರಂಪರ್ಯ: ಹೃದಯಾಘಾತಕ್ಕೆ ವಂಶಪಾ ರಂಪರ್ಯ ಕಾರಣಗಳು ಸಹ ಇವೆ. ಅಂಥವರು ಅವರಲ್ಲಿರುವ ಇತರ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಿ ವೈದ್ಯರ ಸಲಹೆಯಂತೆ ನಡೆದು ಕೊಳ್ಳುವುದು.

ರಕ್ತದೊತ್ತಡ, ಡಯಾಬಿಟಿಸ್‌ ನಿಯಂತ್ರಣ: ಅದಾಗಲೇ ಹೃದಯ ಸಂಬಂಧಿ ಕಾಯಿಲೆಗಳು, ರಕ್ತದೊ ತ್ತಡ, ಡಯಾಬಿಟಿಸ್‌ನಿಂದ ಬಳಲುತ್ತಿದ್ದರೆ ವೈದ್ಯರ ಶಿಫಾರಸಿನಂತೆ ಚಿಕಿತ್ಸೆ ಪಡೆದುಕೊಳ್ಳುವುದು ಹಾಗೂ ಅವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು, ನಿರಂತರ ವೈದ್ಯರ ಸಂಪರ್ಕ ದಲ್ಲಿರುವುದು.

ನಿದ್ರೆ ಹಾಗೂ ವಿಶ್ರಾಂತಿ: ದಿನಕ್ಕೆ ಪ್ರತೀ ನಿತ್ಯ ಕನಿಷ್ಠ 7-8 ಗಂಟೆ ನಿದ್ರೆಯೊಂದಿಗೆ ಮಧ್ಯಾಹ್ನ ಸಹ ಊಟದ ಅನಂತರ 15-30 ನಿಮಿಷಗಳ ಪವರ್‌ ನ್ಯಾಪ್‌ ದೈನಂದಿನ ಕೆಲಸಗಳಲ್ಲಿ ತಾಜಾತನ, ಶಕ್ತಿ ನೀಡುವುದಲ್ಲದೆ ಹೃದಯಾಘಾತದ ಅಪಾಯ ಕಡಿಮೆ ಮಾಡುವುದು.

ಕೆಲವೊಮ್ಮೆ ಈ ಎದೆನೋವನ್ನು ಹೊಟ್ಟೆ ನೋವು/ಆ್ಯಸಿಡಿಟಿ ಎಂದು ನಿರ್ಲಕ್ಷ್ಯ ಮಾಡುವ ಸಂಭವ ಇರು ತ್ತದೆ. ಹೃದಯಾಘಾತ ಉಂಟಾದ ಬಳಿಕ ಮೊದಲ ಒಂದು ಗಂಟೆ ಗೋಲ್ಡನ್‌ ಅವರ್‌ ಎಂದು ಕರೆಯ ಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಇ.ಸಿ.ಜಿ. ಮತ್ತಿತರ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಸರಿಯಾದ ಸಮಯದಲ್ಲಿ ಪಡೆದು ಕೊಳ್ಳುವುದು ಅಗತ್ಯವಾಗಿರುತ್ತದೆ. ಅಲ್ಲದೇ 35 ವರ್ಷದ ಅನಂತರ ಪುರುಷರು ಹಾಗೂ 45 ವರ್ಷ ಮೀರಿದ ಮಹಿಳೆಯರು ವರ್ಷಕ್ಕೊಮ್ಮೆ ಹೃದಯ ಸಂಬಂಧಿ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ.

-ಡಾ| ಅಶ್ವಿ‌ನಿ ಕುಮಾರ ಗೋಪಾಡಿ

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.