ಮೊದಲ ಸ್ವಾತಂತ್ರ್ಯ ದಿನಾಚರಣೆಯ ಮಾಸದ  ನೆನಪು


Team Udayavani, Aug 15, 2021, 7:10 AM IST

ಮೊದಲ ಸ್ವಾತಂತ್ರ್ಯ ದಿನಾಚರಣೆಯ ಮಾಸದ  ನೆನಪು

ಸ್ವಾತಂತ್ರ್ಯ  ದಿನಾಚರಣೆಗೆ ಅಮೃತ ಮಹೋತ್ಸವ. ಪ್ರಥಮ ಸ್ವಾತಂತ್ರ್ಯ ಸಂಭ್ರಮ ಹೇಗಿತ್ತು ಎಂಬುದು ಹೊಸ ಪೀಳಿಗೆಗೆ ಕುತೂಹಲವೇ.  ಇಲ್ಲಿ ಹಲವು ಹಿರಿ ಯರು ಆ ಸಂಭ್ರಮ ವನ್ನು ಕಟ್ಟಿ ಕೊಟ್ಟಿ ದ್ದಾರೆ. ಹಿರಿಯ ಸ್ವಾತಂತ್ರ್ಯ ಯೋಧ ಪಡಂಗಡಿ ಭೋಜರಾಜ ಹೆಗ್ಡೆಯವರ ಪರಿಚಯದೊಂದಿಗೆ ಸಂದೇಶವಿದೆ. ಇದು ಅಮೃತ ಮಹೋತ್ಸವ ವಿಶೇಷ.

ಬಂಟ್ವಾಳ ಪೇಟೆ ಯಲ್ಲಿ ರೇಡಿಯೊ ವೀಕ್ಷಕ ವಿವರಣೆ :

ಅಂದು ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ಹೀಗಿದ್ದಂತೆ ಟಿ.ವಿ. ಇರಲಿಲ್ಲ; ಆಕಾಶವಾಣಿ ಮತ್ತು ಪತ್ರಿಕೆಗಳಷ್ಟೇ ಇದ್ದವು.  ಮಧ್ಯರಾತ್ರಿ 12 ಕ್ಕೆ ದಿಲ್ಲಿಯಲ್ಲಿ ಜವಾಹರಲಾಲ್‌ ನೆಹರು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿದ್ದು, ಆಕಾಶವಾಣಿಯಲ್ಲಿ ಬಿತ್ತರಗೊಂಡಿತ್ತು.

“ಸ್ವಾತಂತ್ರ್ಯ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊ ಳ್ಳಲು ಮಧ್ಯರಾತ್ರಿ ವೇಳೆ 100 ರಿಂದ 150 ಮಂದಿ ಬಂಟ್ವಾಳ ಪೇಟೆ ಯಲ್ಲಿ ಸೇರಿದ್ದೆವು. ರೇಡಿಯೋ ದಲ್ಲಿ ದೇಶಭಕ್ತಿ ಗೀತೆಗಳ ಗಾಯನ ಕೇಳಿ ಬರುತ್ತಿತ್ತು. ನೆಹರು ಅವರು ಧ್ವಜಾ ರೋಹಣ ನೆರವೇರಿಸಿದ ಅಮೂಲ್ಯ ಕ್ಷಣವನ್ನು ರೇಡಿಯೊ ಬಿತ್ತರಿಸಿದಾಗ  ನಾವೆಲ್ಲ ಸಂತೋಷದಿಂದ ಸಂಭ್ರಮಿಸಿದೆವು. ಆಗ ನಾನು 8 ನೇ ತರಗತಿಯಲಿದ್ದೆ. ನನ್ನ ತಂದೆ ಬಸ್ತಿ ಮಾಧವ ಶೆಣೈ ಅವರು ರೇಡಿಯೋ ಹೊಂದಿದ್ದರು. ಈ ರೇಡಿಯೊವ‌ನ್ನು ಮನೆಯಿಂದ ಬಂಟ್ವಾಳ ಪೇಟೆಗೆ ಕೊಂಡೊಯ್ದು ಅಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಲಿಸಿದೆವು. ನೆಹರು ದೇಶ ವನ್ನು ಉದ್ದೇಶಿಸಿ ಮಾತನಾಡಿದರು. ಆಗ ಆಕಾಶ ವಾಣಿಯ ಅನೌನ್ಸರ್‌ ಆಗಿದ್ದ ಮೆಲ್ವಿನ್‌ ಡಿ’ಸೋಜಾ ಅವರು ಈ ಸಂತಸದ ಕ್ಷಣಗಳನ್ನು ಉದ್ಘೋಷಿಸಿದ್ದರು. ಅಲ್ಲಿ ಸೇರಿದ್ದ ನಾವೆಲ್ಲರೂ ಪೇಟೆಯಲ್ಲಿ ಪ್ರಭಾತಪೇರಿ ನಡೆಸಿದ್ದೆವು. ಅವೆಲ್ಲವೂ ಅನುಪಮ ಕ್ಷಣಗಳು. -ಬಸ್ತಿ ವಾಮನ ಶೆಣೈ  ಬಂಟ್ವಾಳ

ಕ್ವಿಟ್‌ ಇಂಡಿಯಾ ಎಂದಿದ್ದ ಗಾಂಧೀವಾದಿ :

ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನಾವಿದ್ದೇವೆ. ಅಂದಿನ ಸ್ವಾತಂತ್ರ್ಯ ಚಳುವಳಿಯ ಕಿಚ್ಚು ಹಳ್ಳಿ ಹಳ್ಳಿಯ ಯುವಜನರನ್ನು ಕ್ರಾಂತಿಕಾರಿ ಹೆಜ್ಜೆ ಇರಿಸಲು ಪ್ರೇರೇಪಿಸಿತ್ತು. ಅದರ ಫಲವಾಗಿ ನಾವಿಂದು ಸ್ವತಂತ್ರರು.

1942ರ ಕ್ವಿಟ್‌ ಇಂಡಿಯಾ ಚಳುವಳಿಯಿಂದ ಪ್ರೇರೇಪಿತಗೊಂಡು ಹೋರಾಟಕ್ಕೆ ಧುಮುಕಿದವರು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಭೋಜರಾಜ ಹೆಗ್ಡೆ. ಅವರಿಗೀಗ 98 ವರ್ಷ.

ನೇರ ನಡೆ-ನುಡಿ, ಅಪ್ಪಟ ಗಾಂಧೀವಾದಿ, ಖಾದಿ ವಸ್ತ್ರಧಾರಿ, ಸರಳ ಜೀವನ, ಉನ್ನತ ಚಿಂತನ, ನಿತ್ಯಜೀವನದಲ್ಲಿ ಧರ್ಮದ ಅನುಷ್ಠಾನ, ಸದಾ ಪರರ ಹಿತಕ್ಕಾಗಿ ಶ್ರಮಿಸುವ ಅವರು 1923ರ ಫೆ. 13ರಂದು ಶಾಂತಿರಾಜ ಶೆಟ್ಟಿ ಮತ್ತು ಲಕ್ಷ್ಮೀಮತಿ ದಂಪತಿಯ ಪುತ್ರನಾಗಿ ಜನಿಸಿದರು. ಬೆಳ್ತಂಗಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯವರೆಗೆ ಶಿಕ್ಷಣ ಪಡೆದರು. ಆ ಕಾಲದಲ್ಲಿ ಮುಂದಿನ ಶಿಕ್ಷಣಕ್ಕೆ ಪುತ್ತೂರು ಅಥವಾ ಮಂಗಳೂರಿಗೆ ಹೋಗಬೇಕಿತ್ತು. ಹಾಗಾಗಿ ಶಿಕ್ಷಣಕ್ಕೆ ಪೂರ್ಣವಿರಾಮ ಬಿತ್ತು.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ 1942ರಲ್ಲಿ ನಡೆದ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಸಕ್ರಿಯರಾದರು. ಮಂಗಳೂರಿನ ಗಾಂಧಿಪಾರ್ಕ್‌ನಲ್ಲಿ ನಡೆದ ಚಳುವಳಿಯಲ್ಲಿ ಭಾಗ ವಹಿಸಲು ಭೋಜರಾಜ ಹೆಗ್ಡೆಯವರು ಪಡಂಗಡಿ ಯಿಂದ ತಮ್ಮ ಶಿಕ್ಷಕ ಕುಂಞಣ್ಣ ರೈ ಅವರ ಸೈಕಲ್‌ನಲ್ಲಿ ತೆರಳಿದ್ದರು. ಧರಣಿ ಕುಳಿತವರ ಮೇಲೆ ಪೊಲೀಸರು ಲಾಠಿ ಬೀಸಿದರೂ ಅಂಜದೆ ಬ್ರಿಟಿಷರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಘರ್ಷಣೆಯಲ್ಲಿ ಧೋತಿ ಹರಿದಾಗ ಖಾದಿಯನ್ನು ಉಟ್ಟ ಹೆಗ್ಡೆಯವರು ಇಂದಿಗೂ ಖಾದಿಯನ್ನೇ ಬಳಸುತ್ತಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ದಿನ ನನ್ನ ಜೀವನದಲ್ಲಿ ಅವಿಸ್ಮರಣೀಯ. ಸ್ವಾತಂತ್ರಾéನಂತರ ರಾಷ್ಟ್ರೀಯ ಸೇವಾ ದಳದಲ್ಲಿ ತರಬೇತುದಾರನಾಗಿ ಸೇರಿಕೊಂಡೆ. ದೇಶಾದ್ಯಂತ ಅನೇಕ ಮಕ್ಕಳಿಗೆ ತರಬೇತಿ ನೀಡಿದೆ.  ಬ್ರಿಟಿಷ್‌ ಹೈಕಮಿಷನರ್‌ ಮತ್ತು ಮೊರಾರ್ಜಿ ದೇಸಾಯಿ ಅವರು ಹೆಗ್ಡೆಯ ವರಿಗೆ ಜಂಟಿಯಾಗಿ ನವೋದ್ಧಾರಕ ಪ್ರಶಸ್ತಿ ಪ್ರದಾನ ಮಾಡಿದ್ದರು. ಆಗ ಈ ಪ್ರಶಸ್ತಿ ಪಡೆದವರು 10 ಮಂದಿ ಮಾತ್ರ.

ಆಚಾರ್ಯ ವಿನೋಬಾ ಭಾವೆ ಅವರು ಭೂದಾನ ಚಳವಳಿ ಸಂದರ್ಭ ಗಾಂಧೀಜಿಯವರು ದೇಣಿಗೆ ಸಂಗ್ರಹಿ ಸುತ್ತಿದ್ದಾಗ ಹೆಗ್ಡೆಯ ವರು 5 ರೂ. ನೀಡಿದ್ದರು. ಅದು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮ. ಗಾಂಧೀಜಿ ಯವರು ಹೆಗ್ಡೆಯವರನ್ನು ಗುರುತಿಸಿ ಗುಲಾಬಿ ಕೊಟ್ಟು ಪ್ರಶಂಸಿಸಿದ್ದರು. ನಿಜಲಿಂಗಪ್ಪ ಸಿಎಂ ಆದಾಗ ಹೆಗ್ಡೆಯವರನ್ನು ಸಮ್ಮಾನಿಸಿ ಭದ್ರಾವತಿ ಯಲ್ಲಿ 5 ಎಕ್ರೆ ಭೂಮಿ ಕೊಡಲು ಬಂದಾಗ ವಿನಯವಾಗಿ ತಿರಸ್ಕರಿಸಿದ್ದರು.  ಮೊರಾ ರ್ಜಿ ದೇಸಾಯಿ ಯವರು ಗ್ರಾಮೋದ್ಧಾರಕ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಈಗ ವಯೋಸಹಜ ವಾಗಿ ದಣಿದಿದ್ದರೂ  ಹೋರಾಟದ ನೆನಪುಗಳು ಮಾಸಿಲ್ಲ. ಅದೇ ಯುವ ಜನರಿಗೆ ಪ್ರೇರಣೆ.

ಸಿದ್ಧಕಟ್ಟೆಯಲ್ಲಿ ಸಹಕಾರಿ ಸಂಘದಲ್ಲಿ ನೌಕರರಾಗಿದ್ದರು. ಪ್ರತೀ ವರ್ಷ 75 ವಿದ್ಯಾರ್ಥಿನಿಯ ರಿಗೆ ತನ್ನ ಪತ್ನಿ ನೆನಪಿನಲ್ಲಿ ಪುಸ್ತಕ ಮತ್ತು ಲೇಖನ ಪರಿಕರಗಳನ್ನು ನೀಡು ತ್ತಾರೆ. ದೀನ-ದಲಿತರಿಗೆ ನೆರವು ನೀಡುವ ಹಿರಿಯ ಗಾಂಧೀವಾದಿ ಇವರು. -ಭೋಜರಾಜ ಹೆಗ್ಡೆ ಬೆಳ್ತಂಗಡಿ

ಐತಿಹಾಸಿಕ  ಘಟನೆಗೆ  ಸಾಕ್ಷಿಯಾದೆ :

ಪ್ರಥಮ ಸ್ವಾತಂತ್ರ್ಯ ಉತ್ಸವ ದಲ್ಲಿ ರಾತ್ರಿ ಇಡೀ ಜಾಗ ರಣೆಯಲ್ಲಿದ್ದು, ಬೆಳಗ್ಗೆ ರಾಷ್ಟ್ರ ಧ್ವಜಾ ರೋಹಣ ಮಾಡಿದ್ದೇ ದೊಡ್ಡ ಅದೃಷ್ಟದ ಸಂಗತಿ.  ಅಂಚೆ ಇಲಾಖೆಯಲ್ಲಿ ಬಾಯ್‌ ಮೆಸೆಂಜರ್‌ (ಟೆಲಿ ಗ್ರಾಮ್‌ಗಳನ್ನು ತಲುಪಿಸುವ ಕೆಲಸ) ಆಗಿ ಸೇರಿದ್ದೆ. ಆ.14ರ ರಾತ್ರಿ ಇಡೀ ಕೊಳದ ಪೇಟೆಯ ಅಂಚೆ ಕಚೇರಿಯನ್ನು ಸಿಂಗರಿಸಿದೆವು. ಬೆಳಗ್ಗೆ 7ಕ್ಕೆ ರಾಷ್ಟ್ರಧ್ವಜಾರೋಹಣ ವನ್ನು ನೆರವೇರಿಸಿದೆವು. ಐತಿಹಾಸಿಕ ಘಟನೆಯಾದ ಕಾರಣ ಆಗ ಕಚೇರಿಯವರು ಚಿತ್ರವನ್ನು ತೆಗೆಸಿಕೊಳ್ಳಲಾಗಿತ್ತು. ಗುರುಕೃಪಾ ಸ್ಟುಡಿಯೋದ ಶಿರಾಲಿಯವರು ಚಿತ್ರ ತೆಗೆಯಲು ಬಂದಿದ್ದರು. ಆ ಚಿತ್ರವನ್ನು ದಾಖಲೆ ಯಾಗಿ ಇನ್ನೂ ನನ್ನಲ್ಲಿದೆ. ಅದೊಂದು ಅತ್ಯಂತ ಅಪ ರೂಪದ ಕ್ಷಣ.  ಉಡುಪಿಯಲ್ಲಿ ಶಾಲೆ ಮಕ್ಕಳು ಮೆರವಣಿಗೆ ನಡೆಸಿ ಅಜ್ಜರಕಾಡಿನಲ್ಲಿ ಸ್ವಾತಂತ್ರ್ಯ ಉತ್ಸವ ವನ್ನು ಆಚರಿಸಿದರು. ನೂರಾರು ಮಂದಿ ಸೇರಿದ್ದರು. ಊರಲ್ಲೆಲ್ಲ ಹಬ್ಬದ ವಾತಾವರಣ ನೆಲೆಸಿತ್ತು. ಎಲ್ಲೆಲ್ಲೂ ದೇಶಭಕ್ರಿಯ ವಾತಾ ವರಣ ಕಾಣುತ್ತಿತ್ತು. ಇದಕ್ಕೆಲ್ಲಾ ಸಾಕ್ಷಿಯಾದದ್ದೇ ನನ್ನ ಜೀವಮಾನದ ಅತ್ಯಮೂಲ್ಯ ಗಳಿಗೆಯಷ್ಟೇ ಅಲ್ಲ; ಅದೃಷ್ಟದ ಕ್ಷಣಗಳೂ ಹೌದು. –ಇಮ್ಯಾನ್ಯುಯಲ್‌ ಸುಚಿತ ಕುಂದರ್‌ ಉಡುಪಿ

ಟಾಪ್ ನ್ಯೂಸ್

21-wqewewqe

IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

21-wqewewqe

IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.