ಆತಂಕ, ದುಗುಡ ಯಾಕೆ? ಅಕ್ಟೋಬರ್ ತಿಂಗಳ ನಿಮ್ಮ ಮಾಸ ಭವಿಷ್ಯ ಓದಿ..

Team Udayavani, Oct 2, 2018, 6:37 AM IST

ಮುಂದಿನ ತಿಂಗಳು ಏನು ಮಾಡೋದು..ಅಂದುಕೊಂಡ ಕೆಲಸ ಆಗುತ್ತಾ? ಹಣ ಹೊಂದಿಸೋದು ಹೇಗೆ? ಬೇಸಿಗೆ ರಜೆಗೆ ದೂರ ಪ್ರಯಾಣ ಹೊರಡಬೇಕು..ಹೀಗೆ ಹತ್ತು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತೇವೆ. ಕಂಡ ಕನಸನ್ನು ನನಸು ಮಾಡಲು ಸಿದ್ಧತೆ ಮಾಡಿಕೊಂಡಿರುತ್ತೇವೆ. ಆದರೆ ಈ ಸಂದರ್ಭದಲ್ಲಿಯೇ ಏನಾದರೂ ಯಡವಟ್ಟು, ತೊಂದರೆ ಕಾಣಿಸಿಬಿಡುತ್ತದೆ. ಹೀಗಾಗಿ ಅಕ್ಟೋಬರ್ ತಿಂಗಳ ಮಾಸ ಭವಿಷ್ಯ ಇಲ್ಲಿದೆ. ಇಲ್ಲಿ ಕೆಲವೊಂದು ನಿಮ್ಮ ಆತಂಕ, ಪ್ರಶ್ನೆಗೆ ಉತ್ತರ ಸಿಗಲಿದೆ…ಓದಿ ನೋಡಿ.

ಮೇಷ: ವ್ಯಾಪಾರಿಗಳಿಗೆ, ಅಧಿಕಾರಿ ವರ್ಗದವರಿಗೆ ಸಂತಸದ ಕಾಲವಿದು. ಹೊಸ ಚಿಂತನೆಗಳು ಕಾರ್ಯಗತವಾಗಲಿದೆ. ಗೃಹ ಅಲಂಕಾರಿಕ ಸಾಮಗ್ರಿಗಳು ನಿಮಗೆ ಸಂತಸ ತರಲಿದೆ. ವಿದ್ಯಾರ್ಥಿಗಳಿಗೆ ವಿದ್ಯೆ ಪ್ರಗತಿಯ ಸಮಯವಿದು. ಆಗಾಗ ನೆಮ್ಮದಿ ಕಡಿಮೆಯಾದರೂ ಆರ್ಥಿಕವಾಗಿ ಚಿಂತೆ ಇರದು. ಕ್ರೀಡಾ ಜಗತ್ತಿನಲ್ಲಿ ಕ್ರೀಡಾಳುಗಳು ಸಂಭ್ರಮಿಸುವಂತಾದೀತು. ಕೃಷಿಕರಿಗೆ ಬಿಡುವಿಲ್ಲದ ಸಮಯ, ಕೊಂಚ ಉತ್ತೇಜನ ಕಂಡು ಬಂದೀತು. ಅವಿವಾಹಿತರಿಗೆ ವೈವಾಹಿಕ ಭಾಗ್ಯದ ಅವಕಾಶ ಒದಗಿ ಬರುವುದು.

ವೃಷಭ:ಆದಾಯವಿದ್ದರೂ ಅಧಿಕ ವೆಚ್ಚದಿಂದಾಗಿ ಕ್ಲೇಷ ತಂದೀತು. ಆರ್ಥಿಕ ವೇತನದಿಂದಾಗಿ ಕಾರ್ಮಿಕರಿಗೆ ಆನಂದ ಹೆಚ್ಚಲಿದೆ. ದೇವತಾ ಕಾರ್ಯಗಳು ಮನಸ್ಸಿನಂತಾಗಲಾರವು. ತಾತ್ಕಾಲಿಕ ಹುದ್ದೆಯವರಿಗೆ ಮುಂದುವರಿಸಿಕೊಂಡು ಹೋಗುವ ಸಾಧ್ಯತೆ ಇರುತ್ತದೆ. ನೂತನ ಕಾರ್ಯಗಳು ವಿಳಂಬಗತಿ ಪಡೆಯಲಿದೆ. ದೂರ ಸಂಚಾರದ ಅನಿವಾರ್ಯ ಸಾಧನೆಗೆ ಪೂರಕವಾಗಲಿದೆ. ಮಕ್ಕಳ ಪ್ರಗತಿಯಲ್ಲಿ ಮುನ್ನಡೆ ಸಮಾಧಾನ ತರುತ್ತದೆ. ಅವಿವಾಹಿತರಿಗೆ ಆಶಾದಾಯಕ ದಿನಗಳಿವು. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಿಥುನ:ಆಗಾಗ ಸಮಸ್ಯೆಗಳು, ಧನಾಗಮನದಲ್ಲೂ ವಿಳಂಬ. ವಿಘ್ನ ಪರಂಪರೆಯಿಂದ ಹೆಚ್ಚಿದ ಕೆಲಸ ಕಾರ್ಯಗಳು ಸ್ಥಗಿತಗೊಂಡವು. ಕೋರ್ಟ್ ವಾದ, ವಿವಾದಗಳಿಗೆ. ನಿಮ್ಮ ಪರ ಚಾಲನೆ ದೊರಕಿತು. “ಕಾರ್ಯವಾಸಿ ಕತ್ತೆ ಕಾಲು” ಎಂಬಂತೆ ನಿಮ್ಮ ಸ್ವಾಭಿಮಾನವನ್ನು ಬದಿಗೊತ್ತಿ ಕಾರ್ಯಕ್ಕಿಳಿಯಿರಿ. ಕೆಲಸವಾಗುತ್ತದೆ. ಅಧಿಕಾರಿ ವರ್ಗದವರಿಗೆ ವರ್ಗಾವಣೆ ಸಾಧ್ಯತೆ ತೋರಿ ಬಂದರೂ ಅನುಕೂಲಕರವೆನ್ನಬಹುದು. ಮುಖ್ಯವಾಗಿ ಕೌಟುಂಬಿಕ ವಿಚಾರದಲ್ಲಿಯೂ ಹೆಚ್ಚಿನ ಎಚ್ಚರ ವಹಿಸುವುದು ಅವಶ್ಯವೆನ್ನಬಹುದು.

ಕರ್ಕಾಟಕ:ಸಣ್ಣ ಪುಟ್ಟ ಅಡಚಣೆಗಳಿಂದಾಗಿ ಕೈಗೊಂಡ ಕೆಲಸ ಕಾರ್ಯಗಳು ವಿಳಂಬವಾದವು. ಪುಣ್ಯಕಾರ್ಯ, ಶುಭ ಮಂಗಳ ಕಾರ್ಯಗಳಿಗೆ ಸಕಾಲವಿದು. ವ್ಯಾಪಾರ, ವ್ಯವಹಾರಗಳಲ್ಲಿ ಆಗಾಗ ಬೇಡಿಕೆ ಹೆಚ್ಚಳ. ಪೂರೈಕೆಯಲ್ಲಿ ಹೆಣಗಾಟ ತೋರಿ ಬರುತ್ತದೆ. ಸರ್ಕಾರಿ ಅಧಿಕಾರಿವರ್ಗದವರಿಗೆ ದೂರಕ್ಕೆ ವರ್ಗಾವಣೆ, ಬವಣೆ ಬೇರೆ, ಆಗಾಗ ಹಿರಿಯರಿಂದ ಅಸಮಾಧಾನಕರ ವಾತಾವರಣ ತೋರಿ ಬಂದು ಕಾರ್ಯಲೋಪವಾದೀತು. ಯೋಗ್ಯ ವಯಸ್ಕರಿಗೆ ಉತ್ತಮ ಸಂಬಂಧಗಳು ಅನುಕೂಲಕರವಾದವು.

ಸಿಂಹ:ಕಾರ್ಯರಂಗದಲ್ಲಿ ಹೆಚ್ಚಿನ ಕಾಳಜಿ ವಹಿಸಿರಿ. ಹಿತಶತ್ರುಗಳ ಉದಯ. ಹಿರಿಯೊಡನೆ ಮತಭೇದ, ಬಂಧುಗಳೊಳಗೆ ಭಿನ್ನಾಭಿಪ್ರಾಯವಿದೆ. ಮಾತು ಕಡಿಮೆ ಇರಲಿ. ರಾಜಕೀಯ ರಂಗದಲ್ಲಿ ವ್ಯಾಪಾರ, ವ್ಯವಹಾರಗಳಲ್ಲಿಯೂ ಹಣಾಹಣಿ ಸ್ಪರ್ಧೆಗಿಳಿಯಬೇಕಾದ ಪರಿಸ್ಥಿತಿ ಇರುತ್ತದೆ. ಅಧೈರ್ಯದ ಹೆಜ್ಜೆಯಿಂದ ಕಾರ್ಯಾನುಕೂಲಕ್ಕೆ ಹಿನ್ನಡೆಯಾದೀತು. ವಿದ್ಯಾರ್ಥಿಗಳ ಆಲಸ್ಯ ಪ್ರವೃತ್ತಿಯಿಂದ ವಿದ್ಯಾಭ್ತಾಸಕ್ಕೆ ನಷ್ಟ ತಂದೀತು. ಚುರುಕು ರಾಜಕೀಯ ವೃತ್ತಿಯವರಿಗೆ ಸ್ಥಾನಮಾನ ಪ್ರಾಪ್ತಿಯಾಗುತ್ತದೆ.

ಕನ್ಯಾ:ವೃತ್ತಿರಂಗದಲ್ಲಿ ಶಹಬ್ಬಾಸ್ ಗಿರಿ ಪಡೆದು ಹರ್ಷವಿದ್ದರೂ ಪ್ರಯತ್ನಬಲಕ್ಕೆ ನಿರೀಕ್ಷಿತ ಫಲವಿರದು. ಸಹಧರ್ಮೀಣಿಯ ಸಾರ್ಥಕ ಸಹಯೋಗ, ಸುಖವರ್ಧನೆಗೆ ಪ್ರಚೋದನೆ ನೀಡಲಿದೆ. ವಿದ್ಯಾರ್ಥಿಗಳು ಅಭ್ಯಾಸಬಲವನ್ನು ಹೆಚ್ಚಿಸುವಂತಾದರೆ, ಉತ್ತಮ ಅಂಕವನ್ನು ಪಡೆಯಬಹುದಾಗಿದೆ. ಮಾನಸಿಕ ಉದ್ವೇಗ, ಬೆನ್ನು, ಸೊಂಟ, ರಕ್ತದೊತ್ತಡ ಅನಾರೋಗ್ಯದಂತಹ ಭೀತಿ ತರಲಿದೆಯಾದರೂ ರಾಹು ಬಲ ನಿಮ್ಮನ್ನು ಕಾಪಾಡಲಿದೆ. ಯಾವುದಕ್ಕೂ ದುಡುಕು ನಿರ್ಧಾರಗಳ ಬಗ್ಗೆ ಜಾಗೃತಿ ವಹಿಸಿರಿ. ಸಂಚಾರದಲ್ಲಿ ಜಾಗೃತೆ ಬೇಕು.

ತುಲಾ: ಕೋರ್ಟ್ ಕಚೇರಿ ಸಂಬಂಧ ಕೆಲಸಗಳಲ್ಲಿ ಹೆಚ್ಚಿನ ಧನವ್ಯಯವಾಗಲಿದೆ. ಚರ್ಮವ್ಯಾಧಿ, ಗುಪ್ತರೋಗಗಳ ಬಗ್ಗೆ ಜಾಗೃತೆವಹಿಸಿರಿ. ಕಾರ್ಯರಂಗದಲ್ಲಿ ಹಠಮಾರಿತನ, ವಂಚಿಸಲ್ಪಡುವಿಕೆ. ಪಾಲುಗಾರರೊಡನೆ, ಮಿತ್ರರೊಡನೆ ಕಲಹಕ್ಕೆ ಕಾರಣರಾಗದಿರಿ. ಬಂದ ಕಷ್ಟ ನಷ್ಟಗಳನ್ನು ಸಮರ್ಥವಾಗಿ ಎದುರಿಸುವ ಆತ್ಮ ವಿಶ್ವಾಸವಿರಲಿ. ಉದ್ಯೋಗಿಗಳಿಗೆ ಹೊಸ ವೃತ್ತಿಯ ಹೊಳವು ಉತ್ಸಾಹ ತಂದೀತು. ದೂರ ಸಂಚಾರ ತಂದೀತು. ನೂತನ ವಧುವರರಿಗೆ ಸಂತಾನ ಭಾಗ್ಯವಿದೆ.

ವೃಶ್ಚಿಕ: ಸ್ವತಂತ್ರ ಉದ್ಯಮದವರಿಗೆ ಮೂಲಧನ ವೃದ್ದಿಯಾಗುತ್ತದೆ. ಆಕಸ್ಮಿಕ ಧನಾಗಮನ ಹಾಗೂ ಷೇರು ವ್ಯವಹಾರಗಳ ಲಾಭಾಂಶ ಏರಿಕೆ. ಗೃಹಿಣಿಯ ಕಿರಿಕಿರಿ. ಅನಾರೋಗ್ಯ. ಸಂಶಯ ಪ್ರವೃತ್ತಿ ಪದೇ ಪದೇ ತೊಂದರೆ ನೀಡಿತು. ರಕ್ತದೊತ್ತಡದಿಂದ ನಿಮಗೂ ಚಿಕಿತ್ಸೆಕಾಲ ಜಾಗೃತೆ ವಹಿಸಿರಿ. ವೃತ್ತಿರಂಗದಲ್ಲಿ ಆಶಾಭಂಗವಿದ್ದರೂ ಕಾರ್ಯ ಸಿದ್ಧಿಯಿಂದ ತುಸು ನೆಮ್ಮದಿ ದೊರಕೀತು. ಹೊಸ ಆದಾಯದ ಮೂಲಗಳು ಗೋಚರಕ್ಕೆ ಬಂದಾವು ಸದುಪಯೋಗಕ್ಕೆ ಇದು ಸವಾಲು.

ಧನು: ಮಹತ್ವದ ಕಾರ್ಯ ಸಾಧನೆಗಾಗಿ ಪರಿಶ್ರಮ. ಬಂಧು ಸಹಕಾರವಿದೆ. ಉದ್ಯೋಗ ಬದಲಾವಣೆ ಸಾಧ್ಯತೆ ಇರುತ್ತದೆ. ನವದಂಪತಿಗಳಿಗೆ ಮಧುಚಂದ್ರ ಭಾಗ್ಯಕ್ಕೆ ದೂರ ಸಂಚಾರ ಒದಗಿ ಬಂದೀತು. ಶೈಕ್ಷಣಿಕ ನ್ಯಾಯದಾನ, ಕೈಗಾರಿಕೆ ಮುಂತಾದ ವೃತ್ತಿಯವರಿಗೆ ಕೈಗೊಂಡ ಕೆಲಸ ಕಾರ್ಯಗಳು ಎಲ್ಲಾ ರೀತಿಯಲ್ಲೂ ಅನುಕೂಲ ಮಾಡಿಕೊಡಲಿವೆ. ಕಟ್ಟಡ ನಿರ್ಮಾಣ, ಕಮಿಷನ್ ವ್ಯವಹಾರಗಳಲ್ಲಿ ನಾನಾ ರೀತಿಯಲ್ಲಿ ಲಾಭಾಂಶವಿರುತ್ತದೆ. ಮಂಗಳ ಕಾರ್ಯಗಳು, ದೇವತಾ ಕಾರ್ಯಗಳು ನಡೆಯಲಿವೆ.

ಮಕರ:ಉಷ್ಣವಾಯು ಪ್ರಕೋಪಗಳಿಂದ ಆರೋಗ್ಯ ಹಾನಿಯಾದೀತು. ಆಗಾಗ ಸಂಚಾರದಿಂದ ಸಂತಸ ತಂದರೂ ದೇಹಾಯಾಸಕ್ಕೆ ಕಾರಣವಾಗದಂತೆ ಕಾಳಜಿ ವಹಿಸಬೇಕು. ಕೋರ್ಟ್ ವಿವಾದಗಳಿಗೆ ನಿಮ್ಮ ಪರವಾಗಿ ಚಾಲನೆ ದೊರಕೀತು. ವ್ಯಾಪಾರ ವ್ಯವಹಾರದಲ್ಲಿ ಹೂಡಿಕೆಗಳು ಲಾಭಕರವಾಗಿ ಮೂಲಧನ ವೃದ್ಧಿಸಲಿದೆ. ಯಾವುದಕ್ಕೂ ದೂರಾಲೋಚನೆಯಿಂದ ಕಾರ್ಯತಂತ್ರ ರೂಪಿಸಿರಿ. ವಿದ್ಯಾರ್ಥಿಗಳ ಪ್ರಯತ್ನಬಲ ಫಲಿತಕ್ಕೆ ಬಂದೀತು. ಯಂತ್ರ ವಾಹನಾದಿ ಸಂಚಾರಿ ವೃತ್ತಿಯವರಿಗೆ ನಿರೀಕ್ಷಿತ ಲಾಭ ತಂದುಕೊಡಲಿದೆ.

ಕುಂಭ: ಕೋರ್ಟ್ ಕಚೇರಿ ಸಂಬಂಧ ಕೆಲಸಗಳಲ್ಲಿ ಹೆಚ್ಚಿನ ಧನ ವ್ಯಯವಾಗಲಿದೆ. ಕ್ರೀಡಾ ಮನೋಭಾವದವರಿಗೆ ಸಾಧನೆಯಲ್ಲಿ ನಿರೀಕ್ಷಿತ ಯಶಸ್ಸು. ಆರ್ಥಿಕ ವ್ಯವಹಾರಗಳಲ್ಲಿ ಚುರುಕು ಕಂಡೀತು. ಯೋಗ್ಯ ವಯಸ್ಕರಿಗೆ ಆಗಾಗ ಕಹಿ ಅನುಭವವಿರುತ್ತದೆ. ಸಾಂಸಾರಿಕ ಭಿನ್ನಾಭಿಪ್ರಾಯ ಕಲಹಕ್ಕೆ ಕಾರಣವಾದೀತು. ತಾಳ್ಮೆ, ಸಮಾಧಾನವಿರಲಿ. ತಾಂತ್ರಿಕ ವೃತ್ತಿಯವರಿಗೆ ಮುನ್ನಡೆ. ಆರ್ಥಿಕ ಲಾಭ ಒದಗಿಸಿಕೊಡಲಿದೆ. ವೃತ್ತಿರಂಗದಲ್ಲಿ ಅಧಿಕಾರಿಗಳ ಉಪಟಳ, ಸ್ಥಾನಚಲನೆಯ ಭೀತಿ, ಕ್ಲೇಶವೂ ಇದ್ದೀತು.

ಮೀನ:ಬಹುದಿನಗಳ ಬಳಿಕ ಬರಬೇಕಾಗಿದ್ದ ಬಾಕಿ ವಸೂಲಿಯಾಗಲಿದೆ. ಆಪ್ತೇಷ್ಟರ ಸಹಕಾರದಿಂದ ಕಾರ್ಯಸಾಧನೆಗೆ ಅನುಕೂಲ ತೋರಿ ಬಂದೀತು. ಹಿರಿಯರಿಗೆ ದೀರ್ಘಾವಧಿ ಉಪದ್ರವ ಕೊಡುವ ಅನಾರೋಗ್ಯ ತಂದೀತು. ಉದಾಸೀನತೆಯಿಂದಲೇ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಹಿನ್ನಡೆ ಕಾರಣವಾಗುತ್ತದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಬೆರೆಯಿರಿ. ಕಾರ್ಯಾನುಕೂಲವಾಗುತ್ತದೆ. ಒಮ್ಮೊಮ್ಮೆ ಖರ್ಚಿನ ಜೊತೆಗೆ ಅಶಾಂತಿ ಬೇರೆ. ಆದಾಯಕ್ಕೆ ಎಗ್ಗಿಲ್ಲ. ಸ್ವಯಂಕೃತಾಪಾರಾಧಕ್ಕೆ ಪಶ್ಚಾತ್ತಾಪ ಪಡಲಿರುವಿರಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಮದಾಸ ಬಂಗೇರ, ನಾಸಿಕ ನಮ್ಮ ತಾಯಿಯವರಿಗೆ ಈಗ ಇದ್ದಕ್ಕಿದ್ದಂತೆ ಭಯ ಸಂವೇದನೆಗಳಾಗುತ್ತವೆ. ತನ್ನನ್ನು ಯಾರೋ ಎದುರಿಗೇ ಬಂದು ಕೊಲ್ಲಲು ಹೊರಟಿದ್ದಾರೆ ಎಂಬ ತಲ್ಲಣದಲ್ಲಿ...

  • ಪ್ರಸನ್ನ ರಾಜ ಪ್ರಸಾದ, ಹ್ಯೂಸ್ಟನ್‌ ಅಮೇರಿಕ ನಾನು ಅಮೆರಿಕಾಕಕ್ಕೆ ಬಂದು ಏಳು ವರ್ಷಗಳಾಗಿವೆ. ಮಕ್ಕಳಿಗೀಗ ಕ್ರಮವಾಗಿ 3 ಹಾಗೂ 5 ವರ್ಷ. ಭಾರತಕ್ಕೆ ಹಿಂದಿರುಗೋಣ...

  • ರಾಗಿಣಿ ಅಣ್ಣಪ್ಪ, ಮುದ್ದೇಬಿಹಾಳ *ಗೂರೂಜಿ, ನನ್ನ ಮಗಳಿಗೆ ಯಾರೋ ಕೃತ್ರಿಮ ನಡೆಸಿ ವಾಮಾಚಾರ ಗೈದಿದ್ದಾರೆ. ಗೆಲುವಾಗಿಯೇ ಇದ್ದವಳು ಈಗ 6 ತಿಂಗಳಿನಿಂದ ಮಂಕಾಗಿದ್ದಾಳೆ....

ಹೊಸ ಸೇರ್ಪಡೆ