ಅನನ್ಯ ಭಟ್ ದನಿಯಲ್ಲಿ ಅರಳಿದ ‘ಆನೆಬಲ’ ಚಿತ್ರದ ಚೆಂದದ ಭಾವನೆ ಹಾಡು!
Team Udayavani, Feb 13, 2020, 4:39 PM IST
ಗ್ರಾಮೀಣ ಸೌಂದರ್ಯ, ಆಚರಣೆಯನ್ನೆ ಮೂಲ ಮಂತ್ರವಾಗಿಸಿಕೊಂಡು ಚಿತ್ರದ ಸ್ಯಾಂಪಲ್ ಗಳ ಮೂಲಕ ಗಮನ ಸೆಳೆಯುತ್ತಿರೋ ಚಿತ್ರ ‘ಆನೆಬಲ’. ಚಿತ್ರದ ಟ್ರೈಲರ್ ನೋಡಿ ಮೆಚ್ಚಿಕೊಂಡಿರೋ ಸಿನಿ ಪ್ರಿಯರು ಇದೀಗ ಚಿತ್ರದ ಚೆಂದದ ಹಾಡಿಗೆ ತಲೆದೂಗುತ್ತಿದ್ದಾರೆ.
ಆನೆಬಲ ಚಿತ್ರದ ಚೆಂದದ ಭಾವನೆ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಚಿತ್ರದ ಸಾಹಿತ್ಯ, ಪೂರ್ಣಚಂದ್ರ ತೇಜಸ್ವಿ ಸೊಗಸಾದ ಟ್ಯೂನ್ ಹಾಗೂ ಗಾಯಕಿ ಅನನ್ಯ ಭಟ್ ಅವ್ರ ಮಧುರ ಕಂಠ ಮ್ಯಾಜಿಕ್ ಸೃಷ್ಟಿ ಮಾಡಿದೆ. ರಿಪೀಟ್ ಮೂಡ್ನಲ್ಲಿ ಕೇಳುಗರು ಈ ಹಾಡುನ್ನು ಕೇಳುತ್ತಿದ್ದು, ಆಡು ಭಾಷೆಯಲ್ಲಿಯೇ ಅರಳಿದ ಈ ಹಾಡು ಎಲ್ಲರಿಗೂ ಮುದ ನೀಡುತ್ತಿದೆ.
ಮಂಡ್ಯ ಆಡು ಭಾಷೆ ಸಿನಿಮಾಗಳಲ್ಲಿ ಸಖತ್ ಫೇಮಸ್ ಆಗಿದ್ದು, ಆ ಆಡು ಭಾಷೆ ಹಾಗೂ ಮಂಡ್ಯದ ಜನಪದ ಆಚರಣೆ, ಹಳ್ಳಿ ಬದುಕು ಇದ್ರ ಸುತ್ತ ಕಥೆ, ಚಿತ್ರಕಥೆ ಹೆಣೆದ ಚಿತ್ರವೇ ‘ಆನೆಬಲ’. ನವ ನಿರ್ದೇಶಕ ಸೂನಗಹಳ್ಳಿ ರಾಜು ನಿರ್ದೇಶನದಲ್ಲಿ ಅರಳಿದ ಈ ಚಿತ್ರದಲ್ಲಿ ಸಾಗರ್, ರಕ್ಷಿತ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ಧಾರೆ. ಎ.ವಿ. ವೇಣುಗೋಪಾಲ್ ಅಡಕಮಾರನಹಳ್ಳಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಫೆಬ್ರವರಿ 28ಕ್ಕೆ ಚಿತ್ರ ಬಿಡುಯಾಗುತ್ತಿದೆ.