ಟ್ರೇಲರ್ನಲ್ಲಿ ‘ರಾಮಾರ್ಜುನ’ ಝಲಕ್: ಜ.29ಕ್ಕೆ ಥಿಯೇಟರ್ನಲ್ಲಿ ದರ್ಶನ
Team Udayavani, Jan 24, 2021, 9:39 AM IST
ನಟ ಅನೀಶ್ ತೇಜೇಶ್ವರ್ ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ ಹೊಸಚಿತ್ರ “ರಾಮಾರ್ಜುನ’ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ. ಇದೇ ಜ. 29ಕ್ಕೆ “ರಾಮಾರ್ಜುನ’ ತೆರೆಗೆ ಬರುತ್ತದೆ. ಕಳೆದ ಕೆಲ ದಿನಗಳಿಂದ ಭರದಿಂದ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ, ಶನಿವಾರ “ರಾಮಾರ್ಜುನ’ ದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಬಿಡುಗಡೆಯಾಗಿರುವ ಟ್ರೇಲರ್ ಸಿನಿ ಪ್ರಿಯರ ಗಮನ ಸೆಳೆಯುತ್ತಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
“ವಿಂಕ್ಷಲ್ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಆನಂದ್ ರಾಜವಿಕ್ರಮ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ರೊಮ್ಯಾಂಟಿಕ್ ಹಾಡೊಂದಕ್ಕೆ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ವಿಕ್ರಂ ಮೋರ್ ಸಾಹಸ, ಶಂಕರ್ ರಾಮನ್, ಕಿರಣ್ ಚಂದ್ ಸಂಭಾಷಣೆ ಇದೆ.
ಇದನ್ನೂ ಓದಿ:ಬರ್ತ್ಡೇ ಸಂಭ್ರಮದಲ್ಲಿ ಅಜೇಯ್: ಲವ್ ಯೂ ರಚ್ಚು ಹೊಸ ಚಿತ್ರಕ್ಕೆ ಚಾಲನೆ
ಇನ್ನು ಈ ಹಿಂದೆ “ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದಲ್ಲಿ ಜೋಡಿಯಾಗಿದ್ದ ನಟಿ ನಿಶ್ವಿಕಾ ನಾಯ್ಡು ಈ ಚಿತ್ರದಲ್ಲೂ ಅನೀಶ್ ತೇಜೇಶ್ವರ್ಗೆ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ರಂಗಾಯಣ ರಘು, ಶರತ್ ಲೋಹಿತಾಶ್ವ, ಹರೀಶ್ ರಾಜ್, ಅರುಣ ಬಾಲರಾಜ್, ಸ್ವಾತಿ, ಗಿರೀಶ್ ಶಿವಣ್ಣ, ದೀಪಕ್ ಶೆಟ್ಟಿ, ಹನುಮಂತೇಗೌಡ, ಸೀನಿಮಿತ್, ಉಗ್ರಂ ಮಂಜು, ಮಂಜು ಪಾವಗಡ, ಶಿವಾನಂದ ಸಿಂಧಗಿ, ಭರತ್, ಲೋಕಿ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಲವ್, ಆ್ಯಕ್ಷನ್, ಸೆಂಟಿಮೆಂಟ್ ಕಥಾಹಂದರ ಹೊಂದಿರುವ “ರಾಮಾರ್ಜುನ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಸಹ ನಿರ್ಮಾಪಕರಾಗಿದ್ದು, “ಕೆಆರ್ಜಿ ಸ್ಟುಡಿಯೋಸ್’ ಮೂಲಕ ಚಿತ್ರ ತೆರೆಗೆ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ