ಚರ್ಚ್ನಲ್ಲಿ ಚಿರು-ಮೇಘನಾ ಮದುವೆ
Team Udayavani, May 1, 2018, 10:57 AM IST
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ವಿವಾಹ ಭಾನುವಾರ ಕೋರಮಂಗಲದ ಸೇಂಟ್ ಅಂಥೋನಿ ಚರ್ಚ್ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಯಿತು. ಎರಡು ಕುಟುಂಬದವರು ಚರ್ಚ್ನಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮದುವೆ ಶಾಸ್ತ್ರ ನಡೆಯಿತು. ಮೇಘನಾ ಅವರ ತಾಯಿ ಕ್ರಿಶ್ಚಿಯನ್ ಆಗಿರುವುದರಿಂದ ಮೊದಲು ಚರ್ಚ್ನಲ್ಲಿ ಮದುವೆ ನಡೆಯಿತು.
ಫಾದರ್ ಪ್ರವೀಣ್ ಅವರು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನಡೆಸಿಕೊಟ್ಟರು. ಮೇಘನಾ ಬಿಳಿ ಬಣ್ಣದ ಗೌನ್ ಹಾಗೂ ಚಿರಂಜೀವಿ ಸೂಟ್ನಲ್ಲಿ ಕಂಗೊಳಿಸುತ್ತಿದ್ದರು. ಎರಡು ಕುಟುಂಬದ ಆಪ್ತ ವರ್ಗ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಮೇ 2 ರಂದು ಅರಮನೆ ಮೈದಾನದಲ್ಲಿ ಚಿರು-ಮೇಘನಾ ವಿವಾಹ ಹಿಂದೂ ಸಂಪ್ರದಾಯದಂತೆ ನಡೆಯಲಿದೆ.
ಚಿರು-ಮೇಘನಾ ಮದುವೆಯಲ್ಲಿ ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ಕಮಲ್ ಹಾಸನ್, ರಜನೀಕಾಂತ್ ಸೇರಿದಂತೆ ಅನೇಕರನ್ನು ಕುಟುಂಬದವರು ಆಹ್ವಾನಿಸಿದ್ದಾರೆ.