ಟೆನ್ನಿಸ್‌ಕೃಷ್ಣ ಪುತ್ರನ ಸಿನಿಮಾ ಎಂಟ್ರಿ

Team Udayavani, Nov 12, 2019, 6:01 AM IST

ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಹಲವು ಕಲಾವಿದರ ಮಕ್ಕಳು ಹೀರೋಗಳಾಗಿ ಎಂಟ್ರಿಯಾಗಿದ್ದಾರೆ. ಹಲವು ಹಾಸ್ಯ ಕಲಾವಿದರ ಮಕ್ಕಳೂ ಆ ಸಾಲಿಗೆ ಸೇರಿದ್ದಾರೆ. ಈಗ ಟೆನ್ನಿಸ್‌ಕೃಷ್ಣ ಅವರ ಪುತ್ರನ ಸರದಿ. ಹೌದು, ಟೆನ್ನಿಸ್‌ಕೃಷ್ಣ ಅವರ ಪುತ್ರ ನಾಗಾರ್ಜುನ್‌ ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡಲು ಅಣಿಯಾಗಿದ್ದಾರೆ.

ಒಬ್ಬ ಹೀರೋ ಆಗಲು ಏನೆಲ್ಲಾ ಅರ್ಹತೆಗಳು ಇರಬೇಕೋ ಅವೆಲ್ಲವನ್ನೂ ಕರಗತ ಮಾಡಿಕೊಂಡೇ ಕ್ಯಾಮೆರಾ ಮುಂದೆ ಬಂದು ನಿಲ್ಲಲು ಸಜ್ಜಾಗುತ್ತಿದ್ದಾರೆ. ನಾಗಾರ್ಜುನ್‌ ಈಗಾಗಲೇ ಡ್ಯಾನ್ಸ್‌ ಕಲಿತಿದ್ದಾರೆ. ನಟನೆ ತರಬೇತಿಯಲ್ಲಿದ್ದಾರೆ. ಅಷ್ಟಕ್ಕೂ ನಾಗಾರ್ಜುನ್‌ ಯಾವ ಸಿನಿಮಾ ಮೂಲಕ ಹೀರೋ ಆಗುತ್ತಿದ್ದಾರೆ ಎಂಬ ಪ್ರಶ್ನೆಗೆ, ಟೆನ್ನಿಸ್‌ಕೃಷ್ಣ ಅವರ ನಿರ್ದೇಶನದ ಹೊಸ ಚಿತ್ರ ಉತ್ತರ.

ಹೌದು, ಅವರ ಪುತ್ರ ನಾಗಾರ್ಜುನ್‌ ಚಿತ್ರವನ್ನು ಟೆನ್ನಿಸ್‌ಕೃಷ್ಣ ಅವರೇ ನಿರ್ದೇಶನ ಮಾಡಲಿದ್ದಾರೆ. ಆ ಬಗ್ಗೆ ಹೇಳುವ ಅವರು, “ಈಗಾಗಲೇ ನನ್ನ ಮಗ ನಾಗಾರ್ಜುನ್‌ನನ್ನು ನೋಡಿದ ಅನೇಕರು, ಸಿನಿಮಾ ಮಾಡುವಂತೆ ಹೇಳುತ್ತಿದ್ದರು. ಅವನಿಗೂ ಆಸಕ್ತಿ ಇತ್ತು.

ಅದಕ್ಕೆ ಸರಿಯಾಗಿ ಕಲಿಕೆಯೂ ಆಯ್ತು. ಈಗ ನಾನೇ ಒಂದು ಕಥೆ ಹೆಣೆದಿದ್ದೇನೆ. ಒಂದಿಬ್ಬರು ನಿರ್ಮಾಪಕರು ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಸದ್ಯಕ್ಕೆ ಶೀರ್ಷಿಕೆ ಪಕ್ಕಾ ಆಗಿಲ್ಲ. ಇಷ್ಟರಲ್ಲೇ ಎಲ್ಲವೂ ಪಕ್ಕಾ ಆಗಲಿದೆ. ಆ ಬಳಿಕ ಉಳಿದ ಮಾಹಿತಿ ಕೊಡುತ್ತೇನೆ’ ಎನ್ನುತ್ತಾರೆ ಟೆನ್ನಿಸ್‌ಕೃಷ್ಣ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಾರಿಗೆ ತಂದಿರುವ ಫಾಸ್ಟಾಗ್‌ ವ್ಯವಸ್ಥೆ ವಾಹನ ಚಾಲಕ-ಮಾಲೀಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದೇ ಹೇಳಬೇಕಾಗುತ್ತದೆ....

  • ಶಬರಿಮಲೆ: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಯಾತ್ರೆ ಆರಂಭವಾಗಿ 28 ದಿನಗಳು ಪೂರೈಸಿದ್ದು, ದೇಗುಲದ ಆದಾಯವು 104 ಕೋಟಿ ರೂ. ದಾಟಿದೆ ಎಂದು ತಿರುವಾಂಕೂರು...

  • ಮುಂಬಯಿ: 'ಶೋಲೆ,' 'ಗರಂ ಹವಾ', 'ತ್ರಿಶೂಲ್‌' ಖ್ಯಾತಿಯ, ಹಿಂದಿ ಸಿನೆಮಾ ಕ್ಷೇತ್ರದ ಹಿರಿಯ ನಟಿ ಗೀತಾ ಸಿದ್ಧಾರ್ಥ್ ನಿಧನ ಹೊಂದಿದ್ದಾರೆ. ಸಿನೆಮಾ ಮತ್ತು ಟಿವಿ ಕಲಾವಿದರ...

  • ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಬೆಳ್ತಂಗಡಿಯ ಮಂಜೊಟ್ಟಿ ಮತ್ತು ಮೂಡುಬಿದಿರೆ ಸಮೀಪದ ಶಿರ್ತಾಡಿಯಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಐವರು ಮೃತಪಟ್ಟಿದ್ದಾರೆ....

  • ನೋಯ್ಡಾ: ನೋಯ್ಡಾದಲ್ಲಿ ರಸ್ತೆ ಬದಿಯಲ್ಲಿ ಬಿರಿಯಾನಿ ಮಾರುತ್ತಿದ್ದ ಯುವಕನ ಮೇಲೆ ಜಾತಿ ಹೆಸರಿನಲ್ಲಿ ನಿಂದಿಸಿ, ಥಳಿಸಲಾಗಿದೆ. ಈ ಬಗೆಗಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ...