ಮರಳಿ ಟ್ರ್ಯಾಕ್‌ನತ್ತ ಚಿತ್ರರಂಗ

ಮುಹೂರ್ತ, ಚಿತ್ರೀಕರಣ ಶುರು

Team Udayavani, Aug 10, 2020, 10:29 AM IST

ಮರಳಿ ಟ್ರ್ಯಾಕ್‌ನತ್ತ ಚಿತ್ರರಂಗ

ಸಾಂದರ್ಭಿಕ ಚಿತ್ರ

ಇತ್ತ ಕಡೆ ನಿಧಾನವಾಗಿ ಸಿನಿಮಾ ಮುಹೂರ್ತಗಳು ಕೂಡಾ ಆರಂಭವಾಗುತ್ತಿವೆ. ಸುಮಾರು ನಾಲ್ಕು ತಿಂಗಳ ಬಳಿಕ ಸಿನಿಮಾವೊಂದು ಮುಹೂರ್ತ ಆಚರಿಸಿಕೊಳ್ಳುವ ಮೂಲಕ ಸಿನಿಮಾಗಳ ಅಧಿಕೃತ ಮುಹೂರ್ತಕ್ಕೆ ಚಾಲನೆ ಸಿಕ್ಕಂತಾಗಿದೆ.

ಎಷ್ಟು ದಿನಾಂತ ಹೆದರಿ ಕೂರೋದು, ಇನ್ನು ನಿಧಾನವಾಗಿ ಕೆಲಸ ಶುರು ಮಾಡಲೇಬೇಕು … – ಹೀಗೊಂದು ನಿರ್ಧಾರಕ್ಕೆ ಕನ್ನಡ ಚಿತ್ರರಂಗದ ಮಂದಿ ಬಂದಿದ್ದಾರೆ. ಅದರ ಪರಿಣಾಮವಾಗಿಯೇ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ.

ನಿಧಾನವಾಗಿ ಸಿನಿಮಾ ಮುಹೂರ್ತ, ಪೋಸ್ಟರ್‌ ರಿಲೀಸ್‌, ಬಾಕಿ ಇರುವ ಚಿತ್ರೀಕರಣಗಳು ನಡೆಯುತ್ತಿವೆ. ಈ ಮೂಲಕ ಚಿತ್ರರಂಗ ಮತ್ತೆ ತನ್ನ ಹಳೆಯ ಖದರ್‌ಗೆ ಮರಳುವ ಲಕ್ಷಣಗಳು ಕಾಣುತ್ತಿವೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದಷ್ಟು ಸಿನಿಮಾಗಳು ಅರ್ಧಕ್ಕೆ ನಿಂತಿರುವ ಚಿತ್ರೀಕರಣ ಮಾಡಲು ಮುಂದಾಗಿವೆ. ಭಜರಂಗಿ 2, ಕೆಜಿಎಫ್-2, ಪೊಗರು, ಯುವರತ್ನ, ಕಬj.. ಅನೇಕ ಸ್ಟಾರ್‌ ನಟರ ಸಿನಿಮಾಗಳ ಚಿತ್ರೀಕರಣ ಅರ್ಧಕ್ಕೆ ನಿಂತಿದ್ದವು. ಈಗ ಚಿತ್ರೀಕರಣ ಪೂರೈಸಲು ಮುಂದಾಗಿವೆ. ಪೂರ್ವ ಸಿದ್ಧತೆಗಳೊಂದಿಗೆ ಬಾಕಿ ಉಳಿದಿರುವ ಚಿತ್ರೀಕರಣ ಪೂರೈಸಿ, ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ.

ಇತ್ತ ಕಡೆ ನಿಧಾನವಾಗಿ ಸಿನಿಮಾ ಮುಹೂರ್ತಗಳು ಕೂಡಾ ಆರಂಭವಾಗುತ್ತಿವೆ. ಸುಮಾರು ನಾಲ್ಕು ತಿಂಗಳ ಬಳಿಕ ಸಿನಿಮಾವೊಂದು ಮುಹೂರ್ತ ಆಚರಿಸಿಕೊಳ್ಳುವ ಮೂಲಕ ಸಿನಿಮಾಗಳ ಅಧಿಕೃತ ಮುಹೂರ್ತಕ್ಕೆ ಚಾಲನೆ ಸಿಕ್ಕಂತಾಗಿದೆ. “ಹೇ ರಾಮ್‌’ ಎಂಬ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆದಿದೆ. ಇದಲ್ಲದೇ ಇನ್ನೊಂದಿಷ್ಟು ಸಿನಿಮಾಗಳು ಮುಹೂರ್ತ ಆಚರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಕೊರೊನಾ ಲಾಕ್‌ಡೌನ್‌ನಿಂದ ಎಲ್ಲಾ ಕ್ಷೇತ್ರಗಳು ಸ್ತಬ್ಧವಾಗಿದ್ದವು. ಅದರಂತೆ ಸಿನಿಮಾ ಕ್ಷೇತ್ರ ಕೂಡಾ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಈಗ ನಿಧಾನವಾಗಿ ಚಿತ್ರರಂಗ ತೆರೆದುಕೊಳ್ಳುತ್ತಿವೆ. ಈಗಾಗಲೇ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಜೋರಾಗಿ ನಡೆಯುತ್ತಿವೆ.

ಈ ಎಲ್ಲಾ ಚಟುವಟಿಕೆಗಳ ಮಧ್ಯೆಯೇ ಚಿತ್ರಮಂದಿರ ಯಾವಾಗ ತೆರೆಯುತ್ತದೆ ಎಂಬ ಪ್ರಶ್ನೆ ಸಿನಿಮಾ ಮಂದಿಯನ್ನು ಕಾಡುತ್ತಿದೆ. ಆದರೆ, ಇದಕ್ಕೆ ನಿಖರ ಉತ್ತರವಿಲ್ಲ. ಆದರೆ, ಶೀಘ್ರದಲ್ಲೇ ತೆರೆಯುತ್ತದೆ ಎಂಬ ಭರವಸೆಯಂತೂ ಇದೆ. ಏಕೆಂದರೆ ಒಂದೊಂದೇ ಕ್ಷೇತ್ರಗಳು ಕಾರ್ಯಾರಂಭಿಸಿವೆ. ಹಾಗಾಗಿ, ಚಿತ್ರಮಂದಿರಗಳು ಕೂಡಾ ಶೀಘ್ರವೇ ತೆರೆಯುವ ಭರವಸೆಯೊಂದಿಗೆ ಚಿತ್ರರಂಗ ಮತ್ತೆ ಗರಿಗೆದರುತ್ತಿದೆ. ­

ಟಾಪ್ ನ್ಯೂಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.