ಬಿಡುಗಡೆಯ ಹೊಸ್ತಿಲಿನಲ್ಲಿ ಪಾರ್ವತಮ್ಮನ ಮಗಳು


Team Udayavani, May 22, 2019, 3:21 PM IST

ATP_01

“ಡಾಟರ್‌ ಆಫ್ ಪಾರ್ವತಮ್ಮ’, ಕಳೆದ ಎರಡು-ಮೂರು ತಿಂಗಳಿನಿಂದ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸತತವಾಗಿ ಸೌಂಡ್‌ ಮಾಡುತ್ತಿರುವ ಹೆಸರು. ಕನ್ನಡ ಚಿತ್ರರಂಗಕ್ಕೂ ಪಾರ್ವತಮ್ಮ ಎನ್ನುವ ಹೆಸರಿಗೂ ಮೊದಲಿನಿಂದಲೂ ಅವಿನಾಭಾವ ನಂಟು. ಈಗ ಇದೇ ಹೆಸರಿನಲ್ಲಿ ಡಾಟರ್‌ ಅಫ್ ಪಾರ್ವತಮ್ಮ ಎನ್ನುವ ಚಿತ್ರ ತೆರೆಗೆ ಬರುತ್ತಿದೆ. ಅಂದಹಾಗೆ, ಚಿತ್ರದ ಸಬ್ಜೆಕ್ಟ್ ಗೆ

ಹೋಲಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಚಿತ್ರಕ್ಕೆ ಇಂಥದ್ದೊಂದು ಟೈಟಲ್‌ ಇಟ್ಟುಕೊಂಡಿದೆ. ಇನ್ನು ಈ ಚಿತ್ರದಲ್ಲಿ ಪಾರ್ವತಮ್ಮನ ಪಾತ್ರದಲ್ಲಿ ಹಿರಿಯ ನಟಿ ಸುಮಲತ ಅಂಬರೀಶ್‌ ಕಾಣಿಸಿಕೊಂಡರೆ, ಪಾರ್ವತಮ್ಮನ ಮಗಳ ಪಾತ್ರಕ್ಕೆ ನಟಿ ಹರಿಪ್ರಿಯಾ ಬಣ್ಣ ಹಚ್ಚಿದ್ದಾರೆ. ಸದ್ಯ ತನ್ನ ಅಂತಿಮ ಹಂತದ ಪ್ರಮೋಶನ್‌ ಕೆಲಸಗಳಲ್ಲಿ ಬ್ಯುಸಿಯಾಗಿರುವ ಪಾರ್ವತಮ್ಮನ ಬಳಗ ಇದೇ ಮೇ 24ರಂದು ಅದ್ದೂರಿಯಾಗಿ ಪಾರ್ವತಮ್ಮನ ಮಗಳನ್ನು ಪ್ರೇಕ್ಷಕರ ಮುಂದೆ ತರುತ್ತಿದೆ.

ಸಾಮಾನ್ಯವಾಗಿ ಮಕ್ಕಳು ದೊಡ್ಡ ಸಾಧನೆ ಮಾಡಿದರೆ, ಅವರನ್ನು ಹೆತ್ತವರ ಹೆಸರಿನಿಂದ ಗುರುತಿಸುವುದು ವಾಡಿಕೆ. ಈ ಚಿತ್ರದಲ್ಲೂ ಕೂಡ, ಒಬ್ಬ ಹುಡುಗಿಯೊಬ್ಬಳ ಕೆಲಸವನ್ನು ಅವಳ ತಾಯಿ ಪಾರ್ವತಮ್ಮನ ಹೆಸರಿನ ಮೂಲಕ ಸಮಾಜ ಗುರುತಿಸುತ್ತದೆ. “ಡಾಟರ್‌ ಆಫ್ ಪಾರ್ವತಮ್ಮ’ ಅನ್ನೋದೇ ಒಂದು ಎನರ್ಜಿಟಿಕ್‌ ಟೈಟಲ್‌. ಹಾಗಾಗಿ, ಚಿತ್ರದ ಪಾತ್ರಗಳಲ್ಲೂ ಅಂಥದ್ದೇ ಪವರ್‌ಫ‌ುಲ್‌ ಎನಿಸುವಂಥ ಕ್ಯಾರೆಕ್ಟರ್ ಇರಬೇಕು ಎಂಬ ಉದ್ದೇಶದಿಂದ ಚಿತ್ರತಂಡ, ಹರಿಪ್ರಿಯಾ ಅವರೇ ಆ ಪಾತ್ರಕ್ಕೆ ಸೂಕ್ತ ಎಂದು ಯೋಚಿಸಿ, ಅವರಿಗೆ ವೈದೇಹಿ ಪಾತ್ರ ಕೊಟ್ಟಿದೆ.

ಇನ್ನು, “ಪಾರ್ವತಮ್ಮ’ ಎಂಬ ಪವರ್‌ಫ‌ುಲ್‌ ತಾಯಿಯ ಪಾತ್ರಕ್ಕೂ ಇಲ್ಲಿ ದೊಡ್ಡ ಜಾಗವಿದ್ದು, ಅದನ್ನು ಹಿರಿಯ ನಟಿ ಸುಮಲತಾ ಅಂಬರೀಶ್‌ ನಿರ್ವಹಿಸಿದ್ದಾರೆ. ಒಟ್ಟಾರೆ ತಾಯಿ-ಮಗಳ ಬಾಂಧವ್ಯ, ಲವ್‌, ಎಮೋಷನ್ಸ್‌, ಆ್ಯಕ್ಷನ್ಸ್‌ ಎಲ್ಲವೂ ಇಲ್ಲಿ ಹೈಲೈಟ್‌ ಎನ್ನುವುದು ಚಿತ್ರತಂಡದ ಮಾತು.

ಹೆಚ್ಚಿದ ನಿರೀಕ್ಷೆ
ಮೊದಲು ಈ ಚಿತ್ರದ ಟೈಟಲ್‌ ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಭಯದಲ್ಲೆ ಟೈಟಲ್‌ ಅನೌನ್ಸ್‌ ಮಾಡಿದ್ದ ಚಿತ್ರತಂಡ ಆ ನಂತರ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್‌ ನೋಡಿ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಿದೆ. ಸದ್ಯ ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಅಂತಿಮ ಹಂತದ ಪ್ರಮೋಶನ್‌ ಕೆಲಸಗಳಲ್ಲಿ ನಿರತವಾಗಿರುವ “ಡಾಟರ್‌ ಅಫ್ ಪಾರ್ವತಮ್ಮ’ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫ‌ಸ್ಟ್‌ಲುಕ್‌, ಪೋಸ್ಟರ್‌ ಮತ್ತು ಟೀಸರ್‌, ಸಾಂಗ್ಸ್‌, ಲಿರಿಕಲ್‌ ವೀಡಿಯೊ ಎಲ್ಲವೂ ಸೂಪರ್‌ ಹಿಟ್‌ ಆಗಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಪುನೀತ್‌ ರಾಜಕುಮಾರ್‌ ಒಡೆತನದ ಪಿಆರ್‌ಕೆ ಆಡಿಯೋ ಖರೀದಿಸಿದೆ. ರಿಲೀಸ್‌ಗೂ ಮೊದಲೇ ಸಾಕಷ್ಟು ಡಿಮ್ಯಾಂಡ್‌ ಕ್ರಿಯೇಟ್‌ ಮಾಡಿಕೊಂಡಿರುವ, “ಡಾಟರ್‌ ಅಫ್ ಪಾರ್ವತಮ್ಮ’ನ ಮೇಲೆ ಚಿತ್ರರಂಗ ಮತ್ತು ಪ್ರೇಕ್ಷಕರು ಇಟ್ಟುಕೊಂಡಿರುವ ಎಲ್ಲಾ ನಿರೀಕ್ಷೆಗಳಿಗೆ ಈ ವಾರ ಉತ್ತರ ಸಿಗಲಿದೆ.

ಪಕ್ಕಾ ಮನರಂಜನೆ, ಪೈಸಾ ವಸೂಲ್‌
“ಡಾಟರ್‌ ಅಫ್ ಪಾರ್ವತಮ್ಮ’ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ಚಿತ್ರತಂಡ, ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಚಿತ್ರ ಎನ್ನುತ್ತದೆ. ಒಂದು ಚಿತ್ರದಲ್ಲಿ ಇರಬೇಕಾದ ಸೆಂಟಿಮೆಂಟ್‌, ಎಮೋಷನ್ಸ್‌, ಲವ್‌, ಆ್ಯಕ್ಷನ್ಸ್‌, ಕಾಮಿಡಿ, ಥ್ರಿಲ್ಲರ್‌ ಎಲಿಮೆಂಟ್ಸ್‌ ಎಲ್ಲವೂ ಚಿತ್ರದಲ್ಲಿದೆ. ಎರಡು ಫೈಟ್ಸ್‌, ಭರ್ಜರಿ ಚೇಸ್‌ ದೃಶ್ಯಗಳು ಚಿತ್ರದಲ್ಲಿದೆ. ಅಮ್ಮ-ಮಗಳು ಕಂಬಿನೇಷನ್‌ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ. ಇಡೀ ಚಿತ್ರದಲ್ಲಿ ಎಲ್ಲೂ ಕೆಟ್ಟ ಪದ ಪ್ರಯೋಗ ಮಾಡಿಲ್ಲ. ಅಶ್ಲೀಲ ದೃಶ್ಯಗಳಿಲ್ಲ. ಇತ್ತೀಚೆಗೆ ಚಿತ್ರವನ್ನು ನೋಡಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಕೂಡ ಚಿತ್ರದ ಯಾವುದೇ ದೃಶ್ಯ, ಸಂಭಾಷಣೆಗಳಿಗೆ ಆಕ್ಷೇಪವೆತ್ತದೆ ಚಿತ್ರಕ್ಕೆ ಯು ಸರ್ಟಿಫಿಕೇಟ್‌ ನೀಡಿದೆ. ಹಾಗಾಗಿ ಒಂದೇ ಮಾತಿನಲ್ಲಿ ಹೇಳ್ಳೋದಾದ್ರೆ “ಡಾಟರ್‌ ಅಫ್ ಪಾರ್ವತಮ್ಮ’ ಇಡೀ ಕುಟುಂಬ ಕುಳಿತು ನೋಡಬಹುದಾದ, ಪಕ್ಕಾ ಪೈಸಾ ವಸೂಲ್‌ ಚಿತ್ರ ಅನ್ನೋದು ಚಿತ್ರತಂಡದ ಮಾತು.

ಕನಸಿನ ಸಿನಿಮಾ
ದಿಶಾ ಎಂಟರ್‌ಟೈನ್ಮೆಂಟ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಡಾಟರ್‌ ಆಫ್ ಪಾರ್ವತಮ್ಮ ಚಿತ್ರವನ್ನು ಶಶಿಧರ್‌ ಕೆ.ಎಂ, ಕೃಷ್ಣ, ಮಧು, ಸಂದೀಪ್‌ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರದ ಬಗ್ಗೆ ಹೇಳುವ ಶಶಿಧರ್‌, ಕೆ.ಎಂ., ಚಿತ್ರದ ಹೈಲೈಟ್‌ ಅಂದರೆ ಅದು ಹಿರಿಯ ನಟಿ ಸುಮಲತಾ ಅಂಬರೀಶ್‌ ಮತ್ತು ಹರಿಪ್ರಿಯಾ ಅವರು. ಇದು ಹರಿಪ್ರಿಯಾ ಅವರ ವೃತ್ತಿ ಜೀವನದ 25 ನೇ ಚಿತ್ರ ಎಂಬುದು ವಿಶೇಷ. ಇದೇ ಮೊದಲ ಸಲ ಅವರು ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇದುವರೆಗೆ ಹಲವು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದ ಹರಿಪ್ರಿಯಾ ಅವರು, ಗ್ಲಾಮರಸ್‌ ಪಾತ್ರಗಳ ಮೂಲಕ ಗಮನಸೆಳೆದಿದ್ದರು.

ಆದರೆ, ಇಲ್ಲಿ ಪಕ್ಕಾ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ. ಅದೊಂದು ವಿಭಿನ್ನ ಲುಕ್‌ನಲ್ಲಿ ಮಿಂಚಿದ್ದಾರೆ. ಇನ್ನು, ಚಿತ್ರದಲ್ಲಿ ಸೂರಜ್‌ ಗೌಡ, ಪ್ರಭು, ತರಂಗ ವಿಶ್ವ, ರಾಘವೇಂದ್ರ, ಶ್ರೀಧರ್‌, ಸುಧಿ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಅರೂಲ್‌ ಕೆ. ಸೋಮಸುಂದರಂ ಛಾಯಾಗ್ರಹಣ, ಸುರೇಶ್‌ ಆರ್ಮುಗಂ ಸಂಕಲನ, ಪ್ರಗತಿ ರಿಷಭ್‌ ಶೆಟ್ಟಿ ಕಾಸ್ಟೂéಮ್‌, ಮಿಧುನ್‌ ಮುಕುಂದನ್‌ ಸಂಗೀತ ಸಂಯೋಜನೆ ಇದೆ. ಈ ಹಿಂದೆ ಹಲವು ಚಿತ್ರಗಳಿಗೆ ಸಹ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಶಂಕರ್‌. ಜೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ’ ಎಂದು ವಿವರ ಕೊಡುತ್ತಾರೆ.

200ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಅದ್ಧೂರಿ ಬಿಡುಗಡೆ
ಸದ್ಯ “ಡಾಟರ್‌ ಅಫ್ ಪಾರ್ವತಮ್ಮ’ ಚಿತ್ರಕ್ಕೆ ಸಿಗುತ್ತಿರುವ ಭರ್ಜರಿ ರೆಸ್ಪಾನ್ಸ್‌ ನೋಡಿ ಖುಷಿಯಾಗಿರುವ ಚಿತ್ರತಂಡ ಇದೇ ಮೇ 24ರಂದು ರಾಜ್ಯದಾದ್ಯಂತ ಸುಮಾರು 200ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

ಟಾಪ್ ನ್ಯೂಸ್

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.