​​​​​​​ಧನಂಜಯ್ ಈಗ “ಪಾಪ್‍ಕಾರ್ನ್ ಮಂಕಿ ಟೈಗರ್’

Team Udayavani, May 23, 2018, 11:02 AM IST

“ಟಗರು’ ನಂತರ ಧನಂಜಯ್ ಅಭಿನಯದಲ್ಲಿ ಸೂರಿ ಇನ್ನೊಂದು ಚಿತ್ರವನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈ ಸುದ್ದಿಯನ್ನು ಸ್ವತಃ ಸೂರಿ ಒಪ್ಪಿಕೊಂಡಿದ್ದರು ಮತ್ತು ಸದ್ಯದಲ್ಲೇ ಚಿತ್ರ ಶುರು ಮಾಡುವುದಾಗಿ ಹೇಳಿಕೊಂಡಿದ್ದರು.

ಚಿತ್ರ ಯಾವಾಗ ಶುರುವಾಗುತ್ತದೋ ಗೊತ್ತಿಲ್ಲ. ಆದರೆ, ಚಿತ್ರಕ್ಕೆ “ಪಾಪ್‍ಕಾರ್ನ್ ಮಂಕಿ ಟೈಗರ್’ ಎಂದು ನಾಮಕರಣ ಮಾಡಲಾಗಿದೆ. ಹೌದು, ಸೂರಿ ನಿರ್ದೇಶನದ ಹೊಸ ಚಿತ್ರಕ್ಕೆ “ಪಾಪ್‍ಕಾರ್ನ್ ಮಂಕಿ ಟೈಗರ್’ ಎಂದು ಹೆಸರಿಡಲಾಗಿದ್ದು, ಈ ಚಿತ್ರದಲ್ಲಿ ಧನಂಜಯ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಷ್ಟಕ್ಕೂ “ಪಾಪ್‍ಕಾರ್ನ್ ಮಂಕಿ ಟೈಗರ್’ ಏನು ಎಂಬ ಪ್ರಶ್ನೆ ಬರುವುದು ಸಹಜ. ಆ ಪ್ರಶ್ನೆಗೆ ಚಿತ್ರಕ್ಕೆ ಕಥೆಯನ್ನೂ ಬರೆಯುತ್ತಿರುವ ಸೂರಿ ಅವರೇ ಉತ್ತರಿಸಬೇಕಿದೆ. ಅಂದಹಾಗೆ, ಈ ಚಿತ್ರವನ್ನು “ಟಗರು’ ನಿರ್ಮಿಸಿದ್ದ ಕೆ.ಪಿ. ಶ್ರೀಕಾಂತ್ ಅವರೇ ನಿರ್ಮಿಸುತ್ತಿರುವುದು ವಿಶೇಷ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ