ಚೌಕೂರ್ ಗೇಟ್ಗೆ ಡಬ್ಬಿಂಗ್ ಮುಕ್ತಾಯ
Team Udayavani, Jan 28, 2018, 11:38 AM IST
ಶರಣು ಹೆಚ್ ಕಾಳೆ ಕಲ್ಬುರ್ಗಿ ನಿರ್ಮಿಸಿರುವ “ಚೌಕೂರ್ಗೇಟ್’ ಚಿತ್ರಕ್ಕೆ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಈ ಚಿತ್ರನ್ನು ದಿನೇಶ್ ನಿರ್ದೇಶನ ಮಾಡಿದ್ದಾರೆ. ಹರಿಕಾಂತ್ ಅವರು ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ನಿತಿನ್ ಅಕ್ಷಯ್ ಅವರ ಸಂಗೀತವಿದೆ.
ಸುರೇಶ್ ಬೆಳ್ತಂಗಡಿ ಅವರು ಗೀತೆಗಳನ್ನು ರಚಿಸಿದ್ದಾರೆ. ಸುರೇಶ್ ಕಾಳೆ ಕಲಾನಿರ್ದೇಶನ ಮಾಡಿದರೆ, ಮನಮೋಹನ್ ಅವರು ನೃತ್ಯ ಸಂಯೋಜಿಸಿದ್ದಾರೆ. ಪವರ್ ಪುಷ್ಪರಾಜ್ ಸಾಹಸವಿದೆ. ಕುಮಾರ್ ಕೋಟಿಕೊಪ್ಪ ಅವರು ಸಂಕಲನ ಮಾಡಿದ್ದಾರೆ. ಇದೊಂದು ಲವ್ ಮತ್ತು ಥ್ರಿಲ್ಲರ್ ಕಥೆ.
ಇದರೊಳಗೆ ಸಸ್ಪೆನ್ಸ್ ಕೂಡ ಇದೆ. ಚಿತ್ರದಲ್ಲಿ ಅರವಿಂದ್, ಗಡ್ಡಪ್ಪ, ಪವಿತ್ರಾ, ಅರ್ಚನಾ, ರಕ್ಷಿತ್ ಅರಸ್ ಗೋಪಾಲ್, ಕುರಿರಂಗ, ಬಸವರಾಜ್ ಕುಮಾರ್, ಶರಣುಕಾಳೆ, ರಾಯ್ ಕಾಳೆ, ಯೋಗೀಶ್ ಕುರಿ, ಗಾಳಿ ವೆಂಕಟೇಶ್ ಇತರರು ನಟಿಸಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರದ ಚಿತ್ರೀಕರಣ ಮೈಸೂರು, ಮಂಡ್ಯ, ಮೇಲುಕೋಟೆ, ಶ್ರೀರಂಗಪಟ್ಟಣ ಸುತ್ತ,ಮುತ್ತ ನಡೆದಿದೆ.