ಎಲ್ಲಿದ್ದೆ … ಚಿತ್ರಕ್ಕೆ ಸೆಲೆಬ್ರೆಟಿಗಳ ಮೆಚ್ಚುಗೆ
Team Udayavani, Oct 15, 2019, 3:03 AM IST
ಸೃಜನ್ ಲೋಕೇಶ್ ನಾಯಕರಾಗಿರುವ “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಇತ್ತೀಚೆಗೆ ಸೆಲೆಬ್ರೆಟಿ ಶೋ ಆಯೋಜಿಸಿತ್ತು. ನಟರಾದ ದರ್ಶನ್, ಪ್ರಜ್ವಲ್, ಹಿರಿಯ ನಟಿಯರಾದ ಜಯಂತಿ, ಉಮಾಶ್ರೀ ಸೇರಿದಂತೆ ಚಿತ್ರರಂಗದ ಅನೇಕರು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದರು.
ಇದೇ ವೇಳೆ ನಟ ಸೃಜನ್ ಲೊಕೇಶ್ ಚಿತ್ರದ ಗೆಲುವನ್ನು ತಂದೆ ಲೊಕೇಶ್ ಅವರಿಗೆ ಅರ್ಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೃಜನ್, ಅಪ್ಪಾ, ನಮ್ಮ ಹೃದಯದಲ್ಲಿ ನೆಲೆಗೊಂಡು, ನೀವು ಭೌತಿಕವಾಗಿ ನಮ್ಮನ್ನು ಅಗಲಿ, ಇವತ್ತಿಗೆ ಹದಿನೈದು ವರ್ಷ.
ನಿಮ್ಮ ಹೆಸರಿನಲ್ಲಿ ನಿರ್ಮಿಸಿದ “ಎಲ್ಲಿದ್ದೆ ಇಲ್ಲಿ ತನಕ..’ ಚಿತ್ರದ ಗೆಲುವು ಕನ್ನಡಿಗರ ಆಶೀರ್ವಾದ, ಹಾರೈಕೆ..ಇದು ನಿಮಗೆ ಅರ್ಪಣೆ ಅಪ್ಪಾ..ಅಪ್ಪಾ ಐ ಲವ್ ಯೂ ಪಾ..’ ಎಂದು ಟ್ವೀಟ್ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರ ಲೊಕೇಶ್ ಪ್ರೊಡಕ್ಷನ್ಸ್ನಲ್ಲಿ ನಿರ್ಮಾಣವಾಗಿದ್ದು, ತೇಜಸ್ವಿ ನಿರ್ದೇಶನ ಮಾಡಿದ್ದಾರೆ. ಹರಿಪ್ರಿಯಾ ಈ ಚಿತ್ರದ ನಾಯಕಿ.
ಅಪ್ಪಾ,
ನಮ್ಮ ಹೃದಯದಲ್ಲಿ ನೆಲೆಗೊಂಡು,
ನೀವು ಭೌತಿಕವಾಗಿ ನಮ್ಮನ್ನು ಅಗಲಿ,
ಇವತ್ತಿಗೆ ಹದಿನೈದು ವರ್ಷ.ನಿಮ್ಮ ಹೆಸರಿನಲ್ಲಿ ನಿರ್ಮಿಸಿದ
`ಎಲ್ಲಿದ್ದೆ ಇಲ್ಲೀ ತನಕ..’ ಚಿತ್ರದ ಗೆಲುವು
ಕನ್ನಡಿಗರ ಆಶೀರ್ವಾದ, ಹಾರೈಕೆ..
ಇದು ನಿಮಗೆ ಅರ್ಪಣೆ ಅಪ್ಪಾ..ಅಪ್ಪಾ ಐ ಲವ್ ಯೂ ಪಾ.. pic.twitter.com/b0ofqE6BhZ
— srujan lokesh (@srujanlokesh) October 14, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ