ಹೊಸಬರ ಕನಸಿನ ‘ಎವಿಡೆನ್ಸ್’ ಫಸ್ಟ್ ಲುಕ್ ಟೀಸರ್ ಔಟ್
Team Udayavani, Jan 29, 2021, 4:07 PM IST
ಒಂದೇ ಲೊಕೇಶನ್‌ನಲ್ಲಿ, ಎರಡು ಪಾತ್ರಗಳನ್ನು ಇಟ್ಟುಕೊಂಡು, ಕೇವಲ ಐದೇ ದಿನಗಳಲ್ಲಿ ಇಡೀ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿ ಸುದ್ದಿಯಾಗಿದ್ದ “ಎವಿಡೆನ್ಸ್’ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ.
ಸಸ್ಪೆನ್ಸ್ ಕಂ ಕ್ರೈಂ – ಥ್ರಿಲ್ಲರ್ ಕಥಾಹಂದರ ಹೊಂದಿರುವ “ಎವಿಡೆನ್ಸ್’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತಿಚೆಗೆ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಾಡಿದೆ. ನಟ ಕಂ ನಿರ್ದೇಶಕ ಸಂತ ಮುರಳಿ ಮೋಹನ್ “ಎವಿಡೆನ್ಸ್’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದರೆ, “ಕೆಜಿಎಫ್’ ಖ್ಯಾತಿಯ ನಟ ಕೃಷ್ಣಪ್ಪ ಚಿತ್ರದ ಟೀಸರ್‌ನ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇನ್ನು ಯುವ ಪ್ರತಿಭೆ ಪ್ರವೀಣ್ ರಾಮಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ “ಎವಿಡೆನ್ಸ್’ ಚಿತ್ರದಲ್ಲಿ ಮಾನಸ ಜೋಶಿ ಮತ್ತು ರೋಬೋ ಗಣೇಶ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಶ್ರೀಧೃತಿ ಪೊ›ಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾವಾಗಿರುವ “ಎವಿಡೆನ್ಸ್’ ಚಿತ್ರಕ್ಕೆ ಪಿ. ಅರವಿಂದ ಕುಮಾರ್, ಡಾ. ಕೊಡ್ಲಾಡಿ ಸುರೇಂದ್ರ ಶೆಟ್ಟಿ, ಎಂ.ಎನ್. ರವೀಂದ್ರ ರಾವ್, ನರಸಿಂಹ ಮೂರ್ತಿ ಎ.ಬಿ ಕಾವಲು, ಕಿಶೋರ್ ಬಾಬು, ಪ್ರಶಾಂತ್ ಸಿ.ಪಿ ಮತ್ತು ಚಂದ್ರರಾಜ್. ಕೆ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.
ಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣ, ಚೆಲುವಮೂರ್ತಿ ಸಂಕಲನವಿದೆ. ಚಿತ್ರದ 2 ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸಿದ್ದು, ಆರ್. ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ಮುಂದುವರೆದ ಅಧ್ಯಾಯ’ ಡೈಲಾಗ್ ಟೀಸರ್ ರಿಲೀಸ್: ಕ್ರೈಂ ಕಥಾಹಂದರದ ಚಿತ್ರದಲ್ಲಿ ಆದಿತ್ಯ
‘ಪೊಗರು’ ವೀಕ್ಷಿಸಿದ ಪ್ರಶಾಂತ್ ನೀಲ್ ಸಿನಿಮಾ ಬಗ್ಗೆ ಹೇಳಿದ್ದೇನು ?
ಚಿತ್ರೀಕರಣದಲ್ಲಿ ಬಿಝಿಯಾಗಿದೆ ಪೃಥ್ವಿ, ಮಿಲನಾ ನಾಗರಾಜ್ ರ ‘ಫಾರ್ ರಿಜಿಸ್ಟ್ರೇಷನ್’
ಪ್ರೇಕ್ಷಕರಿಗೆ ಅಪಥ್ಯವಾಗಿದ್ದು ಸೆನ್ಸಾರ್ಗೆ ಪಥ್ಯ ಹೇಗೆ? ವಿವಾದಿತ ದೃಶ್ಯಗಳಿಗೆ ಯಾರು ಹೊಣೆ?
ನೋಡುಗರ ಅಭಿರುಚಿಗೆ ತಕ್ಕಂತೆ ಆರು ಚಿತ್ರಗಳು ಈ ವಾರ ತೆರೆಗೆ
MUST WATCH
ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆ
ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ನೂತನ ಗರ್ಭಗುಡಿಯ ಶಿಲಾನ್ಯಾಸ
ಕೋಟ್ಟಾ ಕಾಯ್ದೆಗೆ ಕಾರ್ಮಿಕ ವಿರೋಧಿ ತಿದ್ದುಪಡಿ ವಿರೋಧಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ
ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ
ರಾಷ್ಟ್ರಮಟ್ಟದ ಜಾದೂ ದಿನಾಚರಣೆ: ಮಂಗಳೂರಿನಲ್ಲಿ ಮನಸೂರೆಗೊಂಡ ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ
ಹೊಸ ಸೇರ್ಪಡೆ
ಭಾರತದ ಕಿರೀಟಕ್ಕೆ ನೊಬೆಲ್ ಗರಿ ತಂದುಕೊಟ್ಟ ರವೀಂದ್ರನಾಥ ಠಾಗೋರ್
1,800 ಕೋಟಿ ರೂ. ಮೊತ್ತದ ಟೆಂಡರ್ ರದ್ದು ವಿಚಾರ: ಸಚಿವ ಸುಧಾಕರ್ ಗೆ ಹೈಕೋರ್ಟ್ ನೋಟಿಸ್
ತೈಲ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ: ಈಶ್ವರಪ್ಪ
ಸದ್ದಿಲ್ಲದೆ ಶುರುವಾಯ್ತು ‘ಜಾಲಿ ಲೈಫ್’ ಕೆಲಸ: ಸಾಧು ಕೋಕಿಲ ನಿರ್ದೇಶನ
ಬೇಸಿಗೆಯಲ್ಲಿ ಕಣ್ಣುಗಳ ರಕ್ಷಣೆಗೆ ಟ್ರೆಂಡಿ ಸನ್ ಗ್ಲಾಸ್ ..!