ರಾಜ್‌ ಜನ್ಮದಿನದಲ್ಲಿ ಮಿಂದೆದ್ದ ಅಭಿಮಾನಿಗಳು


Team Udayavani, Apr 25, 2017, 11:48 AM IST

raj-flower-show.jpg

ಅಲ್ಲಿ ಎತ್ತ ನೋಡಿದರೂ ಹಬ್ಬದ ಸಂಭ್ರಮ. ರಾರಾಜಿಸುತ್ತಿದ್ದ ಭಾವಚಿತ್ರಗಳು, ಸಾಲುಗಟ್ಟಿದ್ದ ಜನಜಂಗುಳಿ. ಮುಗಿಲು ಮುಟ್ಟಿದ್ದ ಜೈಕಾರ, ಕೈಯಲ್ಲಿ ತರಹೇವಾರಿ ಹೂವು, ಹಾರಗಳು, ಇವೆಲ್ಲದರ ಜತೆಗೆ ಕಣ್ತುಂಬಿಕೊಂಡ ಮನಸುಗಳು…

ಇದೆಲ್ಲಾ ಕಂಡು ಬಂದದ್ದು ಕಂಠೀರ ಸ್ಟುಡಿಯೋದಲ್ಲಿ. ಏಪ್ರಿಲ್‌ 24 ಅಂದರೆ, ಅದು ಡಾ.ರಾಜ್‌ಕುಮಾರ್‌ ಅವರ ಅಭಿಮಾನಿಗಳ ಪಾಲಿಗೆ ನಾಡಹಬ್ಬವಿದ್ದಂತೆ. ವರನಟ ಡಾ.ರಾಜ್‌ಕುಮಾರ್‌ ಅವರ 89 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳದ್ದೇ ಕಾರುಬಾರು.

ಹಾಗಾಗಿ, ಅವರ ಸಮ್ಮುಖದಲ್ಲೇ ಸ್ಮಾರಕ ಬಳಿ, ಡಾ.ರಾಜ್‌ಕುಮಾರ್‌ ಕುಟುಂಬ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜನ್ಮದಿನ ಆಚರಿಸಿತು. ಬೆಳಗ್ಗೆ ಡಾ.ರಾಜ್‌ಕುಮಾರ್‌ ಅವರ ಸ್ಮಾರಕ ಬಳಿ ಆಗಮಿಸಿದ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮರ್‌ ಹಾಗೂ ಪುನೀತ್‌ರಾಜ್‌ಕುಮಾರ್‌, ರಾಜ್‌ಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಜ್ಯೋತಿ ಬೆಳಗಿದರು.

ಅವರೊಂದಿಗೆ ರಾಜ್‌ಕುಮಾರ್‌ ಅವರ ಸಹೋದರಿ ನಾಗಮ್ಮ, ಗೀತಾ ಶಿವರಾಜ್‌ಕುಮಾರ್‌, ವಿನಯ್‌ರಾಜ್‌ಕುಮಾರ್‌, ಗೋವಿಂದ್‌ರಾಜ್‌ ಸೇರಿದಂತೆ ಡಾ.ರಾಜ್‌ಕುಮಾರ್‌ ಅವರ ಕುಟುಂಬ ಸ್ಮಾರಕಕ್ಕೆ ನಮನ ಸಲ್ಲಿಸಿತು. ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಪುನೀತ್‌ರಾಜ್‌ಕುಮಾರ್‌ ಅವರುಗಳು ಅಭಿಮಾನಿಗಳಿಗೆ ಊಟ ಬಡಿಸುವ ಮೂಲಕ ಚಾಲನೆ ಕೊಟ್ಟರು.

ಸಾಲಾಗಿ ಬಂದ ಸಾವಿರಾರು ಅಭಿಮಾನಿಗಳು, ರಾಜ್‌ಕುಮಾರ್‌ ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ, ಜೈಕಾರ ಹಾಕಿದ್ದು ಸಾಮಾನ್ಯವಾಗಿತ್ತು. ಇನ್ನು, ಕೆಲವರು ಅಣ್ಣಾವ್ರ ಫೋಟೋ ಹಿಡಿದು, ಸ್ಮಾರಕದ ಎದುರು ನಮಸ್ಕರಿಸುತ್ತಿದ್ದದ್ದು ಕಂಡು ಬಂತು. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ನಟ,ನಟಿಯರು, ನಿರ್ಮಾಪಕ, ನಿರ್ದೇಶಕರುಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-wqeqeqwe

List ಅಲ್ಲಿ ಹೆಸರಿಲ್ಲದೆ ಮಮತಾ ಬ್ಯಾನರ್ಜಿ ಸಹೋದರನಿಗೆ ಮತ ಹಾಕಲು ಸಾಧ್ಯವಾಗಲಿಲ್ಲ!

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆBandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Parameshwar

CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್

1——-sdasd

Konaje; ಕಂಪೌಂಡ್ ವಾಲ್ ಕುಸಿದು ಹಾಜಬ್ಬರ ಶಾಲೆಯ ವಿದ್ಯಾರ್ಥಿನಿ ಮೃತ್ಯು

Heavy rain ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ: ಜನಜೀವನ ಅಸ್ತವ್ಯಸ್ತ

Heavy rain ಕಾಫಿನಾಡಲ್ಲಿ ಮುಂದುವರಿದ ಗಾಳಿ- ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ತ

Amit Shah 2

Rahul Gandhi ಜೂನ್ 4 ರ ನಂತರ ‘ಕಾಂಗ್ರೆಸ್ ಧುಂಡೋ ಯಾತ್ರೆ’ ನಡೆಸಬೇಕಾಗುತ್ತದೆ: ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sambhavami yuge yuge kannada movie

Kannada Cinema; ರಿಲೀಸ್‌ ಅಖಾಡಕ್ಕೆ ಸಂಭವಾಮಿ ಯುಗೇ ಯುಗೇ..

Rachana Rai is the heroine of Darshan’s film Devil

Devil; ದರ್ಶನ್ ಚಿತ್ರಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Vikasa parva Kannada movie

Kannada Movie; ಸೆನ್ಸಾರ್ ಪಾಸಾದ ‘ವಿಕಾಸ ಪರ್ವ’

Biography of Mother Teresa in web series

Mother Teresa; ವೆಬ್‌ ಸೀರೀಸ್‌ನಲ್ಲಿ ಮದರ್‌ ತೆರೇಸಾ ಜೀವನ ಚರಿತ್ರೆ

Re Release; ಭರ್ಜರಿ ಓಪನಿಂಗ್‌ ಪಡೆದ ಉಪ್ಪಿ ‘ಎ’

Re Release; ಭರ್ಜರಿ ಓಪನಿಂಗ್‌ ಪಡೆದ ಉಪ್ಪಿ ‘ಎ’

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-wqeqeqwe

List ಅಲ್ಲಿ ಹೆಸರಿಲ್ಲದೆ ಮಮತಾ ಬ್ಯಾನರ್ಜಿ ಸಹೋದರನಿಗೆ ಮತ ಹಾಕಲು ಸಾಧ್ಯವಾಗಲಿಲ್ಲ!

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

1-wqeqwewq

Goa:ಬೋಟ್ ನಲ್ಲಿ ಅಪಾಯಕ್ಕೆ ಸಿಲುಕಿದ್ದ 26 ಪ್ರವಾಸಿಗರ ರಕ್ಷಣೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆBandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Parameshwar

CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.