ಫಾರಿನ್ ಶೂಟಿಂಗ್ಗೆ ಸಾಥ್ ಕೊಡಲಿದೆ ‘ಫ್ಯಾಶನ್ ಎಬಿಸಿಡಿ’
Team Udayavani, Oct 3, 2021, 12:57 PM IST
ಸಿನಿಮಾಗಳನ್ನು ವಿದೇಶಗಳಲ್ಲಿ ಚಿತ್ರೀಕರಿಸಬೇಕು, ಅದ್ಧೂರಿ ಲೊಕೇಶನ್ ತೋರಿಸಬೇಕು ಎಂಬ ಆಸೆ ಪ್ರತಿಯೊಬ್ಬ ಹೊಸ ನಿರ್ಮಾಪಕನದ್ದಾಗಿರುತ್ತದೆ. ಆದರೆ, ಸಹಜವಾಗಿಯೇ ವಿದೇಶದಲ್ಲಿ ಚಿತ್ರೀಕರಣ ಮಾಡುವಾಗ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ.
ಮುಖ್ಯವಾಗಿ ಸರಿಯಾದ ಮಾರ್ಗದರ್ಶನ, ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹೋಗುವ ಸಂಸ್ಥೆ ಬೇಕು. ಈಗ ಅದನ್ನೆಲ್ಲ ಕಾನೂನಿನ ಚೌಕಟ್ಟಿನಡಿ ನಿವಾರಿಸಿಕೊಡಲು ಫ್ಯಾಷನ್ ಎಬಿಸಿಡಿ ಎಂಬ ಸಂಸ್ಥೆ ಮುಂದೆ ಬಂದಿದೆ.
ಈ ಸಂಸ್ಥೆ ಬರೀ ಕಾನೂನು ತೊಡಕು ಮಾತ್ರವಲ್ಲದೇ ಎಲ್ಲ ವ್ಯವಸ್ಥೆಯನ್ನು ತಾನೇ ಮಾಡಿಕೊಡಲಿದೆ. ಯಾವುದೇ ತೊಂದರೆ ಇಲ್ಲದೆ ಸರಾಗವಾಗಿ ಚಿತ್ರೀಕರಣ ಮುಗಿಸಿಕೊಳ್ಳುವ ಅನುಕೂಲತೆಗಳನ್ನು ಕನ್ನಡ ಚಿತ್ರತಂಡಗಳಿಗೆ ಫ್ಯಾಷನ್ ಎಬಿಸಿಡಿ ಸಂಸ್ಥೆ ಮಾಡಿಕೊಡಲಿದೆಯಂತೆ. ಚರಣ್ ಸುವರ್ಣ ಅವರು ಈ ಫ್ಯಾಶನ್ ಎಬಿಸಿಡಿಯ ನೇತೃತ್ವ ವಹಿಸಿದ್ದಾರೆ.
ಇದು ಮಂಗಳೂರು ಮೂಲದ ಸಂಸ್ಥೆ. ಈ ಸಂಸ್ಥೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ನೊವೆಲ್ ವರ್ಕ್ಸ್ ಎಂಬ ಮತ್ತೂಂದು ಸಂಸ್ಥೆಯೊಂದಿಗೆ ಕೈ ಜೋಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!