Udayavni Special

ಫಸ್ಟ್ ಲವ್: ಲವ್ ಗುರುವಿನ ಮೊದಲ ಪ್ರೇಮ ಪ್ರಕರಣ


Team Udayavani, Aug 17, 2017, 11:50 AM IST

first-love.jpg

ಇದುವರೆಗೂ ಅವರ ಧ್ವನಿ ಮಾತ್ರ ಜನರಿಗೆ ಗೊತ್ತಿತ್ತು. ಈಗ ಕೊನೆಗೆ “ಲವ್‌ ಗುರು’ ರಾಜೇಶ್‌ ಅವರ ಮುಖ ಪರಿಚಯ ಕನ್ನಡಿಗರಿಗಾಗುತ್ತಿದೆ. ಈ ಶುಕ್ರವಾರ (ಆಗಸ್ಟ್‌ 18) ಬಿಡುಗಡೆಯಾಗುತ್ತಿರುವ “ಫ‌ಸ್ಟ್‌ ಲವ್‌’ ಎಂಬ ಚಿತ್ರದ ಮೂಲಕ “ಲವ್‌ ಗುರು’ ರಾಜೇಶ್‌ ಹೀರೋ ಆಗುತ್ತಿದ್ದಾರೆ. ಈ ಚಿತ್ರವನ್ನು ಅಶೋಕ್‌ ಲಮಾಣಿ ಅವರು ನಿರ್ಮಿಸಿದರೆ, ಮಲ್ಲಿಕಾರ್ಜುನ್‌ ಅಲಿಯಾಸ್‌ ಮಲ್ಲಿ ಎನ್ನುವವರು ಚಿತ್ರಕ್ಕೆ ಕಥೆ-ಚಿತ್ರಕಥೆಯನ್ನು ರಚಿಸಿದ್ದಾರೆ. ಇಷ್ಟಕ್ಕೂ ಏನೀ “ಫ‌ಸ್ಟ್‌ ಲವ್‌’ ಎಂಬ ಕುತೂಹಲ ಬರದೇ ಇರದು. ಇದು ಪ್ರತಿಯೊಬ್ಬರ ಜೀವನದ ಮೊದಲ ಪ್ರೇಮ ಎನ್ನುತ್ತಾರೆ ನಿರ್ದೇಶಕ ಮಲ್ಲಿ.

“ಪ್ರತಿಯೊಬ್ಬರ ಜೀವನದಲ್ಲೂ ಒಮ್ಮೆಯಾದರೂ ಪ್ರೇಮಾಂಕುರವಾಗುತ್ತದೆ ಮತ್ತು ಅಂತಹ ಪ್ರೇಮದ ಕಥೆಯೇ ಈ ಚಿತ್ರ’ ಎನ್ನುತ್ತಾರೆ ಅವರು. ಇದೇನು ಅವರ ಪ್ರೇಮಕಥೆಯಾ ಎಂದರೆ, ಅಲ್ಲಲ್ಲ ನಿರ್ಮಾಪಕರ ಮಿತ್ರರದು ಎನ್ನುತ್ತಾರೆ ಅವರು.  ಮಲ್ಲಿ, ನಿರ್ಮಾಪಕ ಅಶೋಕ್‌ ಲಮಾಣಿ ಅವರಿಗೆ ಒಂದು ಕಥೆ ಹೇಳಿ ಒಪ್ಪಿಸುವುದಕ್ಕೆ ಹೋಗಿದ್ದರಂತೆ. ಕಥೆ ಕೇಳಿದ ಅಶೋಕ್‌ ಲಮಾಣಿ, “ಕಥೆಯೇನೋ ಚೆನ್ನಾಗಿದೆ. ಆದರೆ,
ಇದಕ್ಕಿಂತ ಇನ್ನೂ ಒಂದು ಚೆಂದದ ಕಥೆ ಇದೆ’ ಎಂದರಂತೆ. ಯಾವುದದು ಕಥೆ ಎಂದು ನೋಡಿದರೆ, ಅದು ನಿರ್ಮಾಪಕರ ಸ್ನೇಹಿತರ ಜೀವನದಲ್ಲಾದ ಒಂದು ನೈಜ ಘಟಣೆ. ಆ ಘಟನೆಯನ್ನು ಅಶೋಕ್‌ ಲಮಾಣಿ ಒಮ್ಮೆ ಕೇಳಿಸಿದರಂತೆ. ಕಥೆ ಕೇಳಿ ಖುಷಿಯಾದ
ಮಲ್ಲಿ, ತಮ್ಮ ಕಥೆ ಪಕ್ಕಕ್ಕಿಟ್ಟು, ಈ ಕಥೆಗೆ ಚಿತ್ರ ಬರೆದು ನಿರ್ದೇಶನ ಮಾಡಿದ್ದಾರೆ. ಈ ಕಥೆಯಲ್ಲೊಂದು ಅದ್ಭುತವಾದ ಸಂದೇಶವಿದೆಯಂತೆ. ಅದೇ ಈ ಚಿತ್ರದ ಹೈಲೈಟ್‌ ಎನ್ನುತ್ತಾರೆ ಅವರು. ಇನ್ನು ಚಿತ್ರದ ಹಾಡುಗಳು ಮತ್ತು ಲೊಕೇಶನ್‌ ಗಳ ಬಗ್ಗೆಯೂ ಅವರಿಗೆ ಖುಷಿಯಿದೆ.

ಬಿಜಾಪುರ, ಚಿಕ್ಕಮಗಳೂರು, ಬೆಂಗಳೂರು ಮುಂತಾದ ಕಡೆ ಅವರು ಹಾಡುಗಳನ್ನು ಚಿತ್ರೀಕರಣ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಹಿಮದ ನಡುವೆ ಚಿತ್ರೀಕರಣ ಮಾಡಿದ್ದು ಮರೆಯಲಾರದ ಅನುಭವ ಎನ್ನುತ್ತಾರೆ ಅವರು. ಇನ್ನು “ಲವ್‌ ಗುರು’ ರಾಜೇಶ್‌ ಅವರಿಗೆ ಇದು ಮೊದಲ ಸಿನಿಮಾ. ಇದಕ್ಕೂ ಮುನ್ನ ಅವರಿಗೆ ಅಭಿನಯದ ಗಂಧ-ಗಾಳಿ ಗೊತ್ತಿರಲಿಲ್ಲವಂತೆ.

ಆದರೂ ನಿರ್ದೇಶಕರ ಮೇಲಿನ ನಂಬಿಕೆಗೆ ಕ್ಯಾಮೆರಾ ಮುಂದೆ ಬಂದು ನಿಂತರಂತೆ. “ನಮ್ಮ ನಿರ್ದೇಶಕರು ಯಾವತ್ತೂ ಒಂದು ಮಾತು ಹೇಳುತ್ತಿದ್ದರು. ಪಾತ್ರವನ್ನು ಜೀವಿಸಬೇಕು ಅಂತ. ಹಾಗೆಂದರೆ ಏನು ಅಂತ ನನಗೆ ಅರ್ಥವಾಗೋಕೆ ಒಂದು ಹಂತದ ಚಿತ್ರೀಕರಣ
ಬೇಕಾಯ್ತು. ಸಾಮಾನ್ಯವಾಗಿ ಎಲ್ಲರೂ ಚಿತ್ರೀಕರಣದ ಸಂದರ್ಭವನ್ನು ಪಿಕ್‌ನಿಕ್‌ಗೆ ಹೋಲಿಸುತ್ತಾರೆ.

ಚಿತ್ರೀಕರಣ ಒಳ್ಳಿ ಪಿಕ್‌ನಿಕ್‌ ಇದ್ದ ಹಾಗಿತ್ತು ಎನ್ನುತ್ತಾರೆ. ಆದರೆ, ನನಗೆ ಖಂಡಿತಾ ಹಾಗನಿಸಲಿಲ್ಲ. ಏಕೆಂದರೆ, ಸಮಯ ಕಳೆಯೋಕೆ ಅವಕಾಶವೇ ಇರಲಿಲ್ಲ. ಹೊಸಬನಾದ್ದರಿಂದ ಕಲಿಯೋದು ತುಂಬಾ ಇತ್ತು. ಹಾಗಾಗಿ ಒಂದು ನಿಮಿಷ ವೇಸ್ಟ್‌ ಮಾಡದೆ, ಸತತವಾಗಿ
ಕಲಿತಿದ್ದೀನಿ. ಇನ್ನು ಮೊದಲೇ ಹೇಳಿದಂತೆ ನನಗೆ ನಟನೆ ಗೊತ್ತಿರಲಿಲ್ಲ. ನಿರ್ದೇಶಕರ ಸಹಕಾರವಿಲ್ಲದಿದ್ದರೆ ನಟಿಸೋಕೆ ಸಾಧ್ಯತೆ ಇರಲಿಲ್ಲ’ ಎನ್ನುತ್ತಾರೆ ರಾಜೇಶ್‌.

“ಫ‌ಸ್ಟ್‌ ಲವ್‌’ ಚಿತ್ರದಲ್ಲಿ ರೇಡಿಯೋ ಜಾಕಿ ರಾಜೇಶ್‌, ಕವಿತಾ ಗೌಡ, ಸ್ನೇಹ ನಾಯರ್‌, ವೆಂಕಟ್‌ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್‌ ವಿ. ಸಂಭ್ರಮ್‌ ಅವರ ಸಂಗೀತ, ಸುರೇಶ್‌ ಬಾಬು ಅವರ ಛಾಯಾಗ್ರಹಣವಿದೆ. 

ಟಾಪ್ ನ್ಯೂಸ್

ಸಾವರ್ಕರ್‌ ದೇಶಭಕ್ತಿಯನ್ನು ಪ್ರಶ್ನಿಸಲಾಗದು: ಅಮಿತ್‌ ಶಾ

ಸಾವರ್ಕರ್‌ ದೇಶಭಕ್ತಿಯನ್ನು ಪ್ರಶ್ನಿಸಲಾಗದು: ಅಮಿತ್‌ ಶಾ

BSYರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

Championd

ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hftytyt

ದಚ್ಚು ಜೊತೆ “ಕ್ರಾಂತಿ”ಗೆ ಸಜ್ಜಾದ ಡಿಂಪಲ್ ಕ್ವೀನ್ ರಚಿತಾ ರಾಮ್

xdfgdgr

ಸಿನಿ ರಸಿಕರ ಗಮನ ಸೆಳೆದ ‘ಗರುಡ ಗಮನ, ವೃಷಭ ವಾಹನ’ ಟ್ರೈಲರ್

gdfgdr

ಸಾವಿನಲ್ಲೂ ಸಾರ್ಥಕತೆ : ನೇತ್ರದಾನ ಮಾಡಿದ ದಿ.ನಟ ಗೋವಿಂದರಾವ್

ಅಲ್ಲಮ ಸಿನಿಮಾ

ಚಿತ್ರೀಕರಣ ಪೂರೈಸಿದ “ಶ್ರೀ ಅಲ್ಲಮಪ್ರಭು’

ಕಡಲ ತೀರದ ಭಾರ್ಗವ’ ಟೀಸರ್‌

ಅ. 18ಕ್ಕೆ “ಕಡಲ ತೀರದ ಭಾರ್ಗವ’ ಟೀಸರ್‌

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

ಸಾವರ್ಕರ್‌ ದೇಶಭಕ್ತಿಯನ್ನು ಪ್ರಶ್ನಿಸಲಾಗದು: ಅಮಿತ್‌ ಶಾ

ಸಾವರ್ಕರ್‌ ದೇಶಭಕ್ತಿಯನ್ನು ಪ್ರಶ್ನಿಸಲಾಗದು: ಅಮಿತ್‌ ಶಾ

BSYರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ಜಡ್ಕಲ್‌ನಲ್ಲಿ ಇಂದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಜಡ್ಕಲ್‌ನಲ್ಲಿ ಇಂದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

Uber Cup badminton:

ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಭಾರತ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.