ರೌಡಿಸಂನಿಂದ ಫ್ಯಾಮಿಲಿಯತ್ತ!


Team Udayavani, Jan 8, 2018, 11:59 AM IST

murali-(1).jpg

ಮುರಳಿ ಹ್ಯಾಟ್ರಿಕ್‌ ಬಾರಿಸಿದ್ದಾರೆ. ಅವರ “ಉಗ್ರಂ’ 100ನೇ ಯಶಸ್ವಿ ಪ್ರದರ್ಶನ ಕಂಡಿತು. ನಂತರ ಬಿಡುಗಡೆಯಾದ “ರಥಾವರ’ 50 ದಿನ ಪ್ರದರ್ಶನ ಕಂಡಿತು. ಈಗ “ಮಫ್ತಿ’ ಸಹ ಅದೇ ಹಾದಿಯಲ್ಲಿದೆ. ಸದ್ಯದಲ್ಲೇ ಆ ಚಿತ್ರ 50 ದಿನ ಪೂರೈಸಲಿದೆ. ಈ ಮೂರು ಚಿತ್ರಗಳು ಯಶಸ್ವಿಯಾದವು ಎನ್ನುವುದರ ಜೊತೆಗೆ ಮೂರೂ ಚಿತ್ರಗಳಲ್ಲಿ ಮುರಳಿ ಬಹಳ ಗಂಭೀರವಾಗಿದ್ದರು ಎಂಬುದನ್ನು ಗಮನಿಸಬಹುದು.

ಈ ಚಿತ್ರಗಳಲ್ಲಿ ಅವರು ರೌಡಿಯಾಗಿರಲಿ ಅಥವಾ ಪೊಲೀಸ್‌ ಅಧಿಕಾರಿಯಾಗಿರಲಿ, ಪಾತ್ರ ಪೋಷಣೆ ಒಂದೇ ತರಹದ್ದಿತ್ತು ಎಂದು ಮೂರು ಚಿತ್ರಗಳನ್ನು ನೋಡಿದವರು ಗಮನಿಸಿದ್ದುಂಟು.  ಹಾಗಾಗಿ ಮುರಳಿ ಬೇರೆ ಜಾನರ್‌ನ ಚಿತ್ರ ಮಾಡುವ ಯೋಚನೆಯಲ್ಲಿದ್ದಾರೆ. ಅವರ ಮುಂದಿನ ಚಿತ್ರ ಫ್ಯಾಮಿಲಿ ಚಿತ್ರವಾಗಿರುತ್ತದಂತೆ. ಹಾಗಂತ ಖುದ್ದು ಮುರಳಿ ಹೇಳಿಕೊಂಡಿದ್ದಾರೆ.

“ಪ್ರತಿ ಚಿತ್ರದಲ್ಲೂ ಏನು ವಿಭಿನ್ನವಾಗಿ ಮಾಡಬಹುದು ಅಂತ ಯೋಚಿಸಿ ಮಾಡುತ್ತಿದ್ದೇನೆ. ನನ್ನ ಮುಂದಿನ ಚಿತ್ರ ಫ್ಯಾಮಿಲಿ ಚಿತ್ರವಾಗಿರುತ್ತದೆ. ಫ್ಯಾಮಿಲಿ ಚಿತ್ರ ಎಂದರೆ ವಿಪರೀತ ಎಮೋಷನ್‌ ಮತ್ತು ಅಳು ಇರುತ್ತದೆ ಎಂಬ ನಂಬಿಕೆ ಇದೆ. ಇದು ಆ ತರಹದ ಚಿತ್ರವಲ್ಲ. ಏಕೆಂದರೆ, ಅದು ನನಗೆ ಮ್ಯಾಚ್‌ ಆಗುವುದಿಲ್ಲ. ಅದನ್ನು ಗಮನದಲ್ಲಿಟ್ಟುಕೊಂಡೇ ಬೇರೆ ತರಹದ ಪ್ರಯತ್ನ ಮಾಡುತ್ತಿದ್ದೇನೆ’ ಎನ್ನುತ್ತಾರೆ ಮುರಳಿ.  

ಹಾಗಾದರೆ, ಮುರಳಿ ಅಭಿನಯದ ಮುಂದಿನ ಚಿತ್ರ ಯಾವುದು ಮತ್ತು ಅದನ್ನು ಯಾರು ನಿರ್ದೇಶಿಸುತ್ತಾರೆ ಎಂಬ ವಿಷಯವನ್ನು ಮುರಳಿ ಬಿಟ್ಟುಕೊಡುವುದಿಲ್ಲ. ಜಯಣ್ಣ ಬ್ಯಾನರ್‌ನಲ್ಲೇ ಇನ್ನೊಂದು ಸಿನಿಮಾ ಮಾಡುವುದಾಗಿ ಹೇಳಿದರೂ, ಅದು ಯಾವ ಚಿತ್ರ ಮತ್ತು ಯಾರು ನಿರ್ದೇಶಿಸುತ್ತಾರೆ ಎಂಬ ವಿಷಯವನ್ನು ಬಹಿರಂಗಗೊಳಿಸುವುದಿಲ್ಲ. “ಸದ್ಯದಲ್ಲೇ ಮುಂದಿನ ಚಿತ್ರದ ಬಗ್ಗೆ ಹೇಳುವೆ.

ಸದ್ಯಕ್ಕೆ ಕಥೆ ಕೆಲಸ ನಡೆಯುತ್ತಿದೆ. ಈ ಬಾರಿ ಸಹ ಹಲವು ಸರ್‌ಪ್ರ„ಸ್‌ಗಳು ಇರುತ್ತವೆ’ ಎನ್ನುತ್ತಾರೆ ಅವರು.  ಇನ್ನು “ರಥಾವರ’ ಚಿತ್ರವು ತೆಲುಗಿಗೆ ಡಬ್‌ ಆಗಿದ್ದು, ಅಲ್ಲಿ ಚಿತ್ರ ಸೋತಿದ್ದು … ಇದ್ಯಾವುದರ ಬಗ್ಗೆಯೂ ತಮಗೆ ಗೊತ್ತಿಲ್ಲ ಎನ್ನುತ್ತಾರೆ ಮುರಳಿ. “ನಿಜಕ್ಕೂ ನನಗೆ ತೆಲುಗು “ರಥಾವಾರ’ದ ಬಗ್ಗೆ ಗೊತ್ತಿಲ್ಲ. ಅದೆಲ್ಲಾ ನಿರ್ಮಾಪಕರೇ ಪ್ಲಾನ್‌ ಮಾಡಿದ್ದು. ನನಗೆ ಯಾವುದೇ ವಿಷಯವೂ ಗೊತ್ತಿರಲಿಲ್ಲ. ಗೊತ್ತಿದ್ದರೆ ಆ ಬಗ್ಗೆ ಏನಾದರೂ ಹೇಳಬಹುದು.

ಹೀಗೆ ಮಾಡಬೇಡ, ಹಾಗೆ ಮಾಡು ಅಂತ ನಾನು ನನ್ನ ಮಗನಿಗೆ ಹೇಳಿ ಅರ್ಥ ಮಾಡಿಸಬಹುದು. ನನ್ನ ಮಗನ ಫ್ರೆಂಡ್‌ಗೆ ಹೇಳಿ ಅರ್ಥ ಮಾಡಿಸುವುದು ಕಷ್ಟ. ಅದೇ ತರಹ ಇಲ್ಲೂ. ಚಿತ್ರ ಇಲ್ಲಿ ಹಿಟ್‌ ಆಯ್ತು ಎಂಬ ಕಾರಣಕ್ಕೆ ಅಲ್ಲೂ ಹಿಟ್‌ ಆಗಲೇಬೇಕು ಅಂತಿಲ್ಲ. ಅದಕ್ಕೆ ಬೇರೆ ತರಹವೇ ಕೆಲಸ ಮಾಡಬೇಕು. ಈ ವಿಷಯದಲ್ಲಿ ಯಾರೂ ನನ್ನ ಸಂಪರ್ಕಿಸದಿರುವುದರಿಂದ, ನನಗೆ ಈ ವಿಷಯದಲ್ಲಿ ಹೇಳುವುದಕ್ಕೆ ಏನೂ ಇಲ್ಲ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಅವರು.

ಟಾಪ್ ನ್ಯೂಸ್

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.