
ಅಕ್ಕನ ಸ್ಥೀತಿ ಗಂಭೀರವಾಗಿದೆ ;ಈ ವಿಡಿಯೋ ಸುಮಲತಾ ಅವರಿಗೆ ತಲುಪಿಸಿ ಎಂದ ನಟಿ ವಿಜಯಲಕ್ಷ್ಮಿ
Team Udayavani, Jul 27, 2021, 3:47 PM IST

ಬೆಂಗಳೂರು: ನಟಿ ವಿಜಯಲಕ್ಷ್ಮಿ ಅವರು ಇದೀಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಇದರಲ್ಲಿ ತನ್ನ ಅಕ್ಕ ಉಷಾ ಅವರ ಆರೋಗ್ಯ ಹಾಗೂ ಆಕೆಯ ದಾಂಪತ್ಯ ಜೀವನದ ಕುರಿತು ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಜೊತೆಗೆ ಈ ವಿಡಿಯೋವನ್ನು ಸಂಸದೆ ಹಾಗೂ ಚಿತ್ರನಟಿ ಸುಮಲತಾ ಅಂಬರೀಶ್ ಅವರಿಗೆ ತಲುಪಿಸಿ ಎಂದು ಕೇಳಿ ಕೊಂಡಿದ್ದಾರೆ.
ಸಹೋದರಿ ಉಷಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮೂರು ತಿಂಗಳಿಂದ ಊಟ ಕೂಡ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅವಳ ದಾಂಪತ್ಯ ಜೀವನವು ಅತಂತ್ರವಾಗಿದೆ. ಆಕೆಯ ಪತಿ, ಖ್ಯಾತ ನಟಿ ಜಯಪ್ರದಾ ಅವರ ಸಹೋದರ ರಾಜ್ ಬಾಬು ಅವರಿಂದ ವಿಚ್ಛೇದನ ಕೊಡಿಸಿ. 15 ವರ್ಷಗಳಿಂದ ಉಷಾ ಚೆನ್ನೈನಲ್ಲಿ ಇದ್ದಾರೆ. ವಿಚ್ಛೇದನಕ್ಕೆ ಇಲ್ಲೆ ಅರ್ಜಿ ಹಾಕಬೇಕು. ಇದಕ್ಕೆ 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ ವಿಜಯಲಕ್ಷ್ಮಿ.
15 ವರ್ಷಗಳಿಂದ ರಾಜಕೀಯದಲ್ಲಿ ಸಕ್ರೀಯವಾಗಿರುವ ಮಹಿಳೆ, ಬಿಜೆಪಿಯಂತ ಮಹಾನ್ ಪಕ್ಷದಲ್ಲಿ ಇರುವ ಮಹಿಳೆ, ಮಹಿಳೆಯರಿಗೆ ಧ್ವನಿ ಕೊಡ್ತೀನಿ ಅಂತ ಹೇಳಿರುವ ಜಯಪ್ರದಾ, 15 ವರ್ಷಗಳಿಂದ ನಮ್ಮ ಈ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ, ಹಿಂಸೆ ಮಾಡಿದ್ದಾರೆ” ಎಂದು ವಿಜಯಲಕ್ಷ್ಮಿ ದೂರಿದ್ದಾರೆ.
ಸುಮಲತಾ ಅಂಬರೀಶ್ ಅವರಿಗೆ ತಲುಪಿಸಿ :
ಇನ್ನು ತಮ್ಮ ಸಮಸ್ಯೆಯನ್ನು ಸುಮಲತಾ ಮೇಡಂ ಬಗೆಹರಿಸಬಹುದು. ಜಯಪ್ರದಾ ಜೊತೆ ಅವರು ಮಾತಾಡಿದ್ರೆ ಇದು ಖಂಡಿತ ಸಾಧ್ಯ. ನಾನು ನೇರವಾಗಿ ಸುಮಲತಾ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರೆ ಅದಕ್ಕೆ ಅಡ್ಡಿಯುಂಟು ಮಾಡುತ್ತಾರೆ. ಹಾಗಾಗಿ ವಿಡಿಯೋ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಈ ವಿಡಿಯೋ ಸುಮಲತಾ ಅವರಿಗೆ ತಲುಪಿಸಿ ಎಂದು ಕೇಳಿ ಕೊಂಡಿದ್ದಾರೆ ವಿಜಯಲಕ್ಷ್ಮಿ.
ಟಾಪ್ ನ್ಯೂಸ್
