ಪಿಕೆ, ಟೈಗರ್ ಜಿಂದಾ ಹೈ, ಸಂಜು ದಾಖಲೆಗಳನ್ನು ಮುರಿದ ಕೆಜಿಎಫ್ 2 ಹಿಂದಿ ವರ್ಷನ್
Team Udayavani, Apr 28, 2022, 11:26 AM IST
ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಕೆಜಿಎಫ್: ಚಾಪ್ಟರ್ 2 ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಹೊಸ ದಾಖಲೆ ಬರೆಯುತ್ತಿರುವ ಕೆಜಿಎಫ್: ಚಾಪ್ಟರ್ 2 ಸಿನಿಮಾ ಇದೀಗ ಬಾಲಿವುಡ್ ನಲ್ಲಿ ಇತಿಹಾಸ ನಿರ್ಮಿಸಿದೆ.
ಹಿಂದಿ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಮೂರನೇ ಚಿತ್ರ ಎಂಬ ದಾಖಲೆಗೆ ಕೆಜಿಎಫ್: ಚಾಪ್ಟರ್ 2 ಹಿಂದಿ ವರ್ಷನ್ ಪಾತ್ರವಾಗಿದೆ. ಅಮೀರ್ ಖಾನ್ ನಟನೆಯ ಪಿಕೆ, ಸಲ್ಮಾನ್ ಖಾನ್ ನಟನೆಯ ಟೈಗರ್ ಜಿಂದಾ ಹೈ ಮತ್ತು ರಣಬೀರ್ ಕಪೂರ್ ನಟನೆಯ ಸಂಜು ಚಿತ್ರದ ಗಳಿಕೆ ದಾಖಲೆಯನ್ನು ಮುರಿದಿದೆ ಎಂದು ಬಾಲಿವುಡ್ ಟ್ರೇಡ್ ಎನಲಿಸ್ಟ್ ತರಣ್ ಆದರ್ಶ್ ಹೇಳಿಕೊಂಡಿದ್ದಾರೆ.
ಎರಡನೇ ವಾರದಲ್ಲಿ ಕೆಜಿಎಫ್ 2 ಹಿಂದಿ ವರ್ಷನ್ ಶುಕ್ರವಾರ 11.56 ಕೋ, ಶನಿವಾರ 18.25 ಕೋ, ರವಿವಾರ 22.68 ಕೋ, ಸೋಮವಾರ 8.28 ಕೋ, ಮಂಗಳವಾರ 7.48 ಕೋ, ಮತ್ತು ಬುಧವಾರ 6.25 ಕೋಟಿ ರೂ. ಗಳಿಸಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಹಿಂದಿ ವರ್ಷನ್ ಒಟ್ಟು 343.13 ಕೋಟಿ ರೂ ಗಳಿಸಿದೆ.
ಇದನ್ನೂ ಓದಿ:ವಿನಯ್-ಅದಿತಿ ಹೊಸಚಿತ್ರ ತೆರೆಗೆ ಬರುವ ಕಾಲ
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರಿನಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ, ಸಂಜಯ ದತ್, ರವೀನಾ ಟಂಡನ್, ಪ್ರಕಾಶ್ ರೈ ಮೊದಲಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ