ಐಎಂಡಿಬಿ ರೇಟಿಂಗ್ ನಲ್ಲಿ ಟಾಪ್ : ಜೋರಾಗಿದೆ ಕಿಚ್ಚನ ‘ವಿಕ್ರಾಂತ್ ರೋಣ’ ಕ್ರೇಜ್
Team Udayavani, Jul 27, 2021, 3:11 PM IST
ಬೆಂಗಳೂರು: ಈ ವರ್ಷ ತೆರೆ ಕಾಣಲಿರುವ ಸಿನಿಮಾಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಟಾಪ್ ನಲ್ಲಿದೆ.
ಬಹುಭಾಷೆಗಳಲ್ಲಿ ಬಿಡುಗಡೆಗೆ ರೆಡಿಯಾಗಿರುವ ‘ವಿಕ್ರಾಂತ್ ರೋಣ’ ಐಎಂಡಿಬಿ ರೇಟಿಂಗ್ ನಲ್ಲಿ ಅಗ್ರಸ್ಥಾನದಲ್ಲಿದೆ. ಹಾಗೆ ನೋಡಿದ್ರೆ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’, ಯಶ್ ನಟನೆಯ ‘ಕೆಜಿಎಫ್’ ಸಿನಿಮಾಗಳು ಮೊದಲೆರಡು ಸ್ಥಾನದಲ್ಲಿ ಇರಬಹುದು ಎನ್ನುವ ಲೆಕ್ಕಾಚಾರ ಇತ್ತು. ಆದರೆ, ಮೊದಲ ಸ್ಥಾನದಲ್ಲಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಇದೆ.
ಸುದೀಪ್ ‘ವಿಕ್ರಾಂತ್ ರೋಣ’ ಟಾಪ್ ಭಾರತೀಯ ಸಿನಿಮಾಗಳಿಗೆ ರೇಟಿಂಗ್ ನೀಡಿರುವ ಐಎಂಡಿಬಿ ಅಭಿಮಾನಿಗಳ ವಲಯದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಟಾಪ್ನಲ್ಲಿ ತಮ್ಮ ನೆಚ್ಚಿನ ಹೀರೋ ಸಿನಿಮಾ ಇದ್ದರೆ ಅದು ಹೆಮ್ಮೆಯಾಗಿ ಭಾವಿಸುವ ಟ್ರೆಂಡ್ ಇದೆ. ಇದೀಗ, ಭಾರತೀಯ ಅತಿ ಹೆಚ್ಚು ನಿರೀಕ್ಷೆಯ ಪಟ್ಟಿಯಲ್ಲಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಮೊದಲ ಸ್ಥಾನದಲ್ಲಿದೆ.
ಇನ್ನು ಎರಡನೇ ಸ್ಥಾನದಲ್ಲಿ ಕೆಜಿಎಫ್ ಚಾಪ್ಟರ್ 2 ಇದೆ, ಮೂರನೇ ಸ್ಥಾನದಲ್ಲಿ ‘ನವರಸ’ ಸಿನಿಮಾ ಹಾಗೂ ನಾಲ್ಕನೇ ಸ್ಥಾನದಲ್ಲಿ ‘ಶೇರ್ಷಾ’ ಇದೆ. ಐದನೇ ಸ್ಥಾನದಲ್ಲಿ ಅಲ್ಲು ಅರ್ಜುನ್-ಸುಕುಮಾರ್ ಕಾಂಬಿನೇಷನ್ನಲ್ಲಿ ತಯಾರಾಗುತ್ತಿರುವ ಪುಷ್ಪ ಸಿನಿಮಾ ಇದೆ, ಆರನೇ ಸ್ಥಾನದಲ್ಲಿ ‘ಭುಜ್: ದಿ ಪ್ರೈಡ್ ಆಫ್ ಇಂಡಿಯಾ’, ಏಳನೇ ಸ್ಥಾನದಲ್ಲಿ ‘ತಿಮ್ಮರಸು’, ಏಂಟನೇ ಸ್ಥಾನದಲ್ಲಿ ಆಲಿಯಾ ಭಟ್ ನಟನೆಯ ‘ಗಂಗುಬಾಯಿ ಕಥಿಯಾವಾಡಿ’, ಒಂಬತ್ತನೇ ಸ್ಥಾನದಲ್ಲಿ ‘ರಾಧೇ ಶ್ಯಾಮ್’ ಹಾಗೂ ಹತ್ತನೇ ಸ್ಥಾನದಲ್ಲಿ ‘ಅನೆಕ್’ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ