ಬಿಡುಗಡೆಯತ್ತ ‘ಕುಂತಿಪುತ್ರ’: ತೆಲುಗು ನಿರ್ದೇಶಕನ ಕನ್ನಡ ಪ್ರೇಮ


Team Udayavani, Oct 31, 2021, 1:09 PM IST

kuntiputra new kannada film

ಕನ್ನಡಕ್ಕೆ ಪರಭಾಷೆಯ ಕಲಾವಿದರ ಆಗಮನ ಹೊಸದೇನಲ್ಲ. ಪ್ರತಿವರ್ಷ ನೂರಾರು ಪರಭಾಷಾ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಲೇ ಇರುತ್ತಾರೆ. ಆದರೆ ಕಲಾವಿದರ ಸಂಖ್ಯೆಗೆ ಹೋಲಿಸಿದರೆ, ಕನ್ನಡಕ್ಕೆ ಪರಭಾಷೆಯಿಂದ ಬರುವ ನಿರ್ದೇಶಕರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು. ಈಗ “ಕುಂತಿಪುತ್ರ’ ಚಿತ್ರದ ಮೂಲಕ ತೆಲುಗು ನಿರ್ದೇಶಕ ರಾಜು ಬೋನಗಾನಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

1980ರ ದಶಕದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ತಯಾರಾದ “ಕುಂತಿಪುತ್ರ’ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿದ್ದು, ಬಹುತೇಕ ಹೊಸ ಪ್ರತಿಭೆಗಳೇ ಸೇರಿ “ಕುಂತಿಪುತ್ರ’ ಚಿತ್ರ ನಿರ್ಮಿಸಿದ್ದಾರೆ. ಈಗಾಗಲೇ “ಕುಂತಿಪುತ್ರ’ದ ಹಾಡುಗಳು, ಟೀಸರ್‌ ಒಂದಷ್ಟು ಸೌಂಡ್‌ ಮಾಡುತ್ತಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಇನ್ನು ಚಿತ್ರಕಥೆ ಬರಹಗಾರನಾಗಿ, ವಿಎಫ್ಎಕ್ಸ್‌, ಆ್ಯಕ್ಷನ್ಸ್‌ ಸ್ಪೆಷಲ್‌ ಎಫೆಕ್ಟ್ ತಂತ್ರಜ್ಞನಾಗಿ ತೆಲುಗು ಚಿತ್ರರಂಗದ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟ “ಕುಂತಿಪುತ್ರ’ ಚಿತ್ರದ ನಿರ್ದೇಶಕ ರಾಜು ಬೋನಗಾನಿ ಮಂಡ್ಯ ಮೂಲದವರು. ಅವರ ತಾತನ ಕಾಲಿದಲ್ಲಿಯೇ ಇಡೀ ಕುಟುಂಬ ಮಂಡ್ಯದಿಂದ ಆಂಧ್ರದ ಕಡೆಗೆ ವಲಸೆ ಹೋಗಿದ್ದರಿಂದ, ರಾಜು ಬೋನಗಾನಿ ಅವರ ಬಾಲ್ಯ, ಶಿಕ್ಷಣ ಎಲ್ಲವೂ ಆಂಧ್ರದಲ್ಲಿಯೇ ನಡೆಯಿತು. ಬಳಿಕ ಅಲ್ಲೇ ಟಾಲಿವುಡ್‌ ನಂಟು ಬೆಳೆದಿದ್ದರಿಂದ, ತೆಲುಗು ಚಿತ್ರರಂಗದ ಮೂಲಕವೇ ರಾಜು ಬೋನಗಾನಿ ಸಿನಿಮಾ ಜಗತ್ತಿಗೆ ಅಡಿಯಿಟ್ಟರು.

ಇದನ್ನೂ ಓದಿ:ಪುನೀತ್ ರಾಜ್ ಕುಮಾರ್ ಅಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟ : ವಿನಯಕುಮಾರ್ ಸೊರಕೆ

ತೆಲುಗು ಮತ್ತು ಹಿಂದಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಿಗೆ ಆ್ಯಕ್ಷನ್‌ ಸ್ಪೆಷಲ್‌ ಎಫೆಕ್ಟ್, ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಿಗೆ ವಿಎಫ್ಎಕ್ಸ್‌ ತಂತ್ರಜ್ಞನಾಗಿ ಕೆಲಸ ಮಾಡಿರುವ ರಾಜು ಬೋನಗಾನಿ ಈಗ ನಿರ್ದೇಶಕನಾಗಿ “ಕುಂತಿಪುತ್ರ’ನ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ.

“ಕುಂತಿಪುತ್ರ’ ಚಿತ್ರದ ಬಗ್ಗೆ ಮಾತನಾಡುವ ರಾಜು ಬೋನಗಾನಿ, “ಇದೊಂದು ಸಂಪೂರ್ಣ ಗ್ರಾಮೀಣ ಕಥಾಹಂದರದ ಸಿನಿಮಾ. ಕನ್ನಡ ಮತ್ತು ತೆಲುಗು ಪ್ರೇಕ್ಷರಿಗೆ ಇಷ್ಟವಾಗುವಂಥ ಕಾಮನ್‌ ಸಬ್ಜೆಕ್ಟ್ ಇಟ್ಟುಕೊಂಡು “ಕುಂತಿಪುತ್ರ’ ಸಿನಿಮಾ ಮಾಡಿದ್ದೇವೆ. ನೇರ ನುಡಿಯ ನಾಯಕ, ಅನ್ಯಾಯವನ್ನು ಖಂಡಿಸುತ್ತಾ ಬರುತ್ತಾನೆ. ಆದರೆ, ಘಟನೆಯೊಂದರಲ್ಲಿ ಹಳ್ಳಿ ಜನ ಆತನನ್ನು ತಪ್ಪು ತಿಳಿದುಕೊಳ್ಳುತ್ತಾರೆ. ಇದರಿಂದ ದೊಡ್ಡ ಅವಾಂತರ ಸೃಷ್ಟಿಯಾಗುತ್ತದೆ. ಇದರಿಂದ ಮುಂದೆ ಏನೇನಾಗುತ್ತದೆ ಎಂಬುದು ಚಿತ್ರದ ಕಥೆ. ಇಲ್ಲಿ ಲವ್‌, ಆ್ಯಕ್ಷನ್‌, ಎಮೋಶನ್ಸ್‌, ಸೆಂಟಿಮೆಂಟ್‌ ಎಲ್ಲವೂ ಇದೆ’ ಎನ್ನುತ್ತಾರೆ.

“ಕುಂತಿಪುತ್ರ’ ಚಿತ್ರದಲ್ಲಿ ಗೋಪಿಕೃಷ್ಣ ನಾಯಕನಾಗಿ, ಪ್ರಿಯಾಂಕ ಚೌಧರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

ಶಿಕ್ಷಕರ ಸಮಸ್ಯೆ-ಬೇಡಿಕೆಗಳ ಬಗ್ಗೆ ಸರಕಾರ ಉದಾಸೀನ ಮಾಡಬಾರದು: ಕುಮಾರಸ್ವಾಮಿ

ಶಿಕ್ಷಕರ ಸಮಸ್ಯೆ-ಬೇಡಿಕೆಗಳ ಬಗ್ಗೆ ಸರಕಾರ ಉದಾಸೀನ ಮಾಡಬಾರದು: ಕುಮಾರಸ್ವಾಮಿ

3hijab

ಹಿಜಾಬ್‌: ಪರೀಕ್ಷೆ ಬರೆಯದೆ ಇಬ್ಬರು ವಾಪಸ್

2PSI

ಪಿಎಸ್‌ಐ ಅಕ್ರಮ: ಇನ್‌ಸ್ಪೆಕ್ಟರ್‌ ಸೇರಿ ಇಬ್ಬರ ಬಂಧನ

Karnataka’s anil hegde rajyasabha candidate from bihar

ಬಿಹಾರ ರಾಜ್ಯಸಭಾ ಚುನಾವಣೆ ರೇಸ್‌ನಲ್ಲಿ ಕನ್ನಡಿಗ; ಕುಂದಾಪುರದ ಅನಿಲ್‌ ಹೆಗ್ಡೆ JDU ಅಭ್ಯರ್ಥಿ

Gyanvapi mosque committee Shivling as fountain.

ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ; ಅದು ಫೌಂಟನ್: ಮಸೀದಿಯ ಆಡಳಿತ ಮಂಡಳಿ ವಾದ

1sucide

ಬೇಲ್‌ಗೆ ಕುಟುಂಬ ಸಹಕರಿಸದಿದ್ದಕ್ಕೆ ಕೈದಿ ಜೈಲಿನಲ್ಲಿ ಆತ್ಮಹತ್ಯೆ

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್

ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ddsadsdasd

ಸ್ನೇಹಕ್ಕೆ ಸಾವಿಲ್ಲ ಅಣ್ತಮ್ಮ : ಕಿರಣ್ ರಾಜ್ ಅಭಿನಯದ “ಬಡ್ಡೀಸ್ ಬಿಡುಗಡೆಗೆ ಸಿದ್ದ

rap song in cutting shop

‘ಕಟ್ಟಿಂಗ್‌ ಶಾಪ್‌’ನಲ್ಲಿ ರ್ಯಾಪ್‌ ಸಾಂಗ್‌!

twenty one hours kannada movie

ಥಿಯೇಟರ್ ನಲ್ಲಿ ‘ಟ್ವೆಂಟಿ ಒನ್ ಹವರ್ಸ್’; ಡಾಲಿ ಅಭಿನಯದ ಚಿತ್ರ ಮೇ.20ಕ್ಕೆ ರಿಲೀಸ್

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ

ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?

ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?

MUST WATCH

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

ಹೊಸ ಸೇರ್ಪಡೆ

7

ಮಾರುತಿ ದೇವಸ್ಥಾನಕ್ಕೆ ಮಹಾದ್ವಾರ ಸಮರ್ಪಣೆ

ಶಿಕ್ಷಕರ ಸಮಸ್ಯೆ-ಬೇಡಿಕೆಗಳ ಬಗ್ಗೆ ಸರಕಾರ ಉದಾಸೀನ ಮಾಡಬಾರದು: ಕುಮಾರಸ್ವಾಮಿ

ಶಿಕ್ಷಕರ ಸಮಸ್ಯೆ-ಬೇಡಿಕೆಗಳ ಬಗ್ಗೆ ಸರಕಾರ ಉದಾಸೀನ ಮಾಡಬಾರದು: ಕುಮಾರಸ್ವಾಮಿ

3hijab

ಹಿಜಾಬ್‌: ಪರೀಕ್ಷೆ ಬರೆಯದೆ ಇಬ್ಬರು ವಾಪಸ್

drainage

ಕುತ್ಪಾಡಿ: ವಾಣಿಜ್ಯ ಕಟ್ಟಡಗಳ ಡ್ರೈನೇಜ್‌ ನೀರು, ತ್ಯಾಜ್ಯ ತೋಡಿಗೆ

6

ಅರಣ್ಯ ಭೂಮಿ ಹಕ್ಕು ಸಮಸ್ಯೆ ಪರಿಹರಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.