ಅನಿರುದ್ಧ್ ಕೈಯಲ್ಲಿ “ಲಕ್ಷ್ಯ’ ಟೀಸರ್‌ ರಿಲೀಸ್

Team Udayavani, Dec 14, 2019, 7:00 AM IST

ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವ “ಲಕ್ಷ್ಯ’ ಚಿತ್ರದ ಎರಡು ಲಿರಿಕಲ್‌ ಹಾಡುಗಳು ಮತ್ತು ಮೋಶನ್‌ ಪೋಸ್ಟರ್‌ ಅನ್ನು ನಟ ಅನಿರುದ್ಧ್ ಇತ್ತೀಚೆಗೆ ಬಿಡುಗಡೆ ಮಾಡಿದರು. ಇದೇ ವೇಳೆ ಮಾತನಾಡಿದ ಅನಿರುದ್ಧ್, “ಚಿತ್ರದ ಹಾಡುಗಳು ಮತ್ತು ಟೀಸರ್‌ ಭರವಸೆ ಮೂಡಿಸುವಂತಿದ್ದು, ವಿಭಿನ್ನ ಶೈಲಿಯ ಹೊಸ ಪ್ರಯತ್ನ ಚಿತ್ರದಲ್ಲಿ ಇರುವಂತೆ ಕಾಣುತ್ತಿದೆ. ಚಿತ್ರ ಕೂಡ ಹಾಗೆಯೇ ಮೂಡಿಬರಲಿ.

ಹೊಸಬರ ಪ್ರಯತ್ನಕ್ಕೆ ಒಳ್ಳೆಯದಾಗಲಿ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. “ಮೇಘಾ ಕಂಬೈನ್ಸ್‌ ಬ್ಯಾನರ್‌’ ಅಡಿಯಲ್ಲಿ ಮಹಾಂತೇಶ ತಾಂವಶಿ, ಪ್ರಕಾಶ್‌ ಕೊಲ್ಹಾರ್‌ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರವಿ ಸಾಸನೂರ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನು “ಲಕ್ಷ್ಯ’ ಚಿತ್ರದಲ್ಲಿ ಹಿರಿಯ ನಟರಾದ ರಾಮಕೃಷ್ಣ, ಮಾಲತಿಶ್ರೀ ಮೈಸೂರು, ಶಿವಕುಮಾರ್‌ ಆರಾಧ್ಯ, ಸಂತೋಷ್‌ ರಾಜ್‌ ಝವರೆ, ಶರ್ಮಿಳಾ, ಸತ್ಯನಾಥ್‌, ನಿತಿನಧ್ವಿ, ಸಾಯಿ ಯಶಸ್ವಿನಿ, ಬೇಬಿ ಗಮನ, ಬೇಬಿ ದಿವ್ಯಾ, ಧನ ಶೆಟ್ಟಿ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಮ್ಯೂಸಿಕ್‌ ಸಂಸ್ಥೆ ಖರೀದಿಸಿದ್ದು, ಚಿತ್ರ ಹೊಸ ವರ್ಷದ ಆರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ