ಲವ್‌ ಮ್ಯಾಟ್ರು ಸಾಂಗ್‌ ಕೇಳುವ ಟೈಮು

ಪ್ರೇಮಿಗಳ ದಿನಕ್ಕೆ ಮೊದಲ ಹಾಡು ಬಿಡುಗಡೆ

Team Udayavani, Feb 12, 2020, 7:01 AM IST

“ಸಿಲ್ವರಿಥಮ್‌ ಪ್ರೊಡಕ್ಷನ್ಸ್‌’ ಲಾಂಛನದಲ್ಲಿ ಕುಮಾರಿ ವಂದನ ಪ್ರಿಯಾ, ಪ್ರಭು ಕುಮಾರ್‌ ಹಾಗೂ ಎ.ವಿ ನಾಗರಾಜ್‌ ನಿರ್ಮಿಸುತ್ತಿರುವ “ಲವ್‌ ಮ್ಯಾಟ್ರು’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಸೈಕಲಾಜಿಕಲ್‌ ಹಾಗೂ ರೊಮ್ಯಾಂಟಿಕ್‌ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿರಾಟ್‌. ಎನ್‌ ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ನಾಯಕ ನಟನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಉಳಿದಂತೆ ಅನಿತಾ ಭಟ್‌, ಸೋನಾಲ್‌ ಮಾಂತೆರೊ, ಅಚ್ಯುತ ಕುಮಾರ್‌, ಸುಮನ್‌ ರಂಗನಾಥ್‌, ಸುಷ್ಮಿತಾ ರಂಗನಾಥ್‌, ಕರುಣ್‌ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೇ ಫೆಬ್ರವರಿ 14ರಂದು “ಲವ್‌ ಮ್ಯಾಟ್ರು’ ಚಿತ್ರದಲ್ಲಿ ಬರುವ “ಖೋಟ ಪ್ರೀತಿ, ಹೃದಯ ಅಲ್ಲೋಲ, ಕಲ್ಲೋಲ…’ ಎಂಬ ಮೊದಲ ಹಾಡನ್ನು ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

ನಿರ್ದೇಶಕ ಕಂ ನಾಯಕ ವಿರಾಟ್‌ ಬರೆದಿರುವ ಈ ಹಾಡಿಗೆ ವ್ಯಾಸರಾಜ್‌ ಸೋಸಲೆ ಧ್ವನಿಯಾಗಿದ್ದು, ಶೇಡ್ರಾಕ್‌ ಸಾಲಮನ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ದೇವೇಂದ್ರ ಪರಮೇಶ್‌ ಛಾಯಾಗ್ರಹಣ, ಸುರೇಶ್‌ ಅರಸ್‌ ಸಂಕಲನವಿದೆ. ಕುದುರೆಮುಖ, ಬೆಂಗಳೂರು ಸುತ್ತಮುತ್ತ ಸುಮಾರು 60 ದಿನಗಳ ಕಾಲ “ಲವ್‌ ಮ್ಯಾಟ್ರು’ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರ ಮಾರ್ಚ್‌ ಅಥವಾ ಏಪ್ರಿಲ್‌ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ