Udayavni Special

ಲುಂಗಿ ವ್ಯಾಪಾರ ತೆಲುಗಿಗೂ ವಿಸ್ತಾರ!

ಮಂಗಳೂರು ಮಂದಿ ಮಾಡಿದ ಚಿತ್ರಕ್ಕೆ ಡಿಮ್ಯಾಂಡ್‌ - ರಿಷಭ್‌ ಶೆಟ್ಟಿ ರಿಲೀಸ್‌ ಮಾಡಿದ ವೇಸ್ಟ್‌ ಬಾಡಿ ಸಾಂಗ್‌

Team Udayavani, Oct 3, 2019, 3:02 AM IST

Lungi

ಮಂಗಳೂರಿನ ಪ್ರತಿಭಾವಂತರೆಲ್ಲ ಸೇರಿ ಮಾಡಿದ “ಲುಂಗಿ’ ಚಿತ್ರ ಈಗಾಗಲೇ ಪೋಸ್ಟರ್‌, ಟ್ರೇಲರ್‌ ಮತ್ತು ರಿಲೀಸ್‌ ಆಗಿರುವ ಮೊದಲ ಸಾಂಗ್‌ನಿಂದಲೇ ಜೋರು ಸುದ್ದಿಯಾಗಿದೆ. ಈಗ “ಲುಂಗಿ’ ಹೊಸ ಸುದ್ದಿಗೆ ಕಾರಣವಾಗಿದೆ. ಹೌದು, ಬಿಡುಗಡೆಯ ಮೊದಲೇ “ಲುಂಗಿ’ ಚಿತ್ರ ತೆಲುಗು ಭಾಷೆಗೆ ರಿಮೇಕ್‌ ಹಕ್ಕು ಮಾರಾಟವಾಗಿದೆ. ಸಹಜವಾಗಿಯೇ, ಚಿತ್ರತಂಡಕ್ಕೆ ಇದು ಖುಷಿಯನ್ನೂ ಹೆಚ್ಚಿಸಿದೆ. ಬಹುತೇಕ ಹೊಸಬರೇ ಸೇರಿ ಮಾಡಿರುವ “ಲುಂಗಿ’ ಅಕ್ಟೋಬರ್‌ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಅದಕ್ಕೂ ಮೊದಲೇ ಒಂದಷ್ಟು ಸದ್ದು ಮಾಡುತ್ತಿರುವುದರಿಂದ, ಹೊಸಬರಲ್ಲಿ ಒಂದಷ್ಟು ಉತ್ಸಾಹ ಹೆಚ್ಚಿರುವುದಂತೂ ಸುಳ್ಳಲ್ಲ. ಈಗಾಗಲೇ ತೆಲುಗು ಸಿನಿಮಾ ಮಂದಿ “ಲುಂಗಿ’ ಚಿತ್ರ ನೋಡಿದ್ದಾರೆ. ಅವರಿಗೆ ಎಮೋಷನಲ್‌ ಜರ್ನಿ ಇಷ್ಟವಾಗಿದ್ದರಿಂದ, ತೆಲುಗು ಭಾಷೆಯಲ್ಲೂ ಈ ಸಿನಿಮಾ ಮಾಡುವ ಉತ್ಸಾಹದಿಂದ ರಿಮೇಕ್‌ ರೈಟ್ಸ್‌ ಪಡೆದಿದ್ದಾರೆ ಎಂಬುದು ನಿರ್ದೇಶಕ ಅರ್ಜುನ್‌ ಲೂಯಿಸ್‌ ಮಾತು.

ಮೊದಲ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದನ್ನು ಕಂಡ ಚಿತ್ರತಂಡ, ರಾಜ್ಯದ ಹಲವು ನಗರಗಳಲ್ಲಿ “ಲುಂಗಿ’ಯ ಪ್ರೀತಿ, ಸೌಂದರ್ಯ ಮತ್ತು ಸಂಸ್ಕೃತಿ ಕುರಿತು ಪ್ರಚಾರ ಮಾಡುತ್ತಿದೆ. “ಲುಂಗಿ’ಯ ಹಾಡು, ಟ್ರೇಲರ್‌ಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ , ಆನ್‌ಲೈನ್‌ನಿಂದಲೂ “ಲುಂಗಿ’ ಖರೀದಿಗೆ ಮಾತುಕತೆ ನಡೆಯುತ್ತಿದ್ದು, ಇಷ್ಟರಲ್ಲೇ ಆ ಬಗ್ಗೆ ಸ್ಪಷ್ಟಪಡಿಸುವುದಾಗಿ ಹೇಳುತ್ತಾರೆ ನಿರ್ದೇಶಕರು.

ಟ್ರೇಲರ್‌ ಬಿಡುಗಡೆ ಮಾಡಿ, ತಂಡಕ್ಕೆ ಶುಭಹಾರೈಸಿದ್ದ ನಟ ರಕ್ಷಿತ್‌ ಶೆಟ್ಟಿ ಅವರ ಸಹಕಾರ ಸಾಕಷ್ಟಿದೆ ಎನ್ನುವ ಅರ್ಜುನ್‌ ಲೂಯಿಸ್‌, ಈಗ ರಿಷಭ್‌ ಶೆಟ್ಟಿ ಕೂಡ “ಲುಂಗಿ’ ಹಿಂದೆ ನಿಂತಿದ್ದಾರೆ. ಅವರು ಬುಧವಾರ “ವೇಸ್ಟ್‌ ಬಾಡಿ…’ ಎಂಬ ಎರಡನೇ ಹಾಡನ್ನು ಯು ಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ’ ಎಂದು ವಿವರಿಸುತ್ತಾರೆ ಅರ್ಜುನ್‌ ಲೂಯಿಸ್‌. ಅಂದಹಾಗೆ, ಈ ಹಾಡಿಗೆ ಅರ್ಜುನ್‌ ಲೂಯಿಸ್‌ ಸಾಹಿತ್ಯವಿದ್ದು, ಸಂಚಿತ್‌ ಹೆಗ್ಡೆ ಹಾಡಿದ್ದಾರೆ.

ಪ್ರಸಾದ್‌ ಕೆ.ಶೆಟ್ಟಿ ಸಂಗೀತವಿದೆ. ಎಂಜಿನಿಯರ್‌ ಎನಿಸಿಕೊಂಡ ಹೀರೋಗೆ ತನ್ನೂರಲ್ಲೇ ಏನಾದರೂ ಮಾಡಬೇಕೆಂಬ ಹಂಬಲ. ಆದರೆ, ಅವನ ತಂದೆಗೆ ತನ್ನ ಮಗನನ್ನು ವಿದೇಶಕ್ಕೆ ಕಳುಹಿಸಬೇಕೆಂಬ ಆಸೆ. ಆದರೆ, ಅಪ್ಪನ ಮಾತು ಪಕ್ಕಕ್ಕಿಟ್ಟು, ತಾನು ಇಲ್ಲೇ ದುಡಿಮೆ ಮಾಡ್ತೀನಿ ಅನ್ನುವ ಹೀರೋನನ್ನು ಅಕ್ಕಪಕ್ಕದ ಮಂದಿ, ಸಲುಗೆಯಿಂದಲೇ ಒಂದಷ್ಟು ಕೆಲಸ ಮಾಡಿಸಿಕೊಳ್ಳುತ್ತಿರುತ್ತಾರೆ. ಅಪ್ಪನಿಗೆ ಅದು ಇನ್ನಷ್ಟು ಕೋಪ ತರಿಸುತ್ತೆ.

ನೀನು “ವೇಸ್ಟ್‌ ಬಾಡಿ…’ ಅಂತ ಬೈಯುತ್ತಾರೆ. ಆಗ ಶುರುವಾಗುವ “ವೇಸ್ಟ್‌ ಬಾಡಿ’ ಹಾಡಿನ ಕೊನೆಯಲ್ಲಿ, ಹೀರೋ ಬದುಕಲ್ಲೊಂದು ಟರ್ನಿಂಗ್‌ ಪಾಯಿಂಟ್‌ ಸಿಗುತ್ತೆ. ಅದೇ “ಲುಂಗಿ’ ಬಿಝಿನೆಸ್‌. ಅಲ್ಲಿಂದ ಕಥೆ ಹೊಸ ರೂಪ ಪಡೆಯುತ್ತೆ ಎಂಬುದು ನಿರ್ದೇಶಕರ ಮಾತು. ಅರ್ಜುನ್‌ ಲೂಯಿಸ್‌ ಮತ್ತು ಅಕ್ಷಿತ್‌ ಶೆಟ್ಟಿ ನಿರ್ದೇಶಕರು. ಮುಖೇಶ್‌ ಹೆಗಡೆ ನಿರ್ಮಾಣವಿದೆ. ಪ್ರಣವ್‌ ಹೆಗ್ಡೆ ನಾಯಕರಾಗಿದ್ದು, ಅವರಿಗೆ ಅಹಲ್ಯಾ ಸುರೇಶ್‌ ಮತ್ತು ರಾಧಿಕಾ ರಾವ್‌ ನಾಯಕಿಯರು. ಚಿತ್ರಕ್ಕೆ ರಿಜ್ಜೋ ಪಿ.ಜಾನ್‌ ಛಾಯಾಗ್ರಹಣವಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

mtb

ಬೆಂ. ಗ್ರಾಮಾಂತರ ಉಸ್ತುವಾರಿ ಕೊಟ್ಟರೆ ನಾನು ನಿಭಾಯಿಸುತ್ತೇನೆ: ಎಂಟಿಬಿ ನಾಗರಾಜ್

ಮಾತುಕತೆ ಬೆನ್ನಲ್ಲೇ ಸಿಕ್ಕಿಂ ಗಡಿಯಲ್ಲಿ ಭಾರತ, ಚೀನಾ ಸೇನೆ ಘರ್ಷಣೆ; ಸೈನಿಕರಿಗೆ ಗಾಯ

ಮಾತುಕತೆ ಬೆನ್ನಲ್ಲೇ ಸಿಕ್ಕಿಂ ಗಡಿಯಲ್ಲಿ ಭಾರತ, ಚೀನಾ ಸೇನೆ ಘರ್ಷಣೆ; ಸೈನಿಕರಿಗೆ ಗಾಯ

suresh-kumar

ಉತ್ತರಪತ್ರಿಕೆ ಮರುಎಣಿಕೆ ಲೋಪ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸುರೇಶ್ ಕುಮಾರ್ ಸೂಚನೆ

bsy

ಮುಂದುವರಿದ ಖಾತೆ ಸಂಗೀತ ಕುರ್ಚಿ: ಮತ್ತೆ ಸಚಿವರ ಖಾತೆ ಬದಲಾವಣೆಗೆ ಮುಂದಾದ ಸಿಎಂ!

ದೆಹಲಿ: ಸಿಂಘು ಗಡಿಯಲ್ಲಿ ಕಾಂಗ್ರೆಸ್ ಸಂಸದರ ಮೇಲೆ ಹಲ್ಲೆ, ಕಾರು ಜಖಂ

ದೆಹಲಿ: ಸಿಂಘು ಗಡಿಯಲ್ಲಿ ಕಾಂಗ್ರೆಸ್ ಸಂಸದರ ಮೇಲೆ ಹಲ್ಲೆ, ಕಾರು ಜಖಂ

ವಿಟ್ಲ: ಪೆಟ್ರೋಲ್ ಬಂಕ್ ಕಚೇರಿಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು

ವಿಟ್ಲ: ಪೆಟ್ರೋಲ್ ಬಂಕ್ ಕಚೇರಿಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು

ಕೇಂದ್ರ ಬಜೆಟಲ್ಲಿ ದೇಶಿ ಆಟಿಕೆಗಳಿಗೆ ಉತ್ತೇಜನ ಕ್ರಮ ಘೋಷಣೆ ನಿರೀಕ್ಷೆ

ಕೇಂದ್ರ ಬಜೆಟಲ್ಲಿ ದೇಶಿ ಆಟಿಕೆಗಳಿಗೆ ಉತ್ತೇಜನ ಕ್ರಮ ಘೋಷಣೆ ನಿರೀಕ್ಷೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೀಗನ್‌ ಆಗ್ತಿದ್ದಾರಂತೆ ರಮ್ಯಾ!

ವೀಗನ್‌ ಆಗ್ತಿದ್ದಾರಂತೆ ರಮ್ಯಾ!

ಮಹಿಷಾಸುರ ಮೊಗದಲ್ಲಿ ನಗೆ

‘ಮಹಿಷಾಸುರ’ ಮೊಗದಲ್ಲಿ ನಗೆ

ವಿದೇಶಕ್ಕೆ ಹಾರಲು ರೆಡಿಯಾದ ಗಾಳಿಪಟ 2

ವಿದೇಶಕ್ಕೆ ಹಾರಲು ರೆಡಿಯಾದ ಗಾಳಿಪಟ 2

sharan

ಶರಣ್‌ ಗುರು ಶಿಷ್ಯರು ಚಿತ್ರಕ್ಕೆ ಇಂದು ಮುಹೂರ್ತ

ಸುದೀಪ್‌ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿ

ಸುದೀಪ್‌ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿ

MUST WATCH

udayavani youtube

ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ

udayavani youtube

ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

ಹೊಸ ಸೇರ್ಪಡೆ

mtb

ಬೆಂ. ಗ್ರಾಮಾಂತರ ಉಸ್ತುವಾರಿ ಕೊಟ್ಟರೆ ನಾನು ನಿಭಾಯಿಸುತ್ತೇನೆ: ಎಂಟಿಬಿ ನಾಗರಾಜ್

ಮಾತುಕತೆ ಬೆನ್ನಲ್ಲೇ ಸಿಕ್ಕಿಂ ಗಡಿಯಲ್ಲಿ ಭಾರತ, ಚೀನಾ ಸೇನೆ ಘರ್ಷಣೆ; ಸೈನಿಕರಿಗೆ ಗಾಯ

ಮಾತುಕತೆ ಬೆನ್ನಲ್ಲೇ ಸಿಕ್ಕಿಂ ಗಡಿಯಲ್ಲಿ ಭಾರತ, ಚೀನಾ ಸೇನೆ ಘರ್ಷಣೆ; ಸೈನಿಕರಿಗೆ ಗಾಯ

suresh-kumar

ಉತ್ತರಪತ್ರಿಕೆ ಮರುಎಣಿಕೆ ಲೋಪ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸುರೇಶ್ ಕುಮಾರ್ ಸೂಚನೆ

bsy

ಮುಂದುವರಿದ ಖಾತೆ ಸಂಗೀತ ಕುರ್ಚಿ: ಮತ್ತೆ ಸಚಿವರ ಖಾತೆ ಬದಲಾವಣೆಗೆ ಮುಂದಾದ ಸಿಎಂ!

ದೆಹಲಿ: ಸಿಂಘು ಗಡಿಯಲ್ಲಿ ಕಾಂಗ್ರೆಸ್ ಸಂಸದರ ಮೇಲೆ ಹಲ್ಲೆ, ಕಾರು ಜಖಂ

ದೆಹಲಿ: ಸಿಂಘು ಗಡಿಯಲ್ಲಿ ಕಾಂಗ್ರೆಸ್ ಸಂಸದರ ಮೇಲೆ ಹಲ್ಲೆ, ಕಾರು ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.