“ಮೌನಂ’ ನಿರೀಕ್ಷೆಯಲ್ಲಿ ಮಯೂರಿ

Team Udayavani, Jan 27, 2020, 7:05 AM IST

ಸ್ಯಾಂಡಲ್‌ವುಡ್‌ನ‌ ಬಹುತೇಕ ತಾರೆಯರು ಹೊಸ ಜೋಶ್‌ನಲ್ಲಿ 2020ರ ಸಿನಿಜರ್ನಿಯನ್ನು ಶುರು ಮಾಡಿದ್ದಾರೆ. ಅದರಲ್ಲಿ ನಟಿ ಮಯೂರಿ ಕೂಡ ಒಬ್ಬರು. ಕಳೆದ ವರ್ಷಕ್ಕಿಂತ ಈ ವರ್ಷ ಚಿತ್ರರಂಗದಲ್ಲಿ ಇನ್ನಷ್ಟು ಬ್ಯುಸಿಯಾಗುವ ಪ್ಲಾನ್‌ ಹಾಕಿಕೊಂಡಿರುವ ಮಯೂರಿ ನಟಿಸಿರುವ ನಾಲ್ಕೈದು ಸಿನಿಮಾಗಳು ಈ ವರ್ಷ ತೆರೆಕಾಣಲಿವೆ.

ಈ ಬಗ್ಗೆ ಮಾತನಾಡುವ ಮಯೂರಿ, “ನನ್ನ ಪ್ರಕಾರ ಈ ವರ್ಷ ಕನಿಷ್ಟ ನಾನು ಅಭಿನಯಿಸುವ ನಾಲ್ಕೈದು ಸಿನಿಮಾಗಳು ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ಸದ್ಯ “ಮೌನಂ’ ರಿಲೀಸ್‌ಗೆ ರೆಡಿಯಿದೆ. ಫೆಬ್ರವರಿಯಲ್ಲಿ ಅದು ತೆರೆಗೆ ಬರಬಹುದು. ಅದಾದ ನಂತರ “ಪೊಗರು’ ಸಿನಿಮಾದಲ್ಲೂ ಸ್ಪೆಷಲ್‌ ಅಪೀಯರೆನ್ಸ್‌ ಮಾಡಿದ್ದೇನೆ. ಅದು ಕೂಡ ಮಾರ್ಚ್‌-ಏಪ್ರಿಲ್‌ ವೇಳೆಗೆ ರಿಲೀಸ್‌ ಆಗಬಹುದು.

ಅದಾದ ನಂತರ “ತಂಗಾಳಿ’ ಸಿನಿಮಾ ರಿಲೀಸ್‌ ಆಗಲಿದೆ. ಒಟ್ಟಾರೆ ಈ ವರ್ಷ ಕನಿಷ್ಟವೆಂದರೂ, ನಾಲ್ಕೈದು ಸಿನಿಮಾಗಳು ರಿಲೀಸ್‌ ಆಗಬಹುದು’ ಎನ್ನುತ್ತಾರೆ. ಸದ್ಯ ಮಯೂರಿ ನಟಿಸಿರುವ “ಮೌನಂ’ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಮಯೂರಿ ಎರಡು ಶೇಡ್‌ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ “ನನ್ನ ಪ್ರಕಾರ’ ಚಿತ್ರದಲ್ಲಿ ಮಯೂರಿ ಹುಕ್ಕಾ ಬಾರ್‌ನಲ್ಲಿ ಕುಳಿತು ಹೊಗೆ ಬಿಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು.

ಈಗ “ಮೌನಂ’ ಸಿನಿಮಾದಲ್ಲೂ ಮಯೂರಿ ಆ ತರಹದ ಬೋಲ್ಡ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಹಾಗಂತ ಸಿನಿಮಾ ಪೂರ್ತಿ ಬೋಲ್ಡ್‌ ಆಗಿ ಕಾಣಿಸಿಕೊಂಡಿಲ್ಲ. ಚಿತ್ರದಲ್ಲಿ ತಂದೆ-ಮಗಳ ದೃಶ್ಯಗಳಿಗೂ ಹೆಚ್ಚಿನ ಪ್ರಾಮುಖ್ಯತೆ ಇದೆಯಂತೆ. “ಮೌನಂ’ ಚಿತ್ರವನ್ನು ರಾಜ್‌ ಪಂಡಿತ್‌ ನಿರ್ದೇಶಿಸಿದ್ದು, ಶ್ರೀಹರಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಆರವ್‌ ರಿಷಿಕ್‌ ಸಂಗೀತ, ಶಂಕರ್‌ ಛಾಯಾಗ್ರಹಣವಿದೆ. ಶೀಘ್ರದಲ್ಲೇ ಚಿತ್ರದ ಟೀಸರ್‌ ಹಾಗೂ ಹಾಡುಗಳು ಬಿಡುಗಡೆಯಾಗಲಿದೆ. ಈ ಚಿತ್ರ ಫೆಬ್ರವರಿಯಲ್ಲಿ ತೆರೆಕಾಣಲಿದೆ.

“ನನ್ನ ಪ್ರಕಾರ ಈ ವರ್ಷ ಕನಿಷ್ಟ ನಾನು ಅಭಿನಯಿಸುವ ನಾಲ್ಕೈದು ಸಿನಿಮಾಗಳು ಬಿಡುಗಡೆ ಆಗಬಹುದು ಎಂಬ ನಿರೀಕ್ಷೆಯ ಲ್ಲಿದ್ದೇನೆ. ಸದ್ಯ “ಮೌನಂ’ ರಿಲೀಸ್‌ಗೆ ರೆಡಿಯಿದೆ. ಫೆಬ್ರವರಿಯಲ್ಲಿ ಅದು ತೆರೆಗೆ ಬರಬಹುದು.
-ಮಯೂರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

  • ಇತ್ತೀಚೆಗಷ್ಟೇ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು...

  • ಪ್ರತಿವರ್ಷದಂತೆ ಈ ವರ್ಷವೂ ನಟ ಶಿವರಾಜ ಕುಮಾರ್‌ ಅಯ್ಯಪ್ಪ ಸ್ವಾಮಿ ದರ್ಶನ ಕೈಗೊಳ್ಳಲಿದ್ದಾರೆ. ಶನಿವಾರ ಎಂ.ಎಸ್‌ ರಾಮಯ್ಯ ಆಸ್ಪತ್ರೆಯ ಹತ್ತಿರವಿರುವ ಅಯ್ಯಪ್ಪ...

  • ಈ ಬಾರಿ ನಡೆಯಲಿರುವ ಹನ್ನೆರಡನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ನಟ ಯಶ್‌ ಅವರು ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರತಿ...

ಹೊಸ ಸೇರ್ಪಡೆ