ಡಿ.18ಕ್ಕೆ ನಾನೊಂಥರ ರಿಲೀಸ್
Team Udayavani, Dec 11, 2020, 12:45 PM IST
“ನಾನೊಂಥರ’ ಎಂಬ ಚಿತ್ರದ ಬಗ್ಗೆ ನೀವು ಕೇಳಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಡಿ.18ರಂದು ತೆರೆಕಾಣುತ್ತಿದೆ.
ವೃತ್ತಿಯಲ್ಲಿ ವೈದೈಯಾಗಿರುವ ಜಾಕ್ಲಿನ್ ಫ್ರಾನ್ಸಿಸ್ ಈ ಸಿನಿಮಾದ ನಿರ್ಮಾಪಕರು. ರಮೇಶ್ಕಗ್ಗಲ್ನಿರ್ದೇಶಕರು. ಈ ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ತಾರಕ್ ಶೇಖರಪ್ಪ ಕೂಡ ವೃತ್ತಿಯಲ್ಲಿ ವೈದ್ಯರು. ನಿರ್ಮಾಪಕರ ಪುತ್ರ ಜೈಸನ್ ಕೂಡಾ ನಟಿಸಿದ್ದು, ನಾಯಕನ ಸಹೋದರನಾಗಿ ಬಣ್ಣ ಹಚ್ಚಿದ್ದಾರೆ.ನಾಯಕಿ ರಕ್ಷಿಕಾ ಇಲ್ಲಿ ಸಂಪ್ರದಾಯಸ್ಥಕುಟುಂಬದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ : ಇಂದಿನಿಂದ ಥಿಯೇಟರ್ನಲ್ಲಿ ಪುರುಸೋತ್ ರಾಮನ ಆಟ ಶುರು
ಎಲ್ಲಾ ಓಕೆ, “ನಾನೊಂಥರ’ ಎಂದರೇನು ಎಂದು ನೀವು ಕೇಳಬಹುದು. ನಿರ್ದೇಶಕ ರಮೇಶ್ ಹೇಳುವಂತೆ, ಚಿತ್ರದ ನಾಯಕ ಅವನಿಗೆ ಬೇಕಾದಂತೆ ಬದುಕುತ್ತಿರುತ್ತಾನೆ.ಕುಡಿಬೇಕು ಎಂದಾಗ ಕುಡೀತಾನೆ, ಪ್ರೀತಿಸಬೇಕು ಎಂದಾಗ ಪ್ರೀತಿಸುತ್ತಾನೆ…. ಹೀಗೆ ತನಗೆ ಏನು ಅನಿಸುತ್ತದೆ ಅದನ್ನು ಮಾಡುತ್ತಾನೆ. ಆತನ ವ್ಯಕ್ತಿತ್ವವೇ ಒಂಥರಾ ಇರೋದರಿಂದ ಸಿನಿಮಾಕ್ಕೆ “ನಾನೊಂಥರ’ ಎಂಬ ಟೈಟಲ್ ಇಡಲಾಗಿದೆ.
ಇಲ್ಲಿ ನಾಯಕ ಏನೋ ಅಂದುಕೊಂಡರೆ ಆತನ ಜೀವನದಲ್ಲಿ ಬರುವ ಟ್ವಿಸ್ಟ್ಗಳು ಆತನನ್ನು ಇನ್ನೊಂದು ಹಾದಿಗೆ ಸಾಗುವಂತೆ ಮಾಡುತ್ತದೆ ಎಂದು ಚಿತ್ರದ ಬಗ್ಗೆ ವಿವರ ನೀಡಿದರು ರಮೇಶ್. ವಿಜಯ್ ಸಿನಿಮಾಸ್ ಈ ಚಿತ್ರದ ವಿತರಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ