“ಪೊಗರು’ ಪಕ್ಕಾ ಸ್ವಮೇಕ್ ಚಿತ್ರ: ಧ್ರುವ
Team Udayavani, Nov 6, 2017, 4:09 PM IST
ಧ್ರುವ ಅವರ ಮುಂದಿನ ಚಿತ್ರ “ಪೊಗರು’ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರ ಆರಂಭವಾದ ದಿನದಿಂದಲೂ ಒಂದಲ್ಲ, ಒಂದು ವಿಷಯದಲ್ಲಿ ಸುದ್ದಿಯಾಗುತ್ತಲೇ ಇತ್ತು. ಮುಖ್ಯವಾಗಿ ಇದು ರೀಮೇಕಾ, ಸ್ವಮೇಕಾ ಎಂಬುದು ಒಂದು ಪ್ರಶ್ನೆಯಾದರೆ, ಚಿತ್ರದ ಕಥೆಯೇ ಫೈನಲ್ ಆಗಿಲ್ಲವಂತೆ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿತ್ತು.
ಆದರೆ, ಈಗ ಸ್ವತಃ ಧ್ರುವ ಸರ್ಜಾ ಅವರು ಚಿತ್ರದ ಬಗೆಗಿನ ಗೊಂದಲಕ್ಕೆ ತೆರೆಎಳೆದಿದ್ದಾರೆ. “ನನ್ನ ಮೂರು ಸಿನಿಮಾಗಳು ಸ್ವಮೇಕ್ ಆಗಿದ್ದವು. ಈಗ ನಾಲ್ಕನೇ ಸಿನಿಮಾ “ಪೊಗರು’ ಕೂಡಾ ಪಕ್ಕಾ ಸ್ವಮೇಕ್. ಕಥೆಯಲ್ಲೂ ಯಾವುದೇ ಗೊಂದಲವಿಲ್ಲ. ಕಥೆಯ ಸಿದ್ಧವಾಗುತ್ತಿದೆ.
ಯಾವುದೇ ಒಂದು ಸಿನಿಮಾವಾದರೂ ಕಥೆ ಅಂತಿಮವಾಗಲು ಸ್ವಲ್ಪ ಸಮಯ ಬೇಕು. ಸ್ವಲ್ಪ ಆಲೋಚಿಸಿ, ಸಾಮಾನ್ಯ ಪ್ರೇಕ್ಷಕನಾಗಿ ಕಥೆ ಮಾಡಿದಾಗ ಸಿನಿಮಾ ಚೆನ್ನಾಗಿ ಬರುತ್ತದೆ. ಚಿತ್ರ ಮುಂದಿನ ತಿಂಗಳು ಆರಂಭವಾಗಲಿದೆ’ ಎಂದು “ಪೊಗರು’ ಬಗೆಗಿನ ಗೊಂದಲಕ್ಕೆ ತೆರೆಎಳೆಯುತ್ತಾರೆ ಧ್ರುವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…