ಪದ್ಮಿನಿಗೆ ಪವರ್‌ ಸಾಥ್‌

ಟ್ರೇಲರ್‌ ಮೆಚ್ಚಿದ ಪುನೀತ್‌

Team Udayavani, Apr 23, 2019, 3:26 AM IST

ಜಗ್ಗೇಶ್‌ ಅಭಿನಯದ “ಪ್ರೀಮಿಯರ್‌ ಪದ್ಮಿನಿ’ ಚಿತ್ರ ಈ ವಾರ (ಏ.26) ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಈಗ ನಟ ಪುನೀತ್‌ರಾಜಕುಮಾರ್‌ ಕೂಡಾ ಚಿತ್ರದ ಟ್ರೇಲರ್‌ ನೋಡಿ ಖುಷಿ ಪಟ್ಟಿದ್ದಾರೆ.

ತನಗೆ ಇಷ್ಟವಾದ ಸಿನಿಮಾಗಳಿಗೆ ಬೆನ್ನುತಟ್ಟುತ್ತಲೇ ಬರುತ್ತಿರುವ ಪುನೀತ್‌ ಈ ಬಾರಿ “ಪ್ರೀಮಿಯರ್‌ ಪದ್ಮಿನಿ’ ಚಿತ್ರದ ಟ್ರೇಲರ್‌ ಅನ್ನು ಮೆಚ್ಚಿಕೊಂಡಿದ್ದಾರೆ. “ಫ್ಯಾಮಿಲಿ ಆಡಿಯನ್ಸ್‌ಗೆ ಬೇಕಾದ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿವೆ’ ಎಂದಿರುವ ಪುನೀತ್‌, “ಇವತ್ತು ಕನ್ನಡದಲ್ಲಿ ಹೊಸ ಬಗೆಯ ಸಿನಿಮಾಗಳು ನಾನಾ ಕಾರಣಗಳಿಗಾಗಿ, ಪ್ರೇಕ್ಷಕರನ್ನು ಸೆಳೆಯುತ್ತಿವೆ.

“ಪ್ರೀಮಿಯರ್‌ ಪದ್ಮಿನಿ’ ಕೂಡಾ ಅದೇ ಸಾಲಿನಲ್ಲಿರುವ ಚಿತ್ರ ಎಂಬ ವಿಶ್ವಾಸವಿದೆ’ ಎಂದಿದ್ದಾರೆ. ಈ ಚಿತ್ರವನ್ನು ಶ್ರುತಿ ನಾಯ್ಡು ನಿರ್ಮಿಸಿದ್ದಾರೆ. ಕಿರುತೆರೆಯಲ್ಲಿ ವಿಭಿನ್ನ ಧಾರವಾಹಿಗಳನ್ನು ನೀಡುವ ಮೂಲಕ ಮನೆಮಂದಿಯ ಮನಗೆದ್ದಿರುವ ಶ್ರುತಿ ನಾಯ್ಡು ಮೊದಲ ಬಾರಿಗೆ ಹಿರಿತೆರೆಗೆ ಎಂಟ್ರಿಕೊಟ್ಟಿದ್ದಾರೆ. ಹಿರಿತೆರೆಯ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗುತ್ತದೆ ಎಂಬ ವಿಶ್ವಾಸ ಅವರಿಗಿದೆ.

ಅಂದಹಾಗೆ, ರಮೇಶ್‌ ಇಂದಿರಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಕುಟುಂಬವೊಂದರ ಸಮಸ್ಯೆಯನ್ನಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಇವತ್ತು ವಿಶಾಲವಾಗಿವಾಗಿ ಯೋಚಿಸುವುದನ್ನು ಬಿಟ್ಟು, ಸಂಕುಚಿತ ಮನಸ್ಥಿತಿಯಿಂದ ಸಣ್ಣಪುಟ್ಟ ಸಮಸ್ಯೆಗಳಿಗೂ ಕೋರ್ಟ್‌, ಡೈವೋರ್ಸ್‌ ಎನ್ನುವ ಮಂದಿಗೆ ಈ ಚಿತ್ರ ಒಂದು ಪಾಠವಾಗಬಲ್ಲದು ಎಂಬ ವಿಶ್ವಾಸ ನಿರ್ದೇಶಕರಿಗಿದೆ.

ಚಿತ್ರದಲ್ಲಿ ಕಾಮಿಡಿ ಜೊತೆಗೆ ಭಾವನಾತ್ಮಕ ಸಂಬಂಧಕ್ಕೂ ಒತ್ತು ನೀಡಲಾಗಿದೆಯಂತೆ. ಹಿರಿಯ ಮತ್ತು ಕಿರಿಯ ಕಲಾವಿದರ ಸಂಗಮವೇ ಸಿನಿಮಾದಲ್ಲಿದ್ದು, ಎರಡು ತಲೆಮಾರಿನ ಕಥೆ ಕೂಡ ಈ ಚಿತ್ರದಲ್ಲಿದೆ. ಜಗ್ಗೇಶ್‌ ಈ ಸಿನಿಮಾದಲ್ಲಿ ಕಾರು ಮಾಲೀಕರಾಗಿ ನಟಿಸಿದ್ದು, ಪ್ರಮೋದ್‌ ಡ್ರೈವರ್‌ ಪಾತ್ರ ಮಾಡಿದ್ದಾರೆ. ಉಳಿದಂತೆ ಮಧುಬಾಲ, ಸುಧಾರಾಣಿ, ದತ್ತಣ್ಣ ಹೀಗೆ ಅನುಭವಿ ಕಲಾವಿದರ ದಂಡೇ ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ