Kannada Cinema; ‘ರಾಕ್ಷಸ’ನ ಹಿಂದೆ ಬಿದ್ದ ಪ್ರಜ್ವಲ್ ದೇವರಾಜ್
Team Udayavani, Jan 15, 2024, 3:22 PM IST
ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಾ ಸದಾ ಬಿಝಿಯಾಗಿರುವ ನಟರಲ್ಲಿ ಪ್ರಜ್ವಲ್ ದೇವರಾಜ್ ಕೂಡಾ ಒಬ್ಬರು. ಸದ್ಯ ಐದು ಸಿನಿಮಾಗಳಲ್ಲಿ ಬಿಝಿಯಾಗಿರುವ ಪ್ರಜ್ವಲ್ ಅಕೌಂಟ್ಗೆ ಮತ್ತೂಂದು ಸಿನಿಮಾ ಸೇರ್ಪಡೆಯಾಗಿದೆ. ಅದು “ರಾಕ್ಷಸ’. ಲೋಹಿತ್ ಎಚ್ ಈ ಸಿನಿಮಾದ ನಿರ್ದೇಶಕರು.
ಈಗಾಗಲೇ “ಮಮ್ಮಿ’, “ದೇವಕಿ’ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಲೋಹಿತ್ ಈಗ “ರಾಕ್ಷಸ’ನ ಹಿಂದೆ ಬಿದ್ದಿದ್ದಾರೆ. ಇದೊಂದು ಹಾರರ್ ಹಿನ್ನೆಲೆಯಲ್ಲಿ ಸಾಗುವ ಚಿತ್ರವಾಗಿದ್ದು, ಟೈಮ್ ಲೂಪ್ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಟೈಮ್ ಲೂಪ್ನಡಿ ಹಾರರ್ ಕಥೆ ಬಂದಿರೋದು ತೀರಾ ವಿರಳ. ಈಗ ಲೋಹಿತ್ ಇಂತಹ ಪ್ರಯತ್ನ ಮಾಡಿದ್ದಾರೆ. ಇಡೀ ಸಿನಿಮಾವನ್ನು ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಚಿತ್ರಿಕರಣ ಮಾಡಲಾಗಿದೆ.
ಚಿತ್ರದ ಕ್ಲೈಮ್ಯಾಕ್ಸ್ ಅನ್ನು ವಿಶೇಷವಾಗಿ ಚಿತ್ರೀಕರಿಸಲಾಗಿದ್ದು, ಅಂಡರ್ವಾಟರ್ನಲ್ಲಿ ಶೂಟಿಂಗ್ ಮಾಡಲಾಗಿದೆ. ಚಿತ್ರವನ್ನು ದೀಪು ಬಿಎಸ್ ನಿರ್ಮಿಸಿದ್ದಾರೆ.
ನಾನು ಮಾಡಿರುವ ಮೊದಲ ಹಾರರ್ ಸಿನಿಮಾ “ರಾಕ್ಷಸ’. ರಾಕ್ಷಸದ ಕಥೆ ಹಾಗೂ ನಿರೂಪಣೆ ತುಂಬಾ ವಿಭಿನ್ನವಾಗಿದೆ. ಲೋಹಿತ್ ಇಡೀ ಸಿನಿಮಾವನ್ನು ಹೊಸ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರಜ್ವಲ್ ದೇವರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು
China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು
VS Ugrappa: ಪ್ರಜ್ವಲ್ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ
JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು
Uppinangady: ತೀವ್ರ ಜ್ವರ; ಅರ್ಚಕ ಸಾವು