ಮತ್ತೆ ಖಾಕಿ ತೊಟ್ಟ ಪ್ರಜ್ವಲ್ ದೇವರಾಜ್
Team Udayavani, Jan 13, 2022, 2:19 PM IST
ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ಮಾಫಿಯಾ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದೆ. ಈ ಚಿತ್ರವನ್ನು ಲೋಹಿತ್ ನಿರ್ದೇಶಿಸುತ್ತಿದ್ದು, “ಬೆಂಗಳೂರು ಫಿಲಂಸ್’ ಬ್ಯಾನರ್‌ನಲ್ಲಿ ಕುಮಾರ್ ಬಿ. ನಿರ್ಮಿಸುತ್ತಿದ್ದಾರೆ. ಇದೀಗ “ಮಾಫಿಯಾ’ ಚಿತ್ರತಂಡದ ಕಡೆಯಿಂದ ಮತ್ತೂಂದು ಹೊಸ ಮಾಹಿತಿ ಹೊರಬಿದ್ದಿದೆ. ಅದೇನೆಂದರೆ, “ಮಾಫಿಯಾ’ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಡಿ. ಸತ್ಯನಾರಾಯಣ ಎಂಬ ಹೆಸರಿನ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಜ್ವಲ್ ದೇವರಾಜ್ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ, ಇದೀಗ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರ ಪೊಲೀಸ್ ಗೆಟಪ್ ಅನ್ನು ರಿವೀಲ್ ಮಾಡಿದೆ. ಈ ಹಿಂದೆ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರದಲ್ಲಿ ಖಾಕಿ ತೊಟ್ಟು ಮಿಂಚಿದ್ದ ನಟ ಪ್ರಜ್ವಲ್ ದೇವರಾಜ್, ಇದೀಗ “ಮಾಫಿಯಾ’ ಚಿತ್ರದಲ್ಲಿ ಮತ್ತೂಮ್ಮೆ ಖಾಕಿ ತೊಟ್ಟು ಪ್ರೇಕ್ಷಕರ ಮುಂದೆ ಬರುವ ಸುಳಿವು ಕೊಟ್ಟಿದ್ದಾರೆ.
ಇದನ್ನೂ ಓದಿ:ಪುಷ್ಪ 2 ಇನ್ನಷ್ಟು ಉತ್ತಮ ಮತ್ತು ದೊಡ್ಡದಾಗಿದೆ: ರಶ್ಮಿಕಾ ಮಂದಣ್ಣ
ಸದ್ಯ ಬಿಡುಗಡೆಯಾಗಿರುವ “ಮಾಫಿಯಾ’ ಚಿತ್ರದ ಪೋಸ್ಟರ್ ನಲ್ಲಿ ಪ್ರಜ್ವಲ್ ದೇವರಾಜ್ ಗೆಟಪ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. “ಮಾಫಿಯಾ’ ಚಿತ್ರದ ಮತ್ತೂಂದು ವಿಶೇಷವೆಂದರೆ ಈ ಚಿತ್ರದಲ್ಲಿ ಪ್ರಜ್ವಲ್ ಜೊತೆ ಅವರ ತಂದೆ ದೇವರಾಜ್ ಕೂಡಾ ನಟಿಸುತ್ತಿದ್ದಾರೆ. ಇಬ್ಬರೂ ಪೊಲೀಸ್ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿರೋದು ಈ ಚಿತ್ರದ ಮತ್ತೂಂದು ಹೈಲೈಟ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಾ.ನಗರದಲ್ಲಿ ʼಬೈರಾಗಿʼ ವೀಕ್ಷಿಸಿದ ಶಿವಣ್ಣ: ಚಿತ್ರ ಪ್ರದರ್ಶನ ಯಾತ್ರೆಗೆ ಅದ್ದೂರಿ ಸ್ವಾಗತ
ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು
ಸಾಯಿ ಪಲ್ಲವಿ ‘ಗಾರ್ಗಿ’ಗೆ ಸಾಥ್ ನೀಡಿದ ರಕ್ಷಿತ್ ಶೆಟ್ಟಿ
ಚಾರ್ಲಿ ಕಲೆಕ್ಷನ್ 150 ಕೋಟಿ!: ಲಾಭದಲ್ಲಿ ಶ್ವಾನಗಳಿಗೂ ಪಾಲು
ಕಿಚ್ಚ ಸುದೀಪ್ ವಿರುದ್ಧ ಅವಹೇಳನಕಾರಿ ವಿಡಿಯೋ: ನಿರ್ದೇಶಕ ನಂದಕಿಶೋರ್ ಆಕ್ರೋಶ