Udayavni Special

ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಅಣ್ಣಾವ್ರು ಕುಮಾರರಾಮ ಚಿತ್ರ ಮಾಡಬೇಕಿತ್ತು, ಆದ್ರೆ..!


Team Udayavani, Apr 15, 2021, 7:56 AM IST

ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಅಣ್ಣಾವ್ರು ಕುಮಾರರಾಮ ಚಿತ್ರ ಮಾಡಬೇಕಿತ್ತು, ಆದ್ರೆ..!

ಕನ್ನಡ ಚಿತ್ರರಂಗದ ಮಟ್ಟಿಗೆ ವರನಟ ಡಾ. ರಾಜಕುಮಾರ್‌ ಮಾಡದ ಪಾತ್ರಗಳಿಲ್ಲ ಅಂದ್ರೆ, ಅದು ಖಂಡಿತ ಅತಿಶಯೋಕ್ತಿ ಅಲ್ಲ. ಅದಕ್ಕೆ ಕಾರಣ ರಾಜಕುಮಾರ್‌, ಪೌರಾಣಿಕ ಪಾತ್ರಗಳಿಂದ ಹಿಡಿದು ಬಾಂಡ್‌ ಶೈಲಿಯ ಆ್ಯಕ್ಷನ್‌ ಪಾತ್ರಗಳವರೆಗೆ ಎಲ್ಲ ಪಾತ್ರಗಳನ್ನೂ ಲೀಲಾಜಾಲವಾಗಿ ನಿರ್ವಹಿಸಿರುವುದು.  ಆದರೆ, ಅಣ್ಣಾವ್ರ ಸಿನಿಜರ್ನಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರಿಂದ ಸಿನಿಮಾ ಮಾಡಿಸಬೇಕು ಎಂದು ಪ್ರಯತ್ನಿಸಿ ಕೈಬಿಟ್ಟಿರುವ ಅನೇಕ ಪ್ರಾಜೆಕ್ಟ್ಗಳು ಅಲ್ಲಲ್ಲಿ ಸಾಕಷ್ಟು ಕಾಣಸಿಗುತ್ತವೆ. ಅಂಥ ಸಿನಿಮಾಗಳಲ್ಲಿ ಕುಮಾರ ರಾಮನ ಕಥೆ ಕೂಡ ಒಂದು.

ಹೌದು, ವಿಜಯನಗರ ಸಾಮ್ರಾಜ್ಯದ ನಂಟು ಹೊಂದಿದ್ದ, ಕಂಪ್ಲಿ ರಾಜ್ಯದ ರಾಜಕುಮಾರನಾದ ಕುಮಾರರಾಮನ ಕಥೆಯನ್ನು ಅಣ್ಣಾವ್ರ ಸಿನಿಮಾ ಮಾಡಬೇಕು ಎಂದು ನಿರ್ಧರಿಸಿ, ಈ ಸಿನಿಮಾಕ್ಕೆ ಬೇಕಾದ ಎಲ್ಲ ತಯಾರಿಯನ್ನೂ ಶುರು ಮಾಡಲಾಗಿತ್ತು. ಸ್ಕ್ರಿಪ್ಟ್ ಕೂಡ ರೆಡಿಯಾಗಿ, ಪೂಜೆಯೂ ಆಗಿತ್ತು. ಆದರೆ, ಆಮೇಲೆ ಕೆಲವು ಕಾರಣಗಳಿಂದ ಈ ಸಿನಿಮಾ ಮಾಡೋದು ಬೇಡ ಎಂದು ನಿಲ್ಲಿಸಲಾಯಿತು.

ಅದಕ್ಕೆ ಕಾರಣ ಈ ಚಿತ್ರದ ಕಥೆಯ ಎಳೆಯಲ್ಲಿ ಬರುವ ಸೂಕ್ಷ್ಮ ವಿಚಾರ. ಕುಮಾರರಾಮ ಮತ್ತು ರತ್ನಾಜಿ ಪ್ರೀತಿಸುತ್ತಾರೆ. ಆದರೆ, ಕುಮಾರರಾಮನ ತಂದೆ ರತ್ನಾಜಿಯನ್ನು ಮದುವೆ ಆಗಿಬಿಡುತ್ತಾರೆ. ಈ ಮದುವೆ ಬಳಿಕ ವರಸೆಯಲ್ಲಿ ಕುಮಾರರಾಮ ರತ್ನಾಜಿಗೆ ಮಗ ಆಗುತ್ತಾನೆ. ಪರನಾರಿ ಸಹೋದರನೆಂಬ ಖ್ಯಾತಿ ಹೊಂದಿದ್ದ ಕುಮಾರರಾಮ ರತ್ನಾಜಿಯನ್ನು ಚಿಕ್ಕಮ್ಮನಂತೆ ಕಾಣುತ್ತಾನೆ. ಮದುವೆ ನಂತರವೂ ರತ್ನಾಜಿ, ಕುಮಾರರಾಮನನ್ನು ಪೀಡಿಸುತ್ತಾಳೆ. ಚಿಕ್ಕಮ್ಮನೇ ಮಗನನ್ನು ಪ್ರೀತಿಸುವ, ವ್ಯಾಮೋಹಿಸುವ ಸನ್ನಿವೇಶಗಳು ಈ ಚಿತ್ರದಲ್ಲಿತ್ತು. ಹೀಗಾಗಿ ಚಿಕ್ಕಮ್ಮನನ್ನು ಪ್ರೀತಿಸುವ ಕುಮಾರರಾಮನ ಪಾತ್ರದಲ್ಲಿ ರಾಜಕುಮಾರ್‌ ಅವರನ್ನು ನೋಡಲು ಅಭಿಮಾನಿಗಳು ಒಪ್ಪುತ್ತಾರಾ ಎಂಬ ಚರ್ಚೆ ಜೋರಾಗಿ ಶುರುವಾಯ್ತು.

ಅಲ್ಲದೆ ದೆಹಲಿ ಸುಲ್ತಾನ ಮತ್ತು ಕುಮಾರರಾಮನ ನಡುವಿನ ಸನ್ನಿವೇಶಗಳಲ್ಲಿ ಸುಲ್ತಾನರಿಗೆ ಅಗೌರವ ತೋರಿಸುವ ದೃಶ್ಯಗಳಿದ್ದವು. ಆ ಸಮಯಕ್ಕೆ ಅದು ಸೂಕ್ಷ್ಮ ವಿಷಯವಾಗಿದ್ದರಿಂದ, ಹಿಂದೂ-ಮುಸ್ಲಿಂ ನಡುವೆ ವಿವಾದಕ್ಕೆ ಕಾರಣವಾಗಬಹುದು ಎಂಬ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದರು. ಇಂಥ ಪಾತ್ರವನ್ನು ಅಣ್ಣಾವ್ರ ಅಭಿಮಾನಿಗಳು ಹೇಗೆ ಸ್ವೀಕರಿಸಬಹುದು ಎಂಬ ಆತಂಕ ಶುರುವಾಯ್ತು. ಕೊನೆಗೆ ಈ ಸಿನಿಮಾವನ್ನು ಅಷ್ಟಕ್ಕೆ ನಿಲ್ಲಿಸಲಾಯಿತು.

ಅಂದಹಾಗೆ, ಇದೇ ಕಥೆಯನ್ನು ಇಟ್ಟುಕೊಂಡು, 2006ರಲ್ಲಿ ರಾಜಕುಮಾರ್‌ ಪುತ್ರ ಶಿವರಾಜಕುಮಾರ್‌ “ಗಂಡುಗಲಿ ಕುಮಾರರಾಮ’ ಎಂಬ ಹೆಸರಿನಲ್ಲಿ ಸಿನಿಮಾ ಮಾಡಿದರು. ಕುಮಾರ ರಾಮನ ಪಾತ್ರದಲ್ಲಿ ನಟ ಶಿವಣ್ಣ ಕಾಣಿಸಿಕೊಂಡರು. ಸಿನಿಮಾಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾದರೂ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಂದುಕೊಂಡ ಮಟ್ಟಿಗೆ ಸಕ್ಸಸ್‌ ಆಗಲಿಲ್ಲ. ಒಟ್ಟಾರೆ ರಾಜಕುಮಾರ್‌ ಸಿನಿಕೆರಿಯರ್‌ನಲ್ಲಿ ಇಂಥ ಅನೇಕ ಉದಾಹರಣೆಗಳು ಅಲ್ಲಲ್ಲಿ ಕಾಣಸಿಗುತ್ತದೆ.

ಟಾಪ್ ನ್ಯೂಸ್

fyhtyt

ಖಾಸಗಿ ಮೆಡಿಕಲ್ ಕಾಲೇಜುಗಳಿಂದ 75% ರಷ್ಟು ಹಾಸಿಗೆ ಪಡೆಯಲಾಗುತ್ತಿದೆ : ಸಚಿವ ಡಾ.ಕೆ.ಸುಧಾಕರ್

trtretr

ನಾವು ಬಡವರು ಏಲ್ಲಿ ಹೋಗಬೇಕು ? ಸಚಿವ ಬಿ.ಸಿ ಪಾಟೀಲ್ ಎದುರು ಜನರ ಅಳಲು

hjyutyuty

ದಾವಣಗೆರೆಯಲ್ಲಿ ಆಕ್ಸಿಜನ್ ಟ್ಯಾಂಕರ್ ವಿಳಂಬ:ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

LIC new rule these major changes will be applicable from may 10

ಇನ್ಮುಂದೆ ವಾರದಲ್ಲಿ ಐದು ದಿನಗಳು ಮಾತ್ರ ಕಾರ್ಯ ನಿರ್ವಹಿಸಲಿದೆ ಎಲ್ ಐ ಸಿ ಕಚೇರಿ ..!

dyhtyt

ಪಶ್ಚಿಮ ಬಂಗಾಳ : ಕೇಂದ್ರ ಸಚಿವರ ವಾಹನದ ಮೇಲೆ ದಾಳಿ

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

Uber announces cash incentives for vaccinating 150000 drivers

ತನ್ನ ಎಲ್ಲಾ ಚಾಲಕರಿಗೆ ಲಸಿಕೆಗಾಗಿ ಪ್ರೋತ್ಸಾಹ ಧನ ನೀಡಲು ಮುಂದಾದ ಉಬರ್ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kavi

ಕವಿರತ್ನ ಕಾಳಿದಾಸ, ಅಂಜದ ಗಂಡು ನಿರ್ದೇಶಕ ರೇಣುಕಾ ಶರ್ಮಾ ಕೋವಿಡ್ ನಿಂದ ನಿಧನ

ghujygutut

ನಾನು ಆರಾಮಾಗಿದ್ದೇನೆ, ನನಗೆ ಏನೂ ಆಗಿಲ್ಲ : ಹಿರಿಯ ನಟ ದೊಡ್ಡಣ್ಣ

trrttr

ಕೋವಿಡ್ ಕರಾಳತೆ ಬಿಚ್ಚಿಟ್ಟ ನಟಿ ಕೃತಿ ಕರಬಂದ

ಕೋವಿಡ್ ಸೋಂಕಿಗೆ ಖ್ಯಾತ ಸಂಗಿತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕಿರಣ್ ಬಲಿ

ಕೋವಿಡ್ ಸೋಂಕಿಗೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕಿರಣ್ ಬಲಿ

Kannada director Naveen

ಕೋವಿಡ್ ನಿಂದ ಸಾವನ್ನಪ್ಪಿದ ಸ್ಯಾಂಡಲ್ ವುಡ್ ನಿರ್ದೇಶಕ ನವೀನ್

MUST WATCH

udayavani youtube

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

udayavani youtube

ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿಯಿಂದ ಕೊರೊನಾ ಜಾಗೃತಿ

udayavani youtube

ನರೇಗಾ ವೇತನ ತಾರತಮ್ಯ: ಕಂಪ್ಯೂಟರ್ ಆಪರೇಟರ್ ಮೇಲೆ ಹಲ್ಲೆ

udayavani youtube

ಆಸ್ಪತ್ರೆಗಳಲ್ಲಿ ಬೆಡ್ ಸಿಗದಿದ್ದಕ್ಕೆ CM Yediyurappa ಮನೆ ಮುಂದೆ ಧರಣಿ

ಹೊಸ ಸೇರ್ಪಡೆ

fyhtyt

ಖಾಸಗಿ ಮೆಡಿಕಲ್ ಕಾಲೇಜುಗಳಿಂದ 75% ರಷ್ಟು ಹಾಸಿಗೆ ಪಡೆಯಲಾಗುತ್ತಿದೆ : ಸಚಿವ ಡಾ.ಕೆ.ಸುಧಾಕರ್

covacsin is only 10 doses

ಕೊವ್ಯಾಕ್ಸಿನ್‌ ಇರುವುದು 10 ಡೋಸ್‌ ಮಾತ್ರ

trtretr

ನಾವು ಬಡವರು ಏಲ್ಲಿ ಹೋಗಬೇಕು ? ಸಚಿವ ಬಿ.ಸಿ ಪಾಟೀಲ್ ಎದುರು ಜನರ ಅಳಲು

hjyutyuty

ದಾವಣಗೆರೆಯಲ್ಲಿ ಆಕ್ಸಿಜನ್ ಟ್ಯಾಂಕರ್ ವಿಳಂಬ:ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

The Prime Minister had to take precautions

ಪ್ರಧಾನಿ ಮುನ್ನೆಚ್ಚರಿಕೆ ವಹಿಸಬೇಕಿತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.