UI Teaser: ‘ಯುಐʼ ಲೋಕಕ್ಕೆ ಉಪ್ಪಿಯೇ ಅಧಿಪತಿ.. ಸಖತ್ ಕುತೂಹಲ ಹುಟ್ಟಿಸಿದ ಟೀಸರ್
Team Udayavani, Jan 8, 2024, 11:12 AM IST
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಬಹು ಸಮಯದ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟು, ಅಭಿನಯಿಸಿರುವ ಪ್ಯಾನ್ ಇಂಡಿಯಾ ʼಯುಐʼ ಸಿನಿಮಾದ ಬಹು ನಿರೀಕ್ಷಿತ ಎರಡನೇ ಟೀಸರ್ ಸೋಮವಾರ(ಜ.8 ರಂದು) ರಿಲೀಸ್ ಆಗಿದೆ.
ಟೀಸರ್ ಸಂಭ್ರಮಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಜೊತೆಯಾಗಿದ್ದು, ಕಿಚ್ಚ ಸುದೀಪ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದರಿಂದ, ಸೋಶಿಯಲ್ ಮೀಡಿಯಾ ಮೂಲಕ ಟೀಸರ್ ರಿಲೀಸ್ ಮಾಡಿ, ಉಪ್ಪಿ ʼಯುಐʼಗೆ ಸಾಥ್ ನೀಡಿದ್ದಾರೆ.
ಉಪೇಂದ್ರ ಅಂದ್ಮೇಲೆ ಅಲ್ಲಿ ತಲೆಗ ಹುಳು ಬಿಡುವ ಅಂಶಗಳಿರುತ್ತವೆ. ಅದರಂತೆ ಟೀಸರ್ ಎಂದು ಬರೀ ಕತ್ತಲೆಯಲ್ಲಿ ಸೌಂಡ್ ಹಾಕಿ ಇದೇ ಟೀಸರ್ ಎಂದು ಪ್ರೇಕ್ಷಕರ ತಲೆ ಓಡುವಂತೆ ಮಾಡಿದ್ದರು. ಇದಾದ ಬಳಿಕ ಕುದುರೆ ಹೆಜ್ಜೆ ತೋರಿಸಿ ಟೀಸರ್ ಡೇಟ್ ಗೆಸ್ ಮಾಡಿ ಎಂದಿದ್ದರು.
ಅಂತೂ ಎಲ್ಲರೂ ಕಾಯುತ್ತಿದ್ದ ʼಯುಐʼ ಟೀಸರ್ ರಿಲೀಸ್ ಆಗಿದೆ. ಮೊದಲ ದೃಶ್ಯದಲ್ಲಿ ಎರಡು ವಿಭಿನ್ನ ಜೀವಿಗಳು ದೂರದೂರನ್ನು ನೋಡುವ ನೋಟವನ್ನು ತೋರಿಸಲಾಗಿದೆ. ಅವತಾರ್ ಸಿನಿಮಾದಲ್ಲಿರುವ ಜೀವಿಗಳ ಹಾಗೆ ತೋರುತ್ತಾರೆ. ಇದು ಎಐ ವರ್ಲ್ಡ್ ಅಲ್ಲ ಯುಐ ವರ್ಲ್ಡ್ ಎಂದು, ತಮ್ಮದೇ ಆದ ಜಗತ್ತನ್ನು ತೋರಿಸಿದ್ದಾರೆ. ಇಲ್ಲಿ ಒಂದು ಜಗತ್ತಿದೆ. ಆ ಜಗತ್ತಿಗೆ ಒಬ್ಬ ಸೇನಾದಿಪತಿ, ದೇವ, ಸೈನ್ಯವೇ ಇದೆ. ಉಪ್ಪಿ ಕೊಂಬು ಇರುವ ಕುದುರೆ ಏರಿ ಬಂದಿದ್ದಾರೆ. ರವಿ ಶಂಕರ್ ಹಾಗೂ ಸಾಧಕೋಕಿಲ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಮೇಲ್ನೋಟಕ್ಕೆ ಇದೊಂದು ವಿಭಿನ್ನ ಕಂಟೆಂಟ್ ವುಳ್ಳ ಸಿನಿಮಾದಂತೆ ಕಾಣಿಸುತ್ತದೆ. ಕಥೆಯೊಳಗೊಂದು ಕಥೆ ಇದೆ ಎನ್ನುವುದು ಕಾಣುತ್ತದೆ.
ಈ ಸಿನಿಮಾದಲ್ಲಿ ಉಪ್ಪಿಗೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. ಲಹರಿಯ ಮೋಹನ್ ನಾಯ್ಡು – ಕೆ.ಪಿ ಶ್ರೀಕಾಂತ್ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ