ಪುರೋಹಿತ್ ಪ್ರೇಮ ಪುರಾಣ ‘ಸಿಂಧೂರ’ ಕಾವ್ಯ
Team Udayavani, May 20, 2022, 4:53 PM IST
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಸಿಂಧೂರ’ ಚಿತ್ರ ತೆರೆಗೆ ಬರಲು ಸಿದ್ಧªವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ “ಸಿಂಧೂರ’ ಚಿತ್ರದ ಟೀಸರ್, ಹಾಡುಗಳಿಗೆ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ, ಮೇ ಅಂತ್ಯಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.
ಇನ್ನು “ಸಿಂಧೂರ’ ಚಿತ್ರದ ಮೂಲಕ ಯುವನಟ ಸಚಿನ್ ನಾಯಕ ನಟನಾಗಿ ಸ್ಯಾಂಡಲ್ವುಡ್ಗೆ ಪರಿಚಯವಾಗುತ್ತಿದ್ದಾರೆ. “ಸಿಂಧೂರ’ ಚಿತ್ರದಲ್ಲಿ ತೆರೆಮೇಲೆ ನಾಯಕನಾಗಿರುವ ಸಚಿನ್ ಪುರೋಹಿತ್, ತೆರೆಹಿಂದೆ ನಿರ್ದೇಶಕನಾಗಿ “ಡಬಲ್ ರೋಲ್’ನಲ್ಲಿ ಕಾಣಿಸಿಕೊಂಡಿ ದ್ದಾರೆ.
“ಇದೊಂದು ಟ್ರೈಯಂಗಲ್ ಲವ್ಸ್ಟೋರಿ ಸಿನಿಮಾ. ಇದರಲ್ಲಿ ಲವ್, ರೊಮ್ಯಾನ್ಸ್, ಆ್ಯಕ್ಷನ್, ಸೆಂಟಿಮೆಂಟ್, ಒಳ್ಳೆಯ ಹಾಡುಗಳು ಎಲ್ಲವೂ ಇದೆ. ಇಂದಿನ ಜನರೇಶನ್ಗೆ ಸಬೆjಕ್ಟ್ ಇಟ್ಟುಕೊಂಡು, ಅದನ್ನು ಎಲ್ಲ ವರ್ಗದ ಆಡಿಯನ್ಸ್ಗೂ ಇಷ್ಟವಾಗುವಂತೆ ಸಿನಿಮಾದಲ್ಲಿ ಹೇಳಿದ್ದೇವೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ಮಾಹಿತಿ ನೀಡುತ್ತಾರೆ ನಾಯಕ ಕಂ ನಿರ್ದೇಶಕ ಸಚಿನ್ ಪುರೋಹಿತ್.
ಇದನ್ನೂ ಓದಿ:ರಾಜಸ್ಥಾನ ರಾಯಲ್ಸ್ ವಿರುದ್ಧ ಕೊನೆಯ ಐಪಿಎಲ್ ಪಂದ್ಯವಾಡುತ್ತಾರೆಯೇ ಎಂ.ಎಸ್.ಧೋನಿ?
“ಸಿಂಧೂರ’ ಚಿತ್ರಕ್ಕೆ ನಾಯಕ ನಟ ಸಚಿನ್ ಪುರೋಹಿತ್ ತಂದೆ ಮತ್ತು ಹಿರಿಯ ನಟ ರಾಮ್ ಪುರೋಹಿತ್ ಕಥೆ ಬರೆದಿದ್ದು, ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ತೆರೆಮೇಲೂ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಯಕ ಸಚಿನ್ ಪುರೋಹಿತ್ಗೆ, ನಿವಿಕ್ಷಾ ನಾಯ್ಡು, ಸುರಕ್ಷಿತಾ ಶೆಟ್ಟಿ ನಾಯಕಿಯರಾಗಿ ತೆರೆಮೇಲೆ ಜೋಡಿಯಾಗಿದ್ದಾರೆ.
ಉಳಿದಂತೆ ದಯಾನಂದ್ ನೀನಾಸಂ, ಚೇತನ್ ಸೂರ್ಯ, ಬ್ಯಾಂಕ್ ಜನಾರ್ಧನ್, ಶ್ರೀವಿಷ್ಣು, ವೇದ್ ಈಗಲ್, ರಾಮ್ ಪುರೋಹಿತ್, ರೇಖಾ ದಾಸ್, ಅರುಣ್ ದೇವಸ್ಯ, ಜ್ಯೋತಿ ಮುರೂರು, ಉಮಾಶಂಕರ್, ಮಮತಾ, ನಿಹಾಲ್, ಶಿವಾನಿ ಮೊದಲಾದವರು “ಸಿಂಧೂರ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್