ಇಂದು ‘ಸಲಾರ್’ ಕುರಿತು ಬಿಗ್ ಅಪ್ಡೇಟ್ ನೀಡಲಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್….ಏನದು ?
Team Udayavani, Feb 28, 2021, 1:58 PM IST
ಕೆಜಿಎಫ್ ಖ್ಯಾತಿಯ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತೊಂದು ಬಿಗ್ ಚಿತ್ರ ‘ಸಲಾರ್’ ಕೈಗೆತ್ತಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಲಿದ್ದಾರೆ.
ಈ ಬಿಗ್ ಸ್ಟಾರ್ ಕಾಂಬಿನೇಶನ್ ನಲ್ಲಿ ಮೂಡಿ ಬರಲಿರುವ ‘ಸಲಾರ್’ ಘೋಷಣೆಯಾದಾಗಲೇ ದೊಡ್ಡ ನಿರೀಕ್ಷೆ ಮೂಡಿಸಿತು. ಕಳೆದ ಕೆಲ ದಿನಗಳ ಹಿಂದೆ ಮುಹೂರ್ತ ಕೂಡ ನಡೆಯಿತು. ಇದೀಗ ಈ ಸಿನಿಮಾ ಬಿಡುಗಡೆಯ ದಿನಾಂಕ ಇಂದು (ಫೆ.28) ಮಧ್ಯಾಹ್ನ 3.25ಕ್ಕೆ ರಿವೀಲ್ ಆಗಲಿದೆ.
ಟ್ವಿಟರ್ ನಲ್ಲಿ ಈ ವಿಚಾರ ತಿಳಿಸಿರುವ ನಿರ್ದೇಶಕ ಪ್ರಶಾಂತ್, ವಿಶ್ವದಾದ್ಯಂತ ಸಲಾರ್ ಬಿಡುಗಡೆಯ ದಿನಾಂಕ ಇಂದು ಘೋಷಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿರುವ ಕೆಜಿಎಫ್ 2 ಸಿನಿಮಾ ಜುಲೈ 16 ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲು ರೆಡಿಯಾಗಿದೆ. ಕೆಜಿಎಫ್ ಯಶಸ್ಸಿನ ಉತ್ತುಂಗದಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್, ತೆಲುಗಿನ ಸೂಪರ್ ಸ್ಟಾರ್ ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರ ಸಲಾರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಜಿಎಫ್ ಸರಣಿ ಸಿನಿಮಾ ನಿರ್ಮಾಪಕ ವಿಜಯ ಕಿರಗಂದೂರ ಅವರೇ ಸಲಾರ್ ಚಿತ್ರಕ್ಕೂ ಹಣ ಹೂಡುತ್ತಿದ್ದಾರೆ. ಶೃತಿ ಹಾಸನ್ ಈ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಲಿದ್ದಾರೆ.ಇಂದು ‘ಸಲಾರ್’ ಕುರಿತು ಬಿಗ್ ಅಪ್ಡೇಟ್ ನೀಡಲಿದ್ದಾರೆ ನೀಲ್….ಏನದು ?
We are here to announce the worldwide theatrical release of #Salaar 🔥
Stay Tuned.#Prabhas @prashanth_neel @VKiragandur @hombalefilms @shrutihaasan @BasrurRavi @bhuvangowda84 pic.twitter.com/GYbqU88eSa
— Prashanth Neel (@prashanth_neel) February 28, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಂದಿನ ಅಧಿವೇಶನದಲ್ಲಿ ಮರಳು ನೀತಿಗೆ ತಿದ್ದುಪಡಿ: ಸಚಿವ ಹಾಲಪ್ಪ ಆಚಾರ್
ಹಾಟ್ಸ್ಪಾಟ್ ಬೆಂಗಳೂರು! ಇಲ್ಲೇ ಬಂದು ಸ್ಟಾರ್ಟಪ್ ಆರಂಭಿಸುತ್ತಿರುವ ವಿದೇಶಿಯರು
ದೇಸೀ ಪಠ್ಯಕ್ಕೆ ಸಲಹೆ ನೀಡಿ: ಆನ್ಲೈನ್ ಸಲಹೆ ನೀಡಲು ದೇಶವಾಸಿಗಳಿಗೆ ಕೇಂದ್ರದ ಮನವಿ
ಸಂಸತ್, ವಿಧಾನಸಭೆಗಳಿಗೆ ಸ್ಮಾರ್ಟ್ ಟಚ್!
ಮುಸ್ಲಿಮರು ವಾಸಿಸುವ ಪ್ರದೇಶ ದೇಶದ ಭಾಗವಲ್ಲವೇ?: ಸಚಿವ ಆರಗ ಜ್ಞಾನೇಂದ್ರ