ಶುಗರ್ ಫ್ಯಾಕ್ಟರಿ ಸೇರಿದ ಶಿಲ್ಪಾ ಶೆಟ್ಟಿ
Team Udayavani, Dec 25, 2020, 4:10 PM IST
ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ಶುಗರ್ ಫ್ಯಾಕ್ಟರಿ ಚಿತ್ರಕ್ಕೆ ಹೊಸ ನಟಿಯ ಸೇರ್ಪಡೆಯಾಗಿದೆ. ಅದು ಶಿಲ್ಪಾ ಶೆಟ್ಟಿ.
ಹಾಗಂತ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಎಂದು ಭಾವಿಸುವಂತಿಲ್ಲ. ಇದು ಕನ್ನಡ ಚಿತ್ರರಂಗಕ್ಕೆ ಈಗಷ್ಟೇ ಎಂಟ್ರಿ ಕೊಟ್ಟಿರುವ ನವನಟಿ. ಈ ಚಿತ್ರವನ್ನು ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮೂವರು ನಾಯಕಿಯರು ಅಭಿನಯಿಸುತ್ತಿದ್ದು, ಸೊನಾಲ್ ಮಾಂತೆರೋ ಹಾಗೂ ಅದ್ವಿತಿ ಶೆಟ್ಟಿ ಈಗಾಗಲೇ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : ‘ಕಂಠಿ, ಸಾಹೇಬ’ ಚಿತ್ರ ನಿರ್ದೇಶಕ ಭರತ್ ನಿಧನ
ಕನ್ನಡ, ತುಳು ಭಾಷೆಯ ಕೆಲವು ಚಿತ್ರಗಳಲ್ಲಿ ಹಾಗೂ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅನುಭವ ಶಿಲ್ಪಾ ಶೆಟ್ಟಿ ಅವರಿಗಿದೆ. ಜನವರಿ 28ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಏಳು ಹಾಡುಗಳಿದ್ದು, ಚೇತನ್ಕುಮಾರ್ , ಯೋಗರಾಜ್ ಭಟ್, ಜಯಂತ್ಕಾಯ್ಕಿಣಿ ಮುಂತಾದವರು ಸಾಹಿತ್ಯ ಬರೆಯುತ್ತಿದ್ದಾರೆ. ಕಬೀರ್ ರಫಿ ಸಂಗೀತ ನೀಡುತ್ತಿರುವ ಶುಗರ್ ಫ್ಯಾಕ್ಟರಿಗೆ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ.