ಶಿವಣ್ಣ ಎಸ್ಆರ್ಕೆಗೆ ನಾಯಕಿ ಸಿಕ್ಕಳು
Team Udayavani, Oct 2, 2018, 11:09 AM IST
ಶಿವರಾಜಕುಮಾರ್ ಅವರ “ಎಸ್ಆರ್ಕೆ’ ಸಿನಿಮಾ ಆರಂಭವಾದ ವಿಚಾರ ನಿಮಗೆ ಗೊತ್ತಿರಬಹುದು. ಚಿತ್ರವೇನೋ ಅದ್ಧೂರಿಯಾಗಿ ಆರಂಭವಾಯಿತು. ಆ ನಂತರ ಆ ಚಿತ್ರ ಏನಾಯಿತೆಂಬ ಸುದ್ದಿಯೇ ಇರಲಿಲ್ಲ. ಈಗ ಚಿತ್ರತಂಡದಿಂದ ಸುದ್ದಿಯೊಂದು ಬಂದಿದೆ. ಅದು ನಾಯಕಿ ಆಯ್ಕೆಯಾಗಿರುವುದು. ಹೌದು, “ಎಸ್ಆರ್ಕೆ’ಗೆ ಈಶಾ ರೆಬ್ಬಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮತ್ತೂಂದು ತೆಲುಗು ಹುಡುಗಿ ಕನ್ನಡಕ್ಕೆ ಎಂಟ್ರಿಕೊಟ್ಟಂತಾಗಿದೆ.
ಹೈದರಾಬಾದ್ ಮೂಲದ ಈಶಾ, ಕಾಲೇಜು ಮುಗಿಸಿ ನೇರವಾಗಿ ಎಂಟ್ರಿಕೊಟ್ಟಿದ್ದು ಸಿನಿಮಾಕ್ಕೆ. ತೆಲುಗಿನ “ಅಂತಕ ಮುಂದು ಆ ತರ್ವತಾ’ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಈಶಾ, ಆ ನಂತರ ಅನೇಕ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಜೂ.ಎನ್ಟಿಆರ್ ನಟಿಸುತ್ತಿರುವ “ಅರವಿಂದ ಸಮೇತ ವೀರ ರಾಘವ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ.
“ಎಸ್ಆರ್ಕೆ’ ಚಿತ್ರವನ್ನು ಲಕ್ಕಿ ಗೋಪಾಲ್ ನಿರ್ದೇಶಿಸುತ್ತಿದ್ದು, ಇವರಿಗಿದು ಚೊಚ್ಚಲ ಚಿತ್ರ. ಉಳಿದಂತೆ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ನವೀನ್ ಛಾಯಾಗ್ರಹಣವಿದೆ. ಸದ್ಯ ಶಿವರಾಜಕುಮಾರ್ ಅವರು “ದಿ ವಿಲನ್’ ಬಿಡುಗಡೆಗೆ ಸಿದ್ಧವಿದ್ದು, ಇದೇ ತಿಂಗಳ 18 ರಂದು ತೆರೆಕಾಣುತ್ತಿದೆ. ಇದಲ್ಲದೇ ಅವರ “ಕವಚ’ ಚಿತ್ರೀಕರಣ ಕೂಡಾ ಮುಗಿದಿದೆ. ಸದ್ಯ “ದ್ರೋಣ’ ಚಿತ್ರೀಕರಣದಲ್ಲಿ ಬಿಝಿ. ಸದ್ಯದಲ್ಲೇ “ಎಸ್ಆರ್ಕೆ’ ಚಿತ್ರೀಕರಣ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !