ಈ ವಾರ ತೆರೆಗೆ ಆರು ಚಿತ್ರಗಳು; ಮತ್ತೆ ರಂಗೇರಿದ ಸ್ಯಾಂಡಲ್‌ವುಡ್‌

Team Udayavani, Jan 20, 2020, 7:02 AM IST

ಹೊಸ ವರ್ಷದ ಆರಂಭದಲ್ಲಿ ಕೊಂಚ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದ ಕನ್ನಡ ಚಿತ್ರಗಳು ಈಗ ಒಂದರ ಹಿಂದೆ ಒಂದರಂತೆ ತೆರೆಗೆ ಬರಲು ತಯಾರಾಗುತ್ತಿವೆ. ಜನವರಿ 3 ರಂದು 2 ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗಿದ್ದರೆ, ಜನವರಿ 10ರಂದು ಯಾವುದೇ ಚಿತ್ರಗಳು ಬಿಡುಗಡೆಯಾಗಿರಲಿಲ್ಲ. ಇನ್ನು ಜನವರಿ 17ರಂದು ಕೇವಲ ಮೂರು ಚಿತ್ರಗಳು ಮಾತ್ರ ಬಿಡುಗಡೆಯಾಗಿದ್ದವು.

ಕಳೆದ ವರ್ಷ ಸೆನ್ಸಾರ್‌ ಆಗಿರುವ ಹತ್ತಾರು ಚಿತ್ರಗಳು ಜನವರಿಯಲ್ಲಿ ತೆರೆಗೆ ಬರಬಹುದು ಎಂಬ ನಿರೀಕ್ಷೆಯಿದ್ದರೂ ಬಹುಭಾಷೆಯ ಕೆಲವು ಬಿಗ್‌ ಸ್ಟಾರ್‌ಗಳ, ಬಿಗ್‌ ಬಜೆಟ್‌ ಚಿತ್ರಗಳು ಸಂಕ್ರಾಂತಿಯ ವೇಳೆಗೆ ಒಂದರ ಹಿಂದೆ ಒಂದರಂತೆ ತೆರೆಗೆ ಬರುವ ಘೋಷಣೆ ಮಾಡಿದ್ದರಿಂದ, ಕನ್ನಡದಲ್ಲಿ ತೆರೆಗೆ ಬರಲು ತಯಾರಾಗಿದ್ದ ಹಲವು ಚಿತ್ರಗಳು ತಮ್ಮ ಬಿಡುಗಡೆಯನ್ನು ಕೆಲವಾರಗಳ ಕಾಲ ಮತ್ತೆ ಮುಂದೂಡುವಂತಾಗಿತ್ತು.

ಕಳೆದ ಕೆಲ ವಾರಗಳಿಂದ ಕರ್ನಾಟಕದ ಚಿತ್ರಮಂದಿರಗಳಲ್ಲಿ ಜೋರಾಗಿದ್ದ ಬಹುಭಾಷಾ ಸ್ಟಾರ್‌ ನಟರ ಚಿತ್ರಗಳ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದಂತೆ, ಈ ವಾರದಿಂದ ಮತ್ತೆ ಕನ್ನಡ ಚಿತ್ರಗಳ ಅಬ್ಬರ ಜೋರಾಗುವ ಲಕ್ಷಣಗಳು ಕಾಣುತ್ತಿದೆ. ಇದೇ ಶುಕ್ರವಾರ (ಜನವರಿ 24) “ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’, “ನಾನು ಮತ್ತು ಗುಂಡ’, “ಗಡಿನಾಡು’, “ಕೃಥಾ’, “ಖಾಕಿ’, “ನಾವೆಲ್ರೂ ಹಾಫ್ ಬಾಯಿಲ್ಡ್‌’ ಸೇರಿದಂತೆ 6 ಚಿತ್ರಗಳು ತೆರೆಗೆ ಬರುವ ಘೋಷಣೆ ಮಾಡಿಕೊಂಡಿವೆ.

ಇದರ ಜೊತೆಗೆ ಇನ್ನೂ ಎರಡು-ಮೂರು ಚಿತ್ರಗಳು ಈ ವಾರವೇ ತೆರೆಗೆ ಬರಲು ಪ್ಲಾನ್‌ ಮಾಡಿಕೊಳ್ಳುತ್ತಿದ್ದು, ಈ ಚಿತ್ರಗಳು ಕೂಡ ಕೊನೆ ಕ್ಷಣದಲ್ಲಿ ತೆರೆಗೆ ಬಂದರೂ, ಬರಬಹುದು ಎನ್ನಲಾಗುತ್ತಿದೆ. ಒಟ್ಟಾರೆ ಚಿತ್ರೋದ್ಯಮದ ಮೂಲಗಳ ಮಾಹಿತಿಯ ಪ್ರಕಾರ ಕಳೆದ ಐದಾರು ತಿಂಗಳಿನಿಂದ ಸೆನ್ಸಾರ್‌ ಪ್ರಮಾಣಪತ್ರ ಪಡೆದುಕೊಂಡರೂ, ಥಿಯೇಟರ್‌ ಸಮಸ್ಯೆ ಮತ್ತಿತರ ಕಾರಣಗಳಿಂದ ಬಿಡುಗಡೆಯಾಗದೆ ಉಳಿದ ಬಹುತೇಕ ಚಿತ್ರಗಳು ಜನವರಿ, ಫೆಬ್ರವರಿ ಮತ್ತು ಮಾರ್ಚ್‌ ಅಂತ್ಯದೊಳಗೆ ತೆರೆಗೆ ಬರಲಿದ್ದು, ಇನ್ನು ಎರಡು-ಮೂರು ತಿಂಗಳು ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳ ಅದರಲ್ಲೂ ಹೊಸಬರ ಚಿತ್ರಗಳ ಸದ್ದು ಸ್ವಲ್ಪ ಜೋರಾಗಿಯೇ ಇರಲಿದೆ ಎನ್ನಲಾಗುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ