ದೇವಕಿ ಮೊಗದಲ್ಲಿ ನಗು

ಕನ್ನಡ - ತಮಿಳು ಭಾಷೆಯಲ್ಲಿ ತೆರೆಗೆ

Team Udayavani, Apr 23, 2019, 3:31 AM IST

ಪ್ರಿಯಾಂಕ ಉಪೇಂದ್ರ ಅಭಿನಯದ “ದೇವಕಿ’ ಚಿತ್ರ ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ. ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಮೊದಲನೆಯದಾಗಿ ಪ್ರಿಯಾಂಕ ಉಪೇಂದ್ರ ಅವರ ಮಗಳು ಐಶ್ವರ್ಯಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಅದರಲ್ಲೂ ಪ್ರಿಯಾಂಕ ಅವರ ಮಗಳಾಗಿಯೇ ಕಾಣಿಸಿಕೊಂಡಿರುವುದು ವಿಶೇಷ.

ಇನ್ನು, ಇಡೀ ಚಿತ್ರ ಪ್ರಿಯಾಂಕ ಅವರ ತವರೂರಾದ ಕೊಲ್ಕತ್ತಾದಲ್ಲೇ ಚಿತ್ರೀಕರಣವಾಗಿದೆ. ಇದರೊಂದಿಗೆ ಹೊಸ ಸುದ್ದಿಯೆಂದರೆ, ಮಹಿಳಾ ಪ್ರಧಾನ ಚಿತ್ರವೊಂದಕ್ಕೆ ಬಿಡುಗಡೆ ಮೊದಲೇ ವಿತರಣೆಯ ಹಕ್ಕು ಪಡೆಯಲು ಮುಂದಾಗಿರುವುದು. ಹೌದು, “ದೇವಕಿ’ ಚಿತ್ರದ ವಿತರಣೆ ಹಕ್ಕನ್ನು ಕಾರ್ತಿಕ್‌ಗೌಡ (ಕೆಜಿಎಫ್) ಅವರು ಪಡೆದಿದ್ದಾರೆ.

ಸಹಜವಾಗಿಯೇ ಇದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ ಎಂಬುದು ನಿರ್ದೇಶಕ ಲೋಹಿತ್‌ ಮಾತು. “ದೇವಕಿ’ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದೆ. ಈಗಾಗಲೇ ಕನ್ನಡದಲ್ಲಿ ಬಿಡುಗಡೆಯಾದ ಟೀಸರ್‌ಗೆ ಸಖತ್‌ ಮೆಚ್ಚುಗೆಯೂ ಸಿಕ್ಕಿದೆ. ಟೀಸರ್‌ ನೋಡಿದ ಕಾರ್ತಿಕ್‌ ಗೌಡ (ಕೆಜಿಎಫ್) ಅವರು ಕರ್ನಾಟಕದಲ್ಲಿ ವಿತರಣೆ ಮಾಡಲು ಮುಂದಾಗಿದ್ದಾರೆ.

ಒಂದು ಸಿನಿಮಾ ಮಾಡಿ ರಿಲೀಸ್‌ಗೂ ಸಾಕಷ್ಟು ಓಡಾಟ ನಡೆಸಬೇಕಾದ ಪರಿಸ್ಥಿತಿ ಇರುವಾಗ, “ದೇವಕಿ’ ಚಿತ್ರವನ್ನು ಸ್ವತಃ ಕಾರ್ತಿಕ್‌ ಗೌಡ ಅವರೇ, ಖರ್ಚು ವಹಿಸಿಕೊಂಡು ವಿತರಣೆ ಮಾಡಲು ಮುಂದಾಗಿದ್ದಾರೆ ಎಂಬುದು ನಿರ್ದೇಶಕ ಲೋಹಿತ್‌ ಹೇಳಿಕೆ. ನಿರ್ಮಾಪಕದ್ವಯರಾದ ರವೀಶ್‌ ಹಾಗೂ ಅಕ್ಷಯ್‌ ಇವರಿಬ್ಬರಿಗೂ ಇದು ಮೊದಲ ನಿರ್ಮಾಣದ ಚಿತ್ರ.

ಒಂದು ಸಿನಿಮಾ ಬಿಡುಗಡೆಗೆ ಮುನ್ನವೇ, ಅದರಲ್ಲೂ ಮಹಿಳಾ ಪ್ರಧಾನ ಚಿತ್ರಕ್ಕೆ ಇಂಥದ್ದೊಂದು ವಿತರಣೆ ಅವಕಾಶ ಸಿಕ್ಕಿರುವುದಕ್ಕೆ ಸಹಜವಾಗಿಯೇ ನಿರ್ಮಾಪಕರಿಗೂ ಅದು ಇನ್ನಷ್ಟು ಧೈರ್ಯ ಕೊಟ್ಟಿದೆ. ಚಿತ್ರ ಇದೀಗ ಹಿನ್ನೆಲೆ ಸಂಗೀತದ ಅಂತಿಮ ಕೆಲಸದಲ್ಲಿದೆ. ಈಗಾಗಲೇ “ದೇವಕಿ’ ಚಿತ್ರಕ್ಕೆ ಹಿಂದಿ ರೇಟ್ಸ್‌ ಕೂಡ ಕೇಳಲಾಗುತ್ತಿದೆ.

ಸೆನ್ಸಾರ್‌ಗೆ ಇನ್ನಷ್ಟೇ ಹೋಗಬೇಕಿದ್ದು, ಸೆನ್ಸಾರ್‌ ಬಳಿಕ ಆ ಬಗ್ಗೆ ಮಾತುಕತೆ ನಡೆಸಲಾಗುವುದು. ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ ಅಂತ್ಯ ಇಲ್ಲವೇ ಜೂನ್‌ನಲ್ಲಿ “ದೇವಕಿ’ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ವಿವರ ಕೊಡುತ್ತಾರೆ ನಿರ್ದೇಶಕ ಲೋಹಿತ್‌.

ಚಿತ್ರದ ವಿಶೇಷ ಪಾತ್ರದಲ್ಲಿ ಕಿಶೋರ್‌, ಬಾಲಿವುಡ್‌ ನಟ ಸಂಜೀವ್‌ ಜೆಸ್ವಾಲ್‌ ಸೇರಿದಂತೆ ಬೆಂಗಾಲಿಯ ಬಹುತೇಕ ರಂಗಭೂಮಿ ಕಲಾವಿದರೂ ಸಹ ಚಿತ್ರದಲ್ಲಿ ನಟಿಸಿದ್ದಾರೆ. ಸುಮಾರು 32 ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ಬಹುತೇಕ ಭಾಗ ಕೊಲ್ಕತ್ತಾದಲ್ಲೇ ಚಿತ್ರೀಕರಿಸಲಾಗಿದೆ.

ಸಾಹಸ ನಿರ್ದೇಶಕ ರವಿವರ್ಮ ಅವರು, ರಾತ್ರಿ ವೇಳೆಯಲ್ಲೊಂದು ಅದ್ಧೂರಿ ವೆಚ್ಚದಲ್ಲಿ ಚೇಸಿಂಗ್‌ ದೃಶ್ಯವನ್ನು ಕಂಪೋಸ್‌ ಮಾಡಿದ್ದಾರೆ. ಉಳಿದಂತೆ ಚಿತ್ರಕ್ಕೆ ಎಚ್‌.ಸಿ.ವೇಣು ಅವರು ಛಾಯಾಗ್ರಾಹಕರು. ನೊಬಿನ್‌ ಪಾಲ್‌ ಅವರು ಸಂಗೀತ ನೀಡಿದ್ದಾರೆ. ರವಿಚಂದ್ರ ಅವರ ಸಂಕಲನವಿದೆ. ಬಹುತೇಕ “ಮಮ್ಮಿ’ ಟೀಮ್‌ ಇಲ್ಲಿ ಕೆಲಸ ಮಾಡಿದೆ ಎನ್ನುತ್ತಾರೆ ಅವರು.


ಈ ವಿಭಾಗದಿಂದ ಇನ್ನಷ್ಟು

  • ಜಗ್ಗೇಶ್‌ ಅಭಿನಯದ "ಪ್ರೀಮಿಯರ್‌ ಪದ್ಮಿನಿ' ಚಿತ್ರಕ್ಕೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು ಗೊತ್ತೇ ಇದೆ. ಆ ಚಿತ್ರ ಈಗ 25ದಿನ ಪೂರೈಸಿ ಮುನ್ನುಗ್ಗುತ್ತಿದೆ....

  • ಶಿವರಾಜಕುಮಾರ್‌ ದೊಡ್ಡ ಗ್ಯಾಪ್‌ನ ಬಳಿಕ ಒಪ್ಪಿಕೊಂಡ ರೀಮೇಕ್‌ ಚಿತ್ರ "ಕವಚ'. ಈ ಚಿತ್ರದಲ್ಲಿ ಅಂಧನಾಗಿ ಕಾಣಿಸಿಕೊಂಡಿದ್ದಲ್ಲದೇ, ಪಾತ್ರಕ್ಕೆ ನ್ಯಾಯ ಒದಗಿಸಿದ್ದರು....

  • -ಕುರುಕ್ಷೇತ್ರ ಕನ್ನಡ ವರ್ಶನ್‌ ಟಿವಿ ರೈಟ್ಸ್‌ - 9 ಕೋಟಿ -ಹಿಂದಿ ಡಬ್ಬಿಂಗ್‌ ರೈಟ್ಸ್‌ -9.5 ಕೋಟಿ -ಕುರುಕ್ಷೇತ್ರ ಕನ್ನಡ ವರ್ಶನ್‌ ಆಡಿಯೋ ರೈಟ್ಸ್‌ -1.5 ಕೋಟಿ ಇದು...

  • ಯುವ ನಿರ್ದೇಶಕ ವಿಠಲ್‌ ಭಟ್‌ ನಿರ್ದೇಶನದ "ಹ್ಯಾಂಗೋವರ್‌' ಈಗ ಮತ್ತೆ ಸದ್ದು ಮಾಡುತ್ತಿದೆ. ಇಲ್ಲಿಯವರೆಗೆ ಚಿತ್ರ ಬಿಡುಗಡೆ ತಯಾರಿಯಲ್ಲಿದ್ದ ಚಿತ್ರತಂಡ, ಈಗ ಪ್ರೇಕ್ಷಕರ...

  • ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಸುದ್ದಿ ಮಾಡುತ್ತಿರುವ ಬಹು ನಿರೀಕ್ಷಿತ ಮುನಿರತ್ನ "ಕುರುಕ್ಷೇತ್ರ' ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. "ಕುರುಕ್ಷೇತ್ರ'...

ಹೊಸ ಸೇರ್ಪಡೆ