ಸ್ನೇಹರ್ಷಿ ನಗು: ಮೊದಲ ಹೆಜ್ಜೆಗೆ ಮಿಲಿಯನ್‌ ಹಿಟ್ಸ್‌


Team Udayavani, Sep 24, 2021, 4:05 PM IST

ಸ್ನೇಹರ್ಷಿ ನಗು: ಮೊದಲ ಹೆಜ್ಜೆಗೆ ಮಿಲಿಯನ್‌ ಹಿಟ್ಸ್‌

ಯುವ ಪ್ರತಿಭೆ ಕಿರಣ್‌ ನಾರಾಯಣ್‌ ನಟಿಸಿ, ನಿರ್ಮಿಸಿ, ನಿರ್ದೇಶಿಸುರುವ ಚೊಚ್ಚಲ ಸಿನಿಮಾ “ಸ್ನೇಹರ್ಷಿ’ ತೆರೆಗೆ ಬರುವ ತಯಾರಿಯಲ್ಲಿದೆ. ಸದ್ಯ ಚಿತ್ರದ ಪ್ರಮೋಶನ್ಸ್‌ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ, ಚಿತ್ರದ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಚಿತ್ರದಲ್ಲಿ ಬರುವ “ಮೊದಲ ಹೆಜ್ಜೆಗೆ…’ ಎಂಬ ಹೀರೋ ಇಂಟ್ರೊಡಕ್ಷನ್‌ ಸಾಂಗ್‌ ಒಂದು ಮಿಲಿಯನ್‌ ಪ್ಲಸ್‌ ಹಿಟ್ಸ್‌ ದಾಖಲಾದ ಬೆನ್ನಲ್ಲೆ, ಚಿತ್ರತಂಡ “ಅರಿವಿಲ್ಲದೆ ಶುರುವಾದಂತಿದೆ…’ ಎಂಬ ಮತ್ತೂಂದು ರೊಮ್ಯಾಂಟಿಕ್‌ ಹಾಡನ್ನು ಬಿಡುಗಡೆ ಮಾಡಿತ್ತು. ಈಗ ಆ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆ ಹಾಡು ಕೂಡ ಒಂದು ಮಿಲಿಯನ್‌ಗೂ ಹೆಚ್ಚು ಹಿಟ್ಸ್‌ ಪಡೆದುಕೊಂಡಿದೆ.

ಇನ್ನು ಈ ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡುವ ಕಿರಣ್‌ ನಾರಾಯಣ್‌, “ಸಿನಿಮಾದಲ್ಲಿರುವ ಎಲ್ಲ ಹಾಡುಗಳು ಕೂಡ ಕಥೆಗೆ ಪೂರಕವಾಗುವಂತಿವೆ. ಕುದುರೆಮುಖ, ಮಂಗಳೂರು ಸುತ್ತಮುತ್ತ ಹಾಡುಗಳ ಶೂಟಿಂಗ್‌ ಮಾಡಲಾಗಿದೆ. ನಮ್ಮ ಹಾಡುಗಳಿಗೆ ಡಿಫ‌ರೆಂಟ್‌ ಲೊಕೇಶನ್ಸ್‌ ಬೇಕಾಗಿತ್ತು. ಅಂಥ ಲೊಕೇಶನ್ಸ್‌ ಹುಡುಕಿ ಹಾಡನ್ನು ಶೂಟಿಂಗ್‌ ಮಾಡಿದ್ದೇವೆ. ಸ್ಕ್ರೀನ್‌ ಮೇಲೆ ನೋಡಿದಾಗ ಫಾರಿನ್‌ ಲೊಕೇಶನ್ಸ್‌ನಂತೆ ಕಾಣುತ್ತದೆ. ಪ್ರತಿ ಹಾಡು ಕೂಡ ಕೇಳಲು ಎಷ್ಟು ಸುಮಧುರವಾಗಿರುತ್ತದೆಯೋ, ನೋಡಲೂ ಅಷ್ಟೇ ಸುಂದರವಾಗಿರುವಂತೆ ಚಿತ್ರೀಕರಿಸಲಾಗಿದೆ’ ಎನ್ನುತ್ತಾರೆ.

ಇದನ್ನೂ ಓದಿ:ಆರ್ ಸಿಬಿ ವಿರುದ್ಧ ಪಂದ್ಯಕ್ಕೂ ಮುನ್ನ ಧೋನಿ ಪಡೆಗೆ ಗಾಯದ ಬರೆ: ಪ್ರಮುಖ ಆಟಗಾರ ತಂಡದಿಂದ ಔಟ್?

ಆಕಾಶ್‌ ಅಯ್ಯಪ್ಪ ಸಿನಿಮಾಕ್ಕೆ ಸಂಗೀತ ನೀಡಿರುವ “ಸ್ನೇಹರ್ಷಿ’ ಈ ಹಾಡಿಗೆ ಸುಪ್ರಿಯಾ ರಾಮ್‌ ಮೊದಲಾದವರು ದನಿಯಾಗಿದ್ದಾರೆ. “ಸ್ನೇಹರ್ಷಿ’ ಚಿತ್ರಕ್ಕೆ ಪ್ರತಿಭಾ ಕಥೆ ಒದಗಿಸಿದ್ದು, ಲವ್‌, ಕಾಮಿಡಿ, ಆ್ಯಕ್ಷನ್‌ ಜೊತೆಗೆ ಸಾಮಾಜಿಕ ಕಾಳಜಿಯ ಅನೇಕ ಅಂಶಗಳಿವೆ. ಈಗಿನ ಟ್ರೆಂಡ್‌ಗೆ ತಕ್ಕಂತೆ ಸಿನಿಮಾವನ್ನು ತೆರೆಮೇಲೆ ತರಲಾಗಿದೆ ಅನ್ನೋದು ಚಿತ್ರತಂಡದ ಮಾತು.

ಚಿತ್ರದಲ್ಲಿ ಕಿರಣ್‌ ನಾರಾಯಣ್‌ ಅವರೊಂದಿಗೆ ಸುಧಾ ಬೆಳವಾಡಿ, ನಾಗತಿಹಳ್ಳಿ ಜಯಪ್ರಕಾಶ್‌, ಚಕ್ರವರ್ತಿ, ನವೀನ್‌, ದೇವಕಿ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಟಾಪ್ ನ್ಯೂಸ್

daily-horoscope

ಈ ರಾಶಿಯವರು ಇಂದು ಬಂಧುಮಿತ್ರರಲ್ಲಿ ವ್ಯವಹರಿಸುವಾಗ ದುಡುಕದಿರಿ. ತಾಳ್ಮೆಯಿಂದ ನಿರ್ಣಯ ನೀಡಿ.

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

300ರ ಬದಲು ಇರುವುದು 22 ಯಂತ್ರಗಳು !

300ರ ಬದಲು ಇರುವುದು 22 ಯಂತ್ರಗಳು !

ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಶೀಘ್ರ ಇತ್ಯರ್ಥ

ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಶೀಘ್ರ ಇತ್ಯರ್ಥ

ನಾಳೆ ಭಾರತ- ಪಾಕ್‌ ಹೈ ವೋಲ್ಟೇಜ್ ಹಣಾಹಣಿ

ನಾಳೆ ಭಾರತ- ಪಾಕ್‌ ಹೈ ವೋಲ್ಟೇಜ್ ಹಣಾಹಣಿ

ಚೀನಾ ಗಡಿಯಲ್ಲಿ ಭಾರತದಿಂದ ಅತಿ ಎತ್ತರದ ರಸ್ತೆ ಸುರಂಗ

ಚೀನಾ ಗಡಿಯಲ್ಲಿ ಭಾರತದಿಂದ ಅತಿ ಎತ್ತರದ ರಸ್ತೆ ಸುರಂಗ

ಪಂಚರಾಜ್ಯಗಳಲ್ಲಿ ಚುನಾವಣಾ ಕಾವು; ಗರಿಗೆದರಿದ ರಾಜಕೀಯ ಚಟುವಟಿಕೆ

ಪಂಚರಾಜ್ಯಗಳಲ್ಲಿ ಚುನಾವಣಾ ಕಾವು; ಗರಿಗೆದರಿದ ರಾಜಕೀಯ ಚಟುವಟಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

kannada actress prema

ವಕಾಲತ್ತು ವಹಿಸಿ ಬಂದರು ಪ್ರೇಮಾ

ಸಕೂಚಿ

ಹೊರಬಂತು ಹೊಸಬರ ಹಾರರ್‌-ಥ್ರಿಲ್ಲರ್‌ “ಸಕೂಚಿ’ ಟ್ರೇಲರ್‌

sakath movie

ಅ. 24ಕ್ಕೆ ಗಣಿ-ಸುನಿ ಕಾಂಬಿನೇಶನ್‌ “ಸಖತ್‌’ ಟೀಸರ್‌

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

daily-horoscope

ಈ ರಾಶಿಯವರು ಇಂದು ಬಂಧುಮಿತ್ರರಲ್ಲಿ ವ್ಯವಹರಿಸುವಾಗ ದುಡುಕದಿರಿ. ತಾಳ್ಮೆಯಿಂದ ನಿರ್ಣಯ ನೀಡಿ.

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

ಟಿ-20 ವಿಶ್ವಕಪ್‌ ಕ್ರಿಕೆಟ್‌ ಯಾರು ಫೇವರಿಟ್‌ ?

ಚಾಂಪಿಯನ್‌ ವೆಸ್ಟ್‌ ಇಂಡೀಸಿಗೆ ರನ್ನರ್ ಅಪ್‌ ಇಂಗ್ಲೆಂಡ್‌ ಸವಾಲು

ಚಾಂಪಿಯನ್‌ ವೆಸ್ಟ್‌ ಇಂಡೀಸಿಗೆ ರನ್ನರ್ ಅಪ್‌ ಇಂಗ್ಲೆಂಡ್‌ ಸವಾಲು

300ರ ಬದಲು ಇರುವುದು 22 ಯಂತ್ರಗಳು !

300ರ ಬದಲು ಇರುವುದು 22 ಯಂತ್ರಗಳು !

ನಿರ್ಯಾಣ ಶ್ರೀವಿಶ್ವೇಶತೀರ್ಥರಿಗೆ ನ. 8ರಂದು ಪದ್ಮ ಪ್ರಶಸ್ತಿ ಪ್ರದಾನ

ನಿರ್ಯಾಣ ಶ್ರೀವಿಶ್ವೇಶತೀರ್ಥರಿಗೆ ನ. 8ರಂದು ಪದ್ಮ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.