ಫೆ.24ರಂದು ರಿಲೀಸ್ ಆಗುತ್ತಿದೆ ‘ಸೌತ್‌ ಇಂಡಿಯನ್‌ ಹೀರೋ’


Team Udayavani, Feb 12, 2023, 11:00 AM IST

South Indian Hero gets a release date

“ಸೌತ್‌ ಇಂಡಿಯನ್‌ ಹೀರೋ’- ಹೀಗೊಂದು ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಫೆ.24ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಟ್ರೇಲರ್‌ ಹಿಟ್‌ಲಿಸ್ಟ್‌ ಸೇರುವ ಮೂಲಕ ಚಿತ್ರತಂಡದ ಮೊಗದಲ್ಲಿ ನಗು ಮೂಡಿದೆ.ಈ ಹಿಂದೆ “ಫ‌ಸ್ಟ್‌ ರ್‍ಯಾಂಕ್‌ ರಾಜು’, “ರಾಜು ಕನ್ನಡ ಮೀಡಿಯಂ’ನಂತಹ ವಿಭಿನ್ನ ಸಿನಿಮಾ ನೀಡಿದ ನಿರ್ದೇಶಕ ನರೇಶ್‌ ಕುಮಾರ್‌ ಎಚ್‌.ಎನ್‌ ಈಗ “ಸೌತ್‌ ಇಂಡಿಯನ್‌ ಹೀರೋ’ ಸಿನಿಮಾ ಮಾಡಿದ್ದಾರೆ. ಈ ಚಿತ್ರವನ್ನು ರಿಯನ್ಷಿ ಫಿಲಂಸ್‌ನಡಿ ನಿರ್ಮಾಣ ಮಾಡಲಾಗಿದೆ.

ನರೇಶ್‌ ಅವರೇ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡಾ ವಹಿಸಿಕೊಂಡಿದ್ದಾರೆ. ನಿರ್ದೇಶಕ ನರೇಶ್‌ ಈ ಚಿತ್ರವನ್ನು ಎಲ್ಲಾ ಸೌತ್‌ ಇಂಡಿಯನ್‌ ಹೀರೋಗಳಿಗೆ ಅರ್ಪಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡುವ ಅವರು, “ನನಗೆ ಈ ಸಿನಿಮಾ ಮಾಡಲು ಸ್ಫೂರ್ತಿ ರಜನಿ ಕಾಂತ್‌ ಅವರು. ಅವರ ಸ್ಫೂರ್ತಿಯೊಂದಿಗೆ ಈ ಸಿನಿಮಾ ಮಾಡಿದ್ದೇವೆ. ಇನ್ನು, ಈ ಚಿತ್ರವನ್ನು ಎಲ್ಲಾ ಸೌತ್‌ ಇಂಡಿಯನ್‌ ಹೀರೋಗಳಿಗೆ ಅರ್ಪಿಸುತ್ತಿದ್ದೇನೆ’ ಎನ್ನುವ ನರೇಶ್‌ ಚಿತ್ರಲ್ಲೊಂದು ಸಂದೇಶವಿದೆ ಎನ್ನಲು ಮರೆಯುವುದಿಲ್ಲ.

“ಚಿತ್ರದಲ್ಲಿ ಸ್ಟಾರ್‌ ನಟರ ಅಭಿಮಾನಿಗಳಿಗೆ ಸಂದೇಶವೊಂದಿದೆ. ಮುಖ್ಯವಾಗಿ ಸ್ಟಾರ್‌ವಾರ್‌ ಆಗಬಾರದು ಎಂದು ದೃಷ್ಟಿಯಿಂದ ಒಂದಷ್ಟು ಅಂಶಗಳನ್ನು ಇಲ್ಲಿ ಹೇಳಿದ್ದೇನೆ. ಅಭಿಮಾನಿಗಳು ಒಬ್ಬ ಹೀರೋನಾ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕೇ ಹೊರತು ಜಗಳವಾಡಬಾರದು ಎನ್ನುವುದು ನನ್ನ ಅನಿಸಿಕೆ’ ಎನ್ನುತ್ತಾರೆ ನರೇಶ್‌.

ಇದನ್ನೂ ಓದಿ:ಹೆರಿಗೆಗೆ 4 ಆಸ್ಪತ್ರೆಗಳಿಗೆ ಅಲೆದರೂ ಮಗು ಉಳಿಯಲಿಲ್ಲ, ತಾಯಿ ಸ್ಥಿತಿಯೂ ಗಂಭೀರ

“ಸೌತ್‌ ಇಂಡಿಯನ್‌ ಹೀರೋ’ ಸಿನಿಮಾದ ಪ್ರಮುಖ ಹೈಲೈಟ್‌ ಎಂದರೆ ಲಾಜಿಕ್‌ ಲಕ್ಷ್ಮಣ್‌ ರಾವ್‌ ಪಾತ್ರ. ಎಲ್ಲದರಲ್ಲೂ ಲಾಜಿಕ್‌ ಹುಡುಕುವ ಲಕ್ಷ್ಮಣ್‌ ರಾವ್‌ ಎಂಬ ವ್ಯಕ್ತಿ ಸಿನಿಮಾಕ್ಕೆ ಎಂಟ್ರಿಕೊಟ್ಟರೆ ಏನಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಈ ಬಗ್ಗೆ ಮಾತನಾಡುವ ನರೇಶ್‌, “ಮೊದಲು ಹುಟ್ಟಿದ ಪಾತ್ರವೇ ಲಾಜಿಕ್‌ ಲಕ್ಷ್ಮಣ್‌ ರಾವ್‌. ಸಾಮಾನ್ಯವಾಗಿ ಸಿನಿಮಾದವರು ಲಾಜಿಕ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅದರಲ್ಲೂ ಕಮರ್ಷಿಯಲ್‌ ಸಿನಿಮಾದಲ್ಲಿ ಹೀರೋ ಏಳೆಂಟು ಜನರಿಗೆ ಹೊಡೆಯುವುದು ಸೇರಿದಂತೆ ಅನೇಕ ಸಾಹಸಗಳನ್ನು ಮಾಡುತ್ತಾರೆ. ಇವೆಲ್ಲವನ್ನು ನಾವು ಲಾಜಿಕ್‌ ದೃಷ್ಟಿಯಿಂದ ನೋಡಲಾಗುವುದಿಲ್ಲ. ಆದರೆ, ಲಾಜಿಕ್‌ ಲಕ್ಷ್ಮಣ್‌ ರಾವ್‌ ಪಾತ್ರ ಎಲ್ಲದರಲ್ಲೂ ಲಾಜಿಕ್‌ ಹುಡುಕುವ ವ್ಯಕ್ತಿತ್ವ ಹೊಂದಿರುತ್ತದೆ. ಇಂತಹ ವ್ಯಕ್ತಿ ಸಿನಿಮಾಕ್ಕೆ ಬರುತ್ತಾನೆ, ಸ್ಟಾರ್‌ ಆಗುತ್ತಾನೆ, ಸೌತ್‌ ಇಂಡಿಯನ್‌ ಸ್ಟಾರ್‌ ಆಗಿ ಮೆರೆಯುತ್ತಾನೆ. ಆತನ ಈ ಹಾದಿ ಹೇಗಿರುತ್ತದೆ. ಲಾಜಿಕ್‌ ಹುಡುಕುವ ಆತ ಸಿನಿಮಾದಲ್ಲಿ ಹೇಗೆ ವರ್ತಿಸುತ್ತಾನೆ ಎಂಬ ಅಂಶ ಸೇರಿದಂತೆ ಅನೇಕ ವಿಚಾರಗಳನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ’ ಎನ್ನುವುದು ನರೇಶ್‌ ಮಾತು.

ಚಿತ್ರದಲ್ಲಿ ಸಾರ್ಥಕ್‌ ಎನ್ನುವವರು ಹೀರೋ ಆಗಿ ನಟಿಸಿದ್ದಾರೆ. ಉಳಿದಂತೆ ಊರ್ವಶಿ, ಕಾಶಿಮಾ ನಾಯಕಿಯರು. ಚಿತ್ರದಲ್ಲಿ ಯೋಗರಾಜ್‌ ಭಟ್‌ ನಟಿಸಿದ್ದಾರೆ. ಹಾಗಂತ ಯಾವುದೇ ಪಾತ್ರವಾಗಿಯಲ್ಲ, ಯೋಗರಾಜ್‌ ಭಟ್‌ ಆಗಿಯೇ ಕಾಣಿಸಿಕೊಂಡಿದ್ದಾರೆ.  ಉಳಿದಂತೆ ವಿಜಯ್‌ ಚೆಂಡೂರು, ಅಮಿತ್‌ ಸೇರಿದಂತೆ ಇತರರು ಬಣ್ಣ ಹಚ್ಚಿದ್ದಾರೆ

ಟಾಪ್ ನ್ಯೂಸ್

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.