ಕೋಬ್ರಾ ಜೊತೆ ಶ್ರೀನಿಧಿ ಎಂಟಿ: ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕೆಜಿಎಫ್ ಚೆಲುವೆ
Team Udayavani, Aug 29, 2022, 11:16 AM IST
“ಕೆಜಿಎಫ್’ ಸಿನಿಮಾದ ಬಳಿಕ ನಾಯಕ ನಟಿ ಶ್ರೀನಿಧಿ ಶೆಟ್ಟಿ ಅಭಿನಯಿಸಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ “ಕೋಬ್ರಾ’ ಬಿಡುಗಡೆಗೆ ರೆಡಿಯಾಗಿದೆ.
ಹೌದು, “ಕೆಜಿಎಫ್’ ಬಳಿಕ ಶ್ರೀನಿಧಿ ಶೆಟ್ಟಿ ಅಭಿನಯಿಸಿರುವ ಬಹುನಿರೀಕ್ಷಿತ “ಕೋಬ್ರಾ’ ಸಿನಿಮಾ ಇದೇ ಆ. 31ಕ್ಕೆ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಇನ್ನು ಕಂಪ್ಲೀಟ್ ಆ್ಯಕ್ಷನ್-ಥ್ರಿಲ್ಲರ್ ಕಂ ಸೈನ್ಸ್- ಫಿಕ್ಷನ್ ಕಥಾಹಂದರ ಹೊಂದಿರುವ “ಕೋಬ್ರಾ’ ಸಿನಿಮಾದಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್ ನಾಯಕನಾಗಿ ಕಾಣಿಸಿಕೊಂಡಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಚಿಯಾನ್ಗೆ ಜೋಡಿಯಾಗಿದ್ದಾರೆ.
ಸದ್ಯ “ಕೋಬ್ರಾ’ ಸಿನಿಮಾದ ಪ್ರಚಾರದಲ್ಲಿ ನಿರತವಾಗಿರುವ ನಾಯಕ ಚಿಯಾನ್ ವಿಕ್ರಮ್, ನಾಯಕಿ ಶ್ರೀನಿಧಿ ಶೆಟ್ಟಿ ಮತ್ತು ಚಿತ್ರತಂಡ ಇತ್ತೀಚೆಗೆ ಬೆಂಗಳೂರಿನಲ್ಲಿ ಭರ್ಜರಿಯಾಗಿ ಸಿನಿಮಾದ ಪ್ರಚಾರ ಕಾರ್ಯಗಳನ್ನು ನಡೆಸಿದೆ.
ಇದೇ ವೇಳೆ ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡಿದ ಶ್ರೀನಿಧಿ ಶೆಟ್ಟಿ, “”ಕೆಜಿಎಫ್’ ಸಿನಿಮಾದ ನಂತರ ಅಭಿನಯಿಸಿದ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಕನ್ನಡದಲ್ಲಿ ನನ್ನ ಪಾತ್ರಕ್ಕೆ ನಾನೇ, ಕೇವಲ ಒಂದೇ ದಿನದಲ್ಲಿ ಡಬ್ಬಿಂಗ್ ಮಾಡಿದ್ದೇನೆ. ತುಂಬ ವೃತ್ತಿಪರರ ಜೊತೆ ಈ ಸಿನಿಮಾ ಮಾಡಿದ್ದು ಒಂದು ಒಳ್ಳೆಯ ಅನುಭವ. “ಕೋಬ್ರಾ’ ಸಿನಿಮಾದ ಸಬ್ಜೆಕ್ಟ್ ತುಂಬ ಇಂಟರೆಸ್ಟಿಂಗ್ ಆಗಿದ್ದು, ಆಡಿಯನ್ಸ್ಗೆ ಥ್ರಿಲ್ಲಿಂಗ್ ಅನುಭವ ಕೊಡುತ್ತದೆ. ನನ್ನ ಪಾತ್ರ ಕೂಡ ಆಡಿಯನ್ಸ್ಗೆ ಇಷ್ಟವಾಗುವಂತಿದೆ. ಮುಂದಿನ ದಿನಗಳಲ್ಲಿ ನನಗೆ ಒಪ್ಪುವಂಥ ಕಥೆಗಳು ಬಂದರೆ ಖಂಡಿತವಾಗಿಯೂ ಇನ್ನಷ್ಟು ಸಿನಿಮಾಗಳನ್ನು ಮಾಡುತ್ತೇನೆ’ ಎಂದರು.
ಇನ್ನು “ಕೋಬ್ರಾ’ ಸಿನಿಮಾದ ಪ್ರಚಾರದ ವೇಳೆ ಪುನೀತ್ ನೆನಪು ಮಾಡಿಕೊಂಡ ವಿಕ್ರಮ್ “ಅಪ್ಪು ಕಳೆದುಕೊಂಡಿರೋದು ಸಿನಿಮಾ ಇಂಡಸ್ಟ್ರೀಗೆ ನಷ್ಟವಾಗಿದೆ. ಅವರು ಎಲ್ಲರಿಗೂ ಸ್ಫೂರ್ತಿ ನೀಡುವಂಥ ನಟ. ವೈಯಕ್ತಿಕವಾಗಿ ನನಗೂ ತುಂಬ ಇಷ್ಟವಾಗಿದ್ದ ವ್ಯಕ್ತಿಯಾಗಿದ್ದರು’ ಎಂದರು.
“ಕೋಬ್ರಾ’ ಸಿನಿಮಾದ ಬಗ್ಗೆ ಮಾತನಾಡಿದ ವಿಕ್ರಮ್, “ಇದೊಂದು ಕಂಪ್ಲೀಟ್ ಆ್ಯಕ್ಷನ್-ಥ್ರಿಲ್ಲರ್ ಕಂ ಸೈನ್ಸ್- ಫಿಕ್ಷನ್ ಸಿನಿಮಾ. ಇದರಲ್ಲಿ 9 ಗೆಟಪ್ನಲ್ಲಿ ಕಾಣಿಸಿಕೊಂಡಿದ್ದೇನೆ. ಕನ್ನಡದಲ್ಲೂ ಈ ಸಿನಿಮಾಗೆ ನಾನೇ ಡಬ್ ಮಾಡಿದ್ದೇನೆ. ಕನ್ನಡದಲ್ಲಿ ಯಶ್ ನನಗೆ ಒಳ್ಳೆಯ ಫ್ರೆಂಡ್. ಕನ್ನಡದಲ್ಲಿ ಲೂಸಿಯಾ ಪವನ್ ಹೇಳಿದ ಕಥೆ ಇಷ್ಟವಾಗಿದ್ದು ಅವರ ಜೊತೆ ಸಿನಿಮಾ ಮಾಡುತ್ತೇನೆ’ ಎಂದು ತಿಳಿಸಿದರು.
“ಕೋಬ್ರಾ’ ವಿಕ್ರಮ್ ಅಭಿನಯದ 58ನೇ ಸಿನಿಮಾವಾಗಿದ್ದು, ಖ್ಯಾತ ಕ್ರಿಕೆಟಿಗ ಇಫ್ರಾನ್ ಪಠಾಣ್ ಕೂಡ “ಕೋಬ್ರಾ’ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಕಾಣಸಿಕೊಂಡಿದ್ದಾರೆ. ಎ.ಆರ್, ರೆಹಮಾನ್ ಸಂಗೀತ ಸಂಯೋಜನೆಯ “ಕೋಬ್ರಾ’ ಸಿನಿಮಾವನ್ನು ಅಜಯ್ ಜ್ಞಾನಮುತ್ತು ನಿರ್ದೇಶಿಸಿದ್ದು, ಲಲಿತ್ ಕುಮಾರ್ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್