ನಾಗತಿಹಳ್ಳಿ ಶಿಷ್ಯರ ಸಿನಿಯಾನ

ಮೇಷ್ಟ್ರು ಪಾಠ ಕಲಿತವರ ನಾಲ್ಕು ಚಿತ್ರಗಳು

Team Udayavani, Apr 22, 2019, 3:00 AM IST

nagatiha

ನಿರ್ದೇಶಕ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಶಿಷ್ಯಂದಿರ ನಾಲ್ಕು ಚಿತ್ರಗಳು ಈಗ ಬಿಡುಗಡೆಗೆ ಸಜ್ಜಾಗಿವೆ. ನಾಗತಿಹಳ್ಳಿ ಚಂದ್ರಶೇಖರ್‌ ಅವರ ಜೊತೆಗೆ ಕೆಲಸ ಕಲಿತ, ಅವರ ಚಿತ್ರಗಳಲ್ಲಿ ದುಡಿದ, ಅವರ ಟೆಂಟ್‌ ಶಾಲೆಯಲ್ಲಿ ತರಬೇತಿ ಪಡೆದ ಶಿಷ್ಯಂದಿರು ಸದ್ದಿಲ್ಲದೆಯೇ ಸಿನಿಮಾ ಮಾಡಿ ಅದನ್ನು ಪ್ರೇಕ್ಷಕರ ಮುಂದೆ ತರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ನಾಗತಿಹಳ್ಳಿ ತಮ್ಮ ಶಿಷ್ಯಂದಿರ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಹೊಸಬರ ಚಿತ್ರಗಳಿಗೆ ಬೆಂಬಲ ಬೇಕು ಎಂಬುದನ್ನೂ ಸಾರಿದ್ದಾರೆ. ಈಗಿನ ಪ್ರತಿಭಾವಂತರ ಆಸೆಗಳು, ಅವರ ಸಿನಿಮಾಗಳ ಮಾರುಕಟ್ಟೆ ಕುರಿತು ನಾಗತಿಹಳ್ಳಿ ಮಾತನಾಡಿದ್ದಾರೆ. “ಈಗಂತೂ ಕನ್ನಡ ಚಿತ್ರರಂಗದಲ್ಲಿ ಹೊಸಬರೇ ಹೆಚ್ಚಾಗಿದ್ದಾರೆ.

ಆ ಹೊಸಬರ ಸಾಲಲ್ಲಿ ನನ್ನ ಶಿಷ್ಯಂದಿರ ಚಿತ್ರಗಳೂ ಸೇರಿವೆ ಎಂಬುದು ಸಂತಸದ ವಿಷಯ. ಹೊಸಬರಲ್ಲಿ ಪ್ರತಿಭೆ ಇದೆ. ಆದರೆ, ಜನರು ಯಾವುದನ್ನು ಸ್ವೀಕರಿಸುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹಾಗೆ ಹೇಳ್ಳೋಕೆ ನಾನು ಜ್ಯೋತಿಷಿಯೂ ಅಲ್ಲ. ಒಬ್ಬ ಗುರುವಾಗಿ, ಒಂದು ಶಾಲೆ ನಡೆಸುವವನಾಗಿ ಅದೊಂದು ರೀತಿಯ ಧರ್ಮ ಸಂಕಟ ನನಗೆ.

ಆದರೂ, ನನ್ನ ಶಿಷ್ಯಂದಿರ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿರುವುದು ಖುಷಿಯನ್ನು ಹೆಚ್ಚಿಸಿದೆ. “ಕಾರ್ಮೋಡ ಸರಿದು’, “ರತ್ನ ಮಂಜರಿ’, ಡೈಮೆಂಡ್‌ ಕ್ರಾಸ್‌’ ಮತ್ತು “ಮೈಸೂರು ಮಸಾಲ’ ಈ ನಾಲ್ಕು ಚಿತ್ರಗಳು ನನ್ನ ಶಿಷ್ಯಂದಿರಿಂದ ಮೂಡಿಬಂದ ಚಿತ್ರಗಳು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. “ರತ್ನಮಂಜರಿ’ ಚಿತ್ರದ ನಾಯಕ, ನಾಯಕಿ ನನ್ನ ಶಾಲೆಯಲ್ಲಿ ಓದಿದವರು.

ಹಾಗೆಯೇ, “ಕಾರ್ಮೋಡ ಸರಿದು’ ಚಿತ್ರದ ನಿರ್ದೇಶಕ ಉದಯ್‌ ಮತ್ತು ನಾಯಕ ಮಂಜು ಕೂಡ ನನ್ನ ಚಿತ್ರದಲ್ಲಿ ಕೆಲಸ ಮಾಡಿದವರು. ಇವರಷ್ಟೇ ಅಲ್ಲ, ಇಲ್ಲಿ ಅನೇಕ ಹೊಸ ಪ್ರತಿಭೆಗಳ ಚಿತ್ರಗಳೂ ಬರುತ್ತಿವೆ. ಅವರಿಗೆಲ್ಲಾ ಒಂದು ಕಿವಿಮಾತು. ಇಲ್ಲಿ ಯಾರೂ ಕೈ ಹಿಡಿದು ನಡೆಸಲ್ಲ. ನಿಮ್ಮ ಕಾಲುಗಳ ಮೇಲೆ ನೀವೆ ನಡೆಯಬೇಕು. ನಾವು ಕೂಡ ಆರಂಭದಲ್ಲಿ ಶುರುಮಾಡಿದ್ದು ಹಾಗೇನೆ.

ಇಲ್ಲಿ ಮುಖ್ಯವಾಗಿ ಕೈ ಹಿಡಿಯಬೇಕಿದ್ದು ಪ್ರೇಕ್ಷಕ. ಜೊತೆಗೆ ಪೂರಕವಾಗಿ ಉದ್ಯಮ ಮತ್ತು ಮಾಧ್ಯಮ ಬೆಂಬಲವೂ ಬೇಕು’ ಎನ್ನುತ್ತಾರೆ ನಾಗತಿಹಳ್ಳಿ ಚಂದ್ರಶೇಖರ್‌. ಹೊಸಬರು ತುಂಬಾ ಚೆನ್ನಾಗಿ ಕಥೆ ಹೇಳುತ್ತಾರೆ. ಆದರೆ, ಅವರಿಗೆ ಯಾರು ಹಣ ಹಾಕುತ್ತಾರೆ? ಕೆಲವೇ ಕೆಲವು ಅದೃಷ್ಟವಂತರಿಗೆ ಮಾತ್ರ ಕುಟುಂಬದ ಬೆಂಬಲ ಇರುತ್ತೆ, ಶ್ರೀಮಂತ ಅಪ್ಪ, ಅಮ್ಮ ಇರುತ್ತಾರೆ.

ಗಾಡ್‌ಫಾದರ್‌ ಕೂಡ ಇರುತ್ತಾರೆ. ಆದರೆ, ಮಿಕ್ಕವರ ಕನಸುಗಳ ಗತಿ ಏನು? ಆ ಕನಸುಗಳನ್ನು ಪೋಷಿಸುವುದಾದರೂ ಹೇಗೆ? ಎನ್ನುವುದು ನಾಗತಿಹಳ್ಳಿ ಚಂದ್ರಶೇಖರ್‌ ಅವರ ಪ್ರಶ್ನೆ. “ಒಂದು ಕಾಲ ಘಟ್ಟದಲ್ಲಿ ಕನಸುಗಳು ನಿಜ ಆಗದಿದ್ದರೆ, ಅವರ ಬದುಕಿನ ಮುಖ್ಯವಾದ ಕ್ಷಣ, ತಾರುಣ್ಯ ಎಲ್ಲವೂ ಹೊರಟು ಹೋಗುತ್ತೆ. ಹೀಗಾಗಿ ಅದೊಂದು ಧರ್ಮ ಸಂಕಟದ ಪ್ರಶ್ನೆ.

ಬೇಡ ಎನ್ನುವುದಕ್ಕೆ ಮನಸ್ಸು ಆಗಲ್ಲ. ಬೇಕು ಅನ್ನುವುದಕ್ಕೆ ಭಯ ಆಗುತ್ತೆ’ ಎನ್ನುವನಾಗತಿಹಳ್ಳಿ, “ಇಲ್ಲಿ ಹತ್ತು ಕೋಟಿ ಖರ್ಚು ಮಾಡೋರಿಗೂ ಸಿನಿಮಾ ಒಂದು ಜೂಜು. ಅದೇ ಒಂದು ಕೋಟಿ ಖರ್ಚು ಮಾಡೋರಿಗೂ ಜೂಜೇ. ಜೂಜು ಅನ್ನೋದು ಕಾಮನ್‌ ಪದವಾಗಿದೆ. ಎಲ್ಲರೂ ಅವರದೇ ಆತಂಕದಲ್ಲಿರುತ್ತಾರೆ.

ಚಿತ್ರ ಮಾಡುವಾಗಿನಿಂದ ಹಿಡಿದು, ಬಿಡುಗಡೆಗೆ ಚಿತ್ರಮಂದಿರಗಳ ಹುಡುಕಾಟ, ಆ ತಯಾರಿ ಎಲ್ಲವೂ ಒಂದು ರೀತಿ ಒತ್ತಡ, ಗೊಂದಲದಲ್ಲೇ ಕೆಲಸ ಮಾಡಬೇಕು. ಇವೆಲ್ಲವನ್ನು ಒಪ್ಪಿಕೊಂಡೇ ಇಲ್ಲಿ ಕೆಲಸ ಮಾಡಬೇಕು. ಇಂತಹ ಜಟಿಲವಾದ ಪ್ರಯಾಣದ ಮೊದಲ ಹೆಜ್ಜೆ ಇಟ್ಟುಕೊಂಡು ಹೊರಟಿರುವ ಪ್ರತಿಭೆಗಳಿಗೆ ಒಳ್ಳೆಯದಾಗಲಿ’ ಎಂದು ಶುಭಹಾರೈಸುತ್ತಾರೆ ನಾಗತಿಹಳ್ಳಿ.

ಟಾಪ್ ನ್ಯೂಸ್

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.