ಹೊಟ್ಟೆಪಾಡಿಗೆ ಬಣ್ಣ ಹಚ್ಕೊಂಡೆ


Team Udayavani, Apr 24, 2018, 2:33 PM IST

hottepadige.jpg

“ಗಂಡ ಸರಿ ಇಲ್ಲ. ಹೊಟ್ಟೆ ಪಾಡು ನಡೆಯಲೇಬೇಕು. ಅದಕ್ಕಾಗಿ ಬಣ್ಣ ಹಚ್ಚಿಕೊಂಡೇ ಬದುಕಿನ ಬಂಡಿ ಸಾಗಿಸಬೇಕು…’ ಇದು ನಟಿ ಅನಿತಾಭಟ್‌ ಹೇಳಿಕೊಂಡ ಮಾತು! ಹಾಗಂತ, ಇದು ರಿಯಲ್‌ ಲೈಫ್ನ ಮಾತಲ್ಲ. ರೀಲ್‌ ಲೈಫ್ನ ಮಾತು. ಹೌದು, ಅನಿತಾಭಟ್‌ ಇದೇ ಮೊದಲ ಬಾರಿಗೆ ಗ್ಲಾಮರ್‌ನಿಂದ ಹೊರ ಬಂದಿದ್ದಾರೆ. ಅಷ್ಟೇ ಆಗಿದ್ದರೆ, ಇಷ್ಟೊಂದು ಹೇಳುವ ಅಗತ್ಯವಿರಲಿಲ್ಲ. ಅವರು ವಿತೌಟ್‌ ಮೇಕಪ್‌ನಲ್ಲೇ ಕ್ಯಾಮೆರಾ ಮುಂದೆ ನಿಂತು ನಟಿಸಿದ್ದಾರೆ.

ಆ ಚಿತ್ರದ ಹೆಸರು “ಡೇಸ್‌ ಆಫ್ ಬೋರಾಪುರ’. ಈ ಚಿತ್ರದಲ್ಲಿ ಅನಿತಾಭಟ್‌ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಡ್ರಾಮಾ ಆರ್ಟಿಸ್ಟ್‌. ಅದರಲ್ಲೂ ಇದೇ ಮೊದಲ ಸಲ, ಅಂಥದ್ದೊಂದು ಪಾತ್ರ ನಿರ್ವಹಿಸಿದ್ದಾರೆ. ಅನಿತಾಭಟ್‌ ಅಂದಾಕ್ಷಣ, ಗ್ಲಾಮರ್‌ ನೆನಪಾಗುತ್ತೆ. ಆದರೆ, ಅವರಿಗಿಲ್ಲಿ ನಿರ್ದೇಶಕರು ಪಕ್ಕಾ ಡಿ ಗ್ಲಾಮ್‌ ಪಾತ್ರ ಕೊಟ್ಟಿದ್ದಾರೆ. ಯಾವುದೇ ಮೇಕಪ್‌ ಇಲ್ಲದೆಯೇ ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರಂತೆ.

ಹಾಗಾಗಿ, ಅನಿತಾಭಟ್‌ ಅವರ ಅನೇಕ ಚಿತ್ರಗಳ ಪೈಕಿ “ಡೇಸ್‌ ಆಫ್ ಬೋರಾಪುರ’ ವಿಭಿನ್ನವಾಗಿ ಕಾಣುವ ಚಿತ್ರವಂತೆ. ಇಲ್ಲಿ ಅನಿತಾಭಟ್‌ ಅಷ್ಟೇ ಅಲ್ಲ, ಬಹುತೇಕ ಪಾತ್ರಗಳೂ ಕೂಡ ಮೇಕಪ್‌ ಇಲ್ಲದೆಯೇ ನಟಿಸಿರುವುದು ವಿಶೇಷ. ಇದೊಂದು ತ್ರಿಕೋನ ಪ್ರೇಮಕಥೆವುಳ್ಳ ಚಿತ್ರ. ಅನಿತಾಭಟ್‌ ಇಲ್ಲಿ ಭಗ್ನಪ್ರೇಮಿಯೊಬ್ಬನಿಗೆ ಜೋಡಿಯಾಗಿದ್ದಾರಂತೆ. ಅಂದಹಾಗೆ, ಇಡೀ ಚಿತ್ರದಲ್ಲಿ ತಿರುವು ಕೊಡುವಂತಹ ಪಾತ್ರವೇ ಅವರದ್ದಂತೆ.

ಹೆಣ್ಣು, ಹೊನ್ನು, ಮಣ್ಣು ಈ ಮೂರು ಋಣ ಇರುವವರಿಗೆ ಮಾತ್ರ ಸಿಗುತ್ತೆ ಎಂಬ ಅಂಶ ಚಿತ್ರದ ಹೈಲೈಟ್‌ ಅಂತೆ. ಸಮಾಜ ಹೆಣ್ಣನ್ನು ಹೇಗೆ ನೋಡುತ್ತೆ. ಹೆಣ್ಣು ಮುನಿದರೆ, ಏನೆಲ್ಲಾ ಆಗಿಹೋಗುತ್ತೆ ಎಂಬಂತಹ ಸನ್ನಿವೇಶಗಳು ಚಿತ್ರದಲ್ಲಿ ಗಮನಸೆಳೆಯಲಿವೆ ಎಂಬುದು ಅನಿತಾಭಟ್‌ ಮಾತು. ಇದೇ ಮೊದಲ ಸಲ ಹಳ್ಳಿಸೊಗಡಿನ ಚಿತ್ರ ಮಾಡಿರುವ ಅನಿತಾಭಟ್‌ಗೆ, ಪಾತ್ರವೂ ಹೊಸದಾಗಿದೆಯಂತೆ.

ಮೊದಲು ಚಿತ್ರದ ಕಥೆ, ಪಾತ್ರ ಕೇಳಿದಾಗ, ಸಿನಿಮಾದೊಳಗೆ ಡ್ರಾಮಾ ಆರ್ಟಿಸ್ಟ್‌ ಅಂದಾಗ, ನಾಟಕ ಮಾಡೋದನ್ನೇ ತೋರಿಸಿದರೆ, ಜನರಿಗೆ ಬೋರ್‌ ಆಗೋದಿಲ್ಲವಾ ಎಂಬ ಪ್ರಶ್ನೆ ಎದುರಾಯಿತಂತೆ. ಆದರೆ, ಸಿನಿಮಾ ಚಿತ್ರೀಕರಣ ನಡೆದಾಗಲಷ್ಟೇ, ಆ ಪಾತ್ರದಲ್ಲಿ ಎಷ್ಟೊಂದು ಮಹತ್ವ ಇದೆ ಅಂತ ಗೊತ್ತಾಯ್ತು. ಮಂಡ್ಯ ಸುತ್ತ ಮುತ್ತ ಹೇಗೆ ನಾಟಕ ಮಾಡುತ್ತಾರೋ ಅದೇ ರೀತಿ ನಾಟಕದ ದೃಶ್ಯಗಳು ಮೂಡಿ ಬಂದಿವೆ.

ಡ್ರಾಮಾ ಆರ್ಟಿಸ್ಟ್‌ ಅಂದಾಕ್ಷಣ, ಅವರ ಬದುಕು, ಬವಣೆಯ ಚಿತ್ರಣ ಇಲ್ಲಿದೆ ಎನ್ನುತ್ತಾರೆ ಅನಿತಾಭಟ್‌. ಬಹುತೇಕ ಮಂಡ್ಯ ಸುತ್ತಮುತ್ತಲು ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ಹೊಸಬರೇ ತುಂಬಿಕೊಂಡಿದ್ದು, ಹೊಸಬರ ಜೊತೆ ಕೆಲಸ ಮಾಡಿರುವ ಅನಿತಾಭಟ್‌ಗೆ ಭರವಸೆಯೂ ಇದೆಯಂತೆ.

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 15 ಮಂದಿ ಆರೋಪಿಗಳು ಖುಲಾಸೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.