ಡಿಸೆಂಬರ್‌ 12ಕ್ಕೆ “ಒಡೆಯ’ ದರ್ಶನ?

ಜೋರಾಗಿ ನಡೀತಿದೆ ತಯಾರಿ

Team Udayavani, Nov 14, 2019, 6:04 AM IST

ಡಿಸೆಂಬರ್‌ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಲು ತುದಿಗಾಲಿನಲ್ಲಿ ನಿಂತಿವೆ. ಕನ್ನಡದ ಜೊತೆಗೆ ಪರಭಾಷಾ ಸ್ಟಾರ್‌ ನಟರ ಚಿತ್ರಗಳು ಕೂಡಾ ಬಿಡುಗಡೆಯಾಗಲಿವೆ. ಈಗಾಗಲೇ ರಕ್ಷಿತ್‌ ಶೆಟ್ಟಿ ನಟನೆಯ “ಅವನೇ ಶ್ರೀಮನ್ನಾರಾಯಣ’ ಚಿತ್ರ ಡಿಸೆಂಬರ್‌ 27ಕ್ಕೆ ತೆರೆಕಾಣುವುದಾಗಿ ಅಧಿಕೃತವಾಗಿ ಘೋಷಿಸಿಕೊಂಡಿದೆ. ಇನ್ನು, ಸಲ್ಮಾನ್‌ ಖಾನ್‌ ಅಭಿನಯದ “ದಬಾಂಗ್‌-3′ ಚಿತ್ರ ಡಿಸೆಂಬರ್‌ 20 ರಂದು ಬಿಡುಗಡೆಯಾಗುತ್ತಿದೆ.

ಈ ಚಿತ್ರದಲ್ಲಿ ಸುದೀಪ್‌ ವಿಲನ್‌ ಆಗಿ ನಟಿಸಿದ್ದು, ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಈ ನಡುವೆಯೇ ದರ್ಶನ್‌ ಅಭಿಮಾನಿಗಳಿಗೆ ಒಂದು ಪ್ರಶ್ನೆ ಕಾಡುತ್ತಿತ್ತು. ಅದು “ಒಡೆಯ’ ಚಿತ್ರದ ಬಿಡುಗಡೆ. ದರ್ಶನ್‌ ನಾಯಕರಾಗಿರುವ “ಒಡೆಯ’ ಚಿತ್ರ ಯಾವಾಗ ತೆರೆಗೆ ಬರುತ್ತದೆ ಎಂದು ದರ್ಶನ್‌ ಅಭಿಮಾನಿಗಳು ಕಾಯುತ್ತಿರುವುದು ಸುಳ್ಳಲ್ಲ. ಈಗ ಅದಕ್ಕೆ ಬಹುತೇಕ ಉತ್ತರ ಅಂತಿಮವಾದಂತಿದೆ.

ಗಾಂಧಿನಗರದ ಮೂಲಗಳ ಪ್ರಕಾರ, “ಒಡೆಯ’ ಡಿಸೆಂಬರ್‌ 12 ರಂದು ತೆರೆಕಾಣುತ್ತಿದೆ. ಡಿಸೆಂಬರ್‌ 12 ಗುರುವಾರದಂದು ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಭರದಿಂದ ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಚಿತ್ರದ ಕೆಲಸ ಕಾರ್ಯಗಳು ಕೂಡ ಹಗಲು ರಾತ್ರಿ ನಡೆಯುತ್ತಿದೆ. ಒಂದು ವೇಳೆ ಚಿತ್ರದ ಕೆಲಸ ಕಾರ್ಯಗಳು ಅಂದುಕೊಂಡಿದ್ದಕ್ಕಿಂತ ಮೊದಲೇ ಮುಗಿದರೆ ಒಂದು ವಾರ ಮುಂಚೆ “ಒಡೆಯ’ ಬಿಡುಗಡೆಯಾದರೂ ಅಚ್ಚರಿಯಿಲ್ಲ.

ಈಗಾಗಲೇ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ನವೆಂಬರ್‌ ಕೊನೆ ಅಥವಾ ಡಿಸೆಂಬರ್‌ ಮೊದಲ ವಾರದಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ. ಸಂದೇಶ್‌ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿರುವ ಈ ಚಿತ್ರವನ್ನು ಎಂ.ಡಿ.ಶ್ರೀಧರ್‌ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸನಾ (ರಾಘವಿ) ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ ಹಾಗೂ ಹಾಡನ್ನು ಅಭಿಮಾನಿಗಳು ಇಷ್ಟಪಡುವ ಮೂಲಕ ಚಿತ್ರತಂಡದ ವಿಶ್ವಾಸವನ್ನು ಹೆಚ್ಚಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ