ಮಾರಾಟಕ್ಕಿಟ್ಟಿರೋ ಮನೆಯಲ್ಲಿ ದೆವ್ವವಿದೆಯಂತೆ!

Team Udayavani, Nov 14, 2019, 7:40 PM IST

ಕನ್ನಡ ಚಿತ್ರರಂಗದಲ್ಲಿ ಹಾರರ್ ಜಾನರಿನ ಚಿತ್ರಗಳಿಗೆ ಬಹು ಬೇಡಿಕೆ ಇದೆ. ಇಂಥಾ ಹಾರರ್ ಸಿನಿಮಾ ನೋಡೋ ಕ್ರೇಜ್ ಅಂತೂ ಎಲ್ಲ ವರ್ಗಗಳ ಪ್ರೇಕ್ಷಕರಲ್ಲಿಯೂ ಇದ್ದೇ ಇದೆ. ಇದರೊಂದಿಗೆ ಕಾಮಿಡಿ ಕಚಗುಳಿ ಇದ್ದರಂತೂ ಆ ಗೆಲುವಿಗೆ ಬೇರೆಯದ್ದೇ ಓಘವಿರುತ್ತದೆ. ಈ ಹಿಂದೆ ಕೆಲವೇ ಕೆಲ ಕಾಮಿಡಿ ಕಂ ಹಾರರ್ ಚಿತ್ರಗಳು ತೆರೆ ಕಂಡಿವೆ. ಭಾರೀ ಗೆಲುವನ್ನೂ ದಾಖಲಿಸಿವೆ. ಮತ್ತೆ ಇಂಥಾ ಸಿನಿಮಾವೊಂದನ್ನು ಕಣ್ತುಂಬಿಕೊಳ್ಳಲು ದೊಡ್ಡದೊಂದು ಪ್ರೇಕ್ಷಕ ವರ್ಗ ಕಾದು ಕೂತಿರುವಾಗಲೇ ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಚಿತ್ರ ತೆರೆಗಾಣಲು ರೆಡಿಯಾಗಿದೆ. ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆ ಹುಟ್ಟಿಸಿರೋ ಈ ಸಿನಿಮಾ ಈ ವಾರವೇ ರಾಜ್ಯಾದ್ಯಂತ ತೆರೆಗಾಣಲಿದೆ.

ಎಸ್.ವಿ ಬಾಬು ನಿರ್ಮಾಣದಲ್ಲಿ ಮೂಡಿ ಬಂದಿರೋ ಮನೆ ಮಾರಾಟಕ್ಕಿದೆ ಚಿತ್ರ ಟ್ರೇಲರ್ ಮೂಲಕವೇ ಹಾರರ್ ಸ್ವರೂಪದಲ್ಲಿ ಬೆಚ್ಚಿ ಬೀಳಿಸುತ್ತಾ ಕಾಮಿಡಿ ಕಿಕ್‌ನೊಂದಿಗೆ ಕಚಗುಳಿ ಇಟ್ಟಿದೆ. ಕೆಲವೇ ಕೆಲ ನಿಮಿಷಗಳ ಟ್ರೇಲರ್ ಇಷ್ಟೊಂದು ಚೆನ್ನಾಗಿರುವಾಗ ಇಡೀ ಚಿತ್ರ ಇನ್ನೆಷ್ಟು ಮಜವಾಗಿರ ಬಹುದೆಂಬ ಕ್ಯೂರಿಯಾಸಿಟಿಯಂತೂ ಎಲ್ಲ ಪ್ರೇಕ್ಷಕರಲ್ಲಿಯೂ ಮೂಡಿಕೊಂಡಿದೆ. ಇದುವೇ ಈ ಸಿನಿಮಾದ ಅಸಲೀ ಶಕ್ತಿ. ಅದುವೇ ಈ ವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದು ಗ್ರ್ಯಾಂಡ್ ಓಪನಿಂಗ್ ಸಿಗೋ ಭರವಸೆ ಚಿತ್ರತಂಡದಲ್ಲಿದೆ.

ಮಾರಾಟಕ್ಕಿಟ್ಟಿರೋ ಮನೆಯೊಳಗೆ ಭಯಾನಕ ದೆವ್ವಗಳಿರುವಂತೆಯೇ ಅದರೊಳಗೇ ಕಾಮಿಡಿ ನಟರ ದಂಡೂ ಇದೆ. ಕನ್ನಡ ಚಿತ್ರರಂಗದ ದಿಗ್ಗಜ ಹಾಸ್ಯ ಕಲಾವಿದರೆಲ್ಲ ಈ ಸಿನಿಮಾ ಮೂಲಕ ಒಂದಾಗಿದ್ದಾರೆ. ಸಾಧು ಕೋಕಿಲಾ, ಕುರಿ ಪ್ರತಾಪ್, ಚಿಕ್ಕಣ್ಣ, ರವಿಶಂಕರ್ ಗೌಡ ವಿಶಿಷ್ಟವಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇವರೆಲ್ಲ ಬೇರೆ ಬೇರೆ ಸಿನಿಮಾಗಳಲ್ಲಿ ಒಂದಷ್ಟು ಸೀನುಗಳಲ್ಲಿ ಸುಳಿದು ಹೋದರೂ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಆದರೆ ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಆರಂಭದಿಂದ ಕ್ಲೈಮಾಕ್ಸ್ ವರೆಗೂ ಈ ಕಲಾವಿದರು ನಗಿಸಲಿದ್ದಾರೆ. ಹಾಗಿದ್ದ ಮೇಲೆ ಭೂತ ಚೇಷ್ಟೆಯ ಈ ಸಿನಿಮಾದಲ್ಲಿ ಭರಪೂರ ಕಾಮಿಡಿ ಇದೆ ಎಂದೇ ಅರ್ಥ. ಅದೆಲ್ಲವೂ ಈವಾರವೇ ನಿಮ್ಮ ಮುಂದೆ ಅನಾವರಣಗೊಳ್ಳಲಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ